ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಜಾಗೃತಿ ಕಲಾ ಜಾಥಾಕ್ಕೆ ಚಾಲನೆ

Last Updated 3 ಫೆಬ್ರುವರಿ 2011, 18:55 IST
ಅಕ್ಷರ ಗಾತ್ರ


ಮದ್ದೂರು: ಇಲ್ಲಿಗೆ ಸಮೀಪದ ಸಾದೊಳಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಅಧ್ಯಯನ ಟ್ರಸ್ಟ್ ಮತ್ತು ಚಿಂತನಾ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಏರ್ಪಡಿಸಿದ್ದ ಜನ ಜಾಗೃತಿ ಕಲಾ ಜಾಥಾಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಹೇಶ್ ಕುಮಾರ್ ಗುರುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಜಾಥಾ ಸಂಚರಿಸಲಿದ್ದು, ಪ್ರತಿದಿನ ಎರಡು ಗ್ರಾಪಂ ಆವರಣಗಳಲ್ಲಿ ಬೀದಿ ನಾಟಕ, ಗೀತ ರೂಪಕಗಳನ್ನು ಪ್ರದರ್ಶಿಸುವ ಮೂಲಕ ಜನರಲ್ಲಿ ಸ್ವಚ್ಛತೆ ಹಾಗೂ ಆರೋಗ್ಯದ ಬಗೆಗೆ ಜಾಗೃತಿ ಮೂಡಿ ಸಲು ಯೋಜಿಸಲಾಗಿದೆ ಎಂದರು.

ಗ್ರಾ.ಪಂ.ಅಧ್ಯಕ್ಷ ಬೊಮ್ಮ ಲಿಂಗಾಚಾರಿ ಅಧ್ಯಕ್ಷತೆ ವಹಿಸಿದ್ದರು. ವೈದ್ಯ ಡಾ.ಸುದರ್ಶನ್, ಗ್ರಾ.ಪಂ.  ಕಾರ್ಯದರ್ಶಿ ಮಹದೇವು, ಸದಸ್ಯರಾದ ಜಯಲಕ್ಷ್ಮಿ, ಲಕ್ಷ್ಮಮ್ಮ, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ  ಕಾರ್ಯದರ್ಶಿ ಯತೀಶ್, ಸದಸ್ಯೆ ಜಯಮ್ಮ, ತಾಲ್ಲೂಕು ಸಂಯೋಜಕ ಅಂಬರಹಳ್ಳಿಸ್ವಾಮಿ ಇನ್ನಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT