ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಧನ ಬಡವರ ಭಾಗ್ಯಲಕ್ಷ್ಮಿಯೇ?

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಜಾಗತೀಕರಣದ ಅಬ್ಬರದ ಪ್ರಸ್ತುತ ಸಂದರ್ಭದಲ್ಲಿ ಮಾಹಿತಿ ಕೊರತೆ ಎದು ರಿಸುತ್ತಿರುವ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಹಲವು ಜ್ಞಾನ ಕೌಶಲಗಳ ಅಗತ್ಯವಿದೆ. ಅಂತಹ ವುಗಳಲ್ಲಿ ವಿತ್ತೀಯ ಸಾಕ್ಷರತೆಯೂ ಸಹ ಒಂದು. ಆದಾಯ, ಖರ್ಚು, ಉಳಿತಾಯ, ಹೂಡಿಕೆ, ವಿಮೆ, ಬ್ಯಾಂಕಿಂಗ್ ವ್ಯವಸ್ಥೆ, ಆರ್ಥಿಕ ಸಬಲೀಕರಣಕ್ಕಾಗಿ ಇರುವ ಸರ್ಕಾರದ ಯೋಜನೆಗಳು, ಅವುಗಳ ಉಪಯೋಗ ಮೊದಲಾದ ಅಂಶಗಳ ಬಗ್ಗೆ ಸಾಮಾನ್ಯ ಜ್ಞಾನ ಪಡೆಯುವುದೇ ಆರ್ಥಿಕ ಸಾಕ್ಷರತೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ ಪ್ರಧಾನ ಮಂತ್ರಿ ಜನ-ಧನ ಯೋಜನೆ (PMJDY) ಮಹತ್ವದೆನಿಸುತ್ತದೆ.

ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗೆ ಉಳಿದ ಜನರನ್ನು ಒಳಗೊಳ್ಳುವಂತೆ ಮಾಡುವುದು, ಅವರು ಹಣಕಾಸು ಸೇವೆಗಳನ್ನು ಪಡೆಯುವಂತೆ ಮಾಡುವುದು ಅಂದರೆ, ಬ್ಯಾಂಕ್ ಸೌಲಭ್ಯಗಳು, ಉಳಿತಾಯ ಮತ್ತು ಠೇವಣಿ ಖಾತೆಗಳು, ಸಾಲ ಸೌಲಭ್ಯ, ವಿಮೆ ಮತ್ತು ಪಿಂಚಣಿ ಸೌಲಭ್ಯ ಪಡೆಯುವಲ್ಲಿ ಸಶಕ್ತರನ್ನಾಗಿ ಮಾಡು ವುದು ಜನಧನ ಯೋಜನೆಯ ಉದ್ದೇಶ.

ಈ ಹಿಂದೆ 2000ಕ್ಕಿಂತ ಹೆಚ್ಚು ಜನಸಂಖ್ಯೆಯ ಗ್ರಾಮೀಣ ಪ್ರದೇಶದಲ್ಲಿ ವಿತ್ತೀಯ ಸೇರ್ಪಡೆ ಉದ್ದೇಶಕ್ಕಾಗಿ ‘ಸ್ವಾಭಿಮಾನ್’ ಯೋಜನೆ ಜಾರಿಯ ಲ್ಲಿತ್ತು. ಆದರೆ ಇದು ವ್ಯಾಪಕವಾಗಿರಲಿಲ್ಲ, ನಗರ ಪ್ರದೇಶದವರಿಗೆ ಲಭ್ಯವಿರಲಿಲ್ಲ ಮತ್ತು ಪರಿಣಾಮ ಕಾರಿಯೂ ಆಗಿರಲಿಲ್ಲ. ಜನಧನ ಯೋಜನೆ ದೇಶದ ಎಲ್ಲ ಜನರನ್ನೂ ಒಳಗೊಂಡಿದೆ.

2014ರ ಆಗಸ್ಟ್ 28ರಂದು ಆರಂಭವಾದ ಈ ಯೋಜನೆಯ ಧ್ಯೇಯವಾಕ್ಯ ‘ಮೇರಾ ಖಾತಾ-ಭಾಗ್ಯ ವಿಧಾತಾ’ ಎಂಬುದಾಗಿದೆ. ಈ ಯೋಜನೆ ಮತ್ತು ವೈಶಿಷ್ಟ್ಯಗಳೆಂದರೆ....

ಯಾವುದೇ ಕನಿಷ್ಠ ಮೊತ್ತವಿಲ್ಲದೇ ಪ್ರತಿಯೊ ಬ್ಬರೂ ಬ್ಯಾಂಕ್ ಖಾತೆ ತೆರೆಯಬಹುದು. ಖಾತೆ ತೆರೆಯಲು ಯಾವುದೇ ಶುಲ್ಕವೂ ಇರುವುದಿಲ್ಲ. ಪ್ರತಿಯೊಬ್ಬರೂ ಉಳಿತಾಯದ ಮಾರ್ಗೋಪಾಯ ಕಂಡುಕೊಳ್ಳಬಹುದು. ಬಡವರು ಲೇವಾದೇವಿ ಗಾರರಿಂದ ಸಾಲ ಪಡೆದು ಹೆಚ್ಚು ಬಡ್ಡಿ ನೀಡಿ ಬಡತನದಲ್ಲೇ ಬಳಲುವುದರಿಂದ, ಅಧಿಕ ಬಡ್ಡಿ ಸಾಲದ ಕೂಪದಿಂದ ಸುಲಭದಲ್ಲಿ ಬಿಡುಗಡೆ ಪಡೆ ಯಬಹುದು. ಮನೆಯಲ್ಲಿ ಅಸುರಕ್ಷಿತವಾಗಿ ಹಣ ಇಟ್ಟುಕೊಳ್ಳುವುದಕ್ಕೆ ಬದಲಾಗಿ ಸುರಕ್ಷಿತವಾಗಿ ಬ್ಯಾಂಕ್‌ನಲ್ಲಿ ಇಡಬಹುದು. ಇಟ್ಟ ಹಣಕ್ಕೆ ಬಡ್ಡಿಯನ್ನೂ ಪಡೆಯಬಹುದು.

ರೂಪೇ ಡೆಬಿಟ್ ಕಾರ್ಡ್
ರೂಪೇ (Rupay) ಡೆಬಿಟ್ ಕಾರ್ಡ್ ಸೌಲಭ್ಯ ಪಡೆಯಬಹುದು. ವೀಸಾ ಮತ್ತು ಮಾಸ್ಟರ್ ಕಾರ್ಡ್‌ಗಳಿಗೆ ಪರ್ಯಾಯವಾಗಿ ಆರಂಭಿಸಿರುವ ಭಾರತೀಯ ಡೆಬಿಟ್ ಕಾರ್ಡ್ ಇದಾಗಿದೆ. ಆದರೆ 45 ದಿನಗಳಲ್ಲಿ ಒಮ್ಮೆಯಾದರೂ ಇದನ್ನು ಬಳಸ ಬೇಕಾಗಿರುತ್ತದೆ.
ಎಲ್ಲ ಖಾತೆದಾರರಿಗೂ ಒಂದು ಲಕ್ಷದವರೆಗೆ ಅಪಘಾತ ವಿಮೆ ಮತ್ತು ಮೂವತ್ತು ಸಾವಿರದ ವರೆಗೆ ಜೀವವಿಮೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ನೇರ ಸೌಲಭ್ಯ ವರ್ಗಾವಣೆಗೆ ಇದು ಸಹಕಾರಿಯಾ ಗುತ್ತದೆ. ಪಿಂಚಣಿ ಮತ್ತು ವಿಮಾ ಸೌಲಭ್ಯ ಯೋಜನೆಗಳ ಲಾಭ ಪಡೆಯಲು ಅನುಕೂಲ ವಾಗುತ್ತದೆ.

ಖಾತೆಯಲ್ಲಿ ಹಣವಿಲ್ಲದಿದ್ದರೂ ಅಗತ್ಯವಿದ್ದಾಗ ರೂ.5000ದವರೆಗೆ ಹಣ ಪಡೆಯಬಹುದು (ಓವರ್‌ ಡ್ರಾಫ್ಟ್‌). ಆದರೆ ಪ್ರತಿ ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಈ ಅವಕಾಶ. ಕುಟುಂಬದ ಮಹಿಳಾ ಸದಸ್ಯರಿಗೆ ಆದ್ಯತೆ. ಸರಿಯಾದ ಸಮಯಕ್ಕೆ ಬಡ್ಡಿ ಸಮೇತ ಮರುಪಾವತಿ ಮಾಡಿದರೆ ರೂ.5 ಸಾವಿರದ ಮಿತಿ ಹೆಚ್ಚಿಸಿಕೊಳ್ಳಬಹುದು. ಆದರೆ ಈ ಸೌಲಭ್ಯ ಖಾತೆ ನಿರ್ವಹಣೆ ತೃಪ್ತಿಕರವಾಗಿದ್ದರೆ ಮಾತ್ರ ಖಾತೆ ತೆರೆದ ಆರು ತಿಂಗಳ ನಂತರ ದೊರೆಯುತ್ತದೆ.

10 ವರ್ಷ ಮೇಲ್ಪಟ್ಟ ವಯಸ್ಸಿನವರು ಜನಧನ ಯೋಜನೆ ಖಾತೆ ತೆರೆಯಬಹುದು. ಅನಕ್ಷರಸ್ಥರಿಗೆ ರೂಪೇ ಡೆಬಿಟ್ ಕಾರ್ಡ್ ವ್ಯವಹಾರ ಕಠಿಣವಾಗಿ ರುವುದರಿಂದ ಅದನ್ನು ನೀಡುವಾಗ ಅದರ ಸುರಕ್ಷತೆ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರು  ಮಾರ್ಗ ದರ್ಶನ ನೀಡುತ್ತಾರೆ. ಜನಧನ ಯೋಜನೆಯಲ್ಲಿ ಜಂಟಿ ಖಾತೆ ಸಹ ತೆರೆಯಬಹುದು. ಯಾವುದೇ ಶಾಖೆಯಲ್ಲಾದರೂ ಖಾತೆ ತೆರೆಯಬಹುದು. ಬ್ಯಾಂಕ್‌ನ ಒಂದು ಶಾಖೆಯಿಂದ ಬೇರೊಂದು ಶಾಖೆಗೆ ವರ್ಗಾವಣೆ ಮಾಡಿಸಿಕೊಳ್ಳಬಹುದು. ದೇಶದ ಯಾವ ಬ್ಯಾಂಕ್ ಶಾಖೆಯ ಖಾತೆಗಾದರೂ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು.

ಈಗಾಗಲೇ ಯಾವುದೇ ಬ್ಯಾಂಕಿನಲ್ಲಿ ಖಾತೆ ಇರುವವರು ಹೊಸದಾತಿ ಜನಧನ ಖಾತೆ ತೆರೆ ಯವ ಅವಶ್ಯಕತೆ ಇರುವುದಿಲ್ಲ. ಇರುವ ಖಾತೆಗೆ ರೂಪೇ ಕಾರ್ಡ್, ವಿಮಾ ಸೌಲಭ್ಯ ವಿಸ್ತರಿಸಲಾಗು ತ್ತದೆ. ಅವರ ಬ್ಯಾಂಕ್ ವ್ಯವಹಾರ ತೃಪ್ತಿಕರವಾಗಿ ದ್ದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

ಜನಧನ ಖಾತೆಗೆ ಚೆಕ್ ಸೌಲಭ್ಯ ಪಡೆಯ
ಬಹುದು. ಆದರೆ ಖಾತೆಯಲ್ಲಿ  ಕನಿಷ್ಠ ಮೊತ್ತ ಇರು ವಂತೆ ನೋಡಿಕೊಳ್ಳಬೇಕು. ಈ ಉಳಿತಾಯ ಖಾತೆ ಯಲ್ಲಿ ಇಡುವ ಹಣಕ್ಕೆ ವಾರ್ಷಿಕ ಶೇ 4ರ ಬಡ್ಡಿ ನೀಡಲಾಗುತ್ತದೆ. ಓವರ್ ಡ್ರಾಫ್ಟ್ ಸೌಲಭ್ಯಕ್ಕೆ ಶೇ 12ರಷ್ಟು ಬಡ್ಡಿ ವಿಧಿಸಲಾಗುತ್ತದೆ.

ಜನಧನ ಅರಿವು ಶಿಬಿರ
ರಾಷ್ಟ್ರೀಕೃತ ಬ್ಯಾಂಕ್‌ಗಳು ಜನಧನ ಬಗ್ಗೆ ಪ್ರತಿ ಶನಿವಾರ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಶಿಬಿರ ಗಳನ್ನು ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಬ್ಯಾಂಕ್ ಶಾಖೆಗಳಿಲ್ಲದ ಕಡೆ ಬ್ಯಾಂಕ್ ಸೇವೆ ನೀಡಲು ಬ್ಯಾಂಕ್ ಮಿತ್ರರಿರುತ್ತಾರೆ. ಅವರ ಸಹಾಯದಿಂದ ಸಹ ಜನಧನ ಖಾತೆ ತೆರೆಯ ಬಹುದು. ಸಾಕ್ಷರ ಭಾರತ ಕಾರ್ಯಕ್ರಮದ ಕಲಿಕಾರ್ಥಿಗಳು ಮತ್ತು ನವಸಾಕ್ಷರರು ಗ್ರಾಮ ಪಂಚಾಯಿತಿ ಲೋಕ ಶಿಕ್ಷಣ ಕೇಂದ್ರದ ಪ್ರೇರಕರ ಸಹಕಾರದಿಂದ ಖಾತೆ ತೆರೆಯಬಹುದು.

ಜನಧನ ಖಾತೆ ತೆರೆಯಲು ತೆರೆಯಲು ಆಧಾರ್ ಕಾರ್ಡ್ ಇದ್ದರೆ ಸಾಕು. ಬೇರಾವ ದಾಖಲೆಗಳ ಅವಶ್ಯಕತೆ ಇಲ್ಲ. ವಿಳಾಸ ಬದಲಾಗಿದ್ದಲ್ಲಿ ಸ್ವದೃಢೀಕರಣ ಸಾಕು.

ಆಧಾರ್ ಕಾರ್ಡ್ ಇಲ್ಲದಿದ್ದರೆ, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಆಗಬಹುದು. ಇವ್ಯಾ ವುವೂ ಇಲ್ಲದಿದ್ದರೆ ಸರ್ಕಾರ/ಸರ್ಕಾರಿ ಸಂಸ್ಥೆ ವಿತರಿಸಿದ ಗುರುತಿನ ಚೀಟಿ/ ಪೋಟೋ ಸಹಿತ ಪತ್ರಕ್ಕಾದರೆ ಗೆಜೆಟೆಡ್ ಅಧಿಕಾರಿ ದೃಢೀಕರಣ ಇರಬೇಕು.

ದೆಹಲಿ ದಂತಗೋಪುರದಲ್ಲಿ ಕುಳಿತು ಹಳ್ಳಿಯ ಬಡ ಪ್ರಜೆಯ ಪ್ರಗತಿಗಾಗಿ ರೂಪಿಸುವ ಯೋಜನೆ ಗಳ ಬಹುಮುಖ್ಯ ಮಿತಿಯೆಂದರೆ, ಈ ಯೋಜನೆ ಗಳ ಆಶಯ ಮತ್ತು ಅನುಷ್ಠಾನಗಳ ನಡುವೆ ಬಹುದೊಡ್ಡ ಅಂತರ ಇರುವುದು. ಇದು ವರೆಗೆ ಅಭಿವೃದ್ಧಿ ಯೋಜನೆಗಳ ಮೂಲ ಉದ್ದೇಶ ಗಳನ್ನು ಕಟ್ಟಕಡೆಯ ಪ್ರಜೆಗೆ ತಲುಪಿಸುವಲ್ಲಿ ವೈಫಲ್ಯ ಉಂಟಾಗಿದೆ. ಸಾಮಾನ್ಯ ಜನರ ಉದ್ಧಾರದ ಕನಸು ನನಸಾಗದಿರಲು ಈ ವೈಫಲ್ಯವೇ ಮುಖ್ಯ ಕಾರಣ.

ಈ ಹಿಂದೆ ಇಂದಿರಾ ಗಾಂಧಿ ಅವರ ನೇತೃತ್ವದ ಸರ್ಕಾರವೂ ಕೈಗೊಂಡಿದ್ದ 20 ಅಂಶಗಳ ಕಾರ್ಯ ಕ್ರಮದಿಂದ ಹಿಡಿದು ಯುಪಿಇ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯವರೆಗೆ ಎಲ್ಲ ಅಭಿವೃದ್ಧಿ ಯೋಜನೆಗಳ ಅನುಷ್ಠಾನವನ್ನು ಗಮನಿಸಿದರೆ ಇದು ವೇದ್ಯವಾಗು ತ್ತದೆ. ಜನಧನ ಯೋಜನೆ ಸಹ ಇದಕ್ಕೆ ಹೊರತಲ್ಲ ಎನಿಸುತ್ತದೆ. ಹಾಗಾಗಿ ಆತುರದಲ್ಲಿ ಕೇವಲ ಬ್ಯಾಂಕ್ ಖಾತೆ ತೆರೆಯಲಷ್ಟೇ ಗಮನಹರಿಸದೇ ಜೊತೆ ಜೊತೆಗೆ ಇದೇ ಮೂಲ ಆಶಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸ್ವಾವಲಂಬಿ ಆರ್ಥಿಕ ಸಾಕ್ಷರರನ್ನಾಗಿ ಮಾಡುವುದು ಆಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT