ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದ ಸಂಸ್ಕೃತಿ ಸಂರಕ್ಷಿಸಿ

Last Updated 6 ಫೆಬ್ರುವರಿ 2012, 4:40 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ:  ಮೌಲ್ಯಯುತ ಜೀವನ ಕ್ರಮದ ಮೇಲೆ ಅಪಾರವಾದ ಪರಿಣಾಮ ಬೀರಿರುವ ಜಾನಪದ ಸಂಸ್ಕೃತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಕಲಾನಿಕೇತನ ಟ್ರಸ್ಟ್ ಕೆ.ಗೊಲ್ಲಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ರಂಗ ಜಂಗಮ ಸಂಸ್ಕೃತಿ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, `ಜಾನಪದ ಕಲಾವಿದರು ಅದ್ಭುತ ಕಲಾ ನೈಪುಣ್ಯದಿಂದ ಕಾರ್ಯಕ್ರಮ ನೀಡಿ ಜನರನ್ನು ರಂಜಿಸುತ್ತಾರೆ. ತಮ್ಮ ನೋವನ್ನು ಕೂಡ ಮರೆತು ಪ್ರದರ್ಶನ ನೀಡುವ ಅವರ ಕಲಾ ಸೇವೆಗೆ ಸಾಟಿಯಿಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯ ವ್ಯಾಮೋಹದಿಂದ ಜಾನಪದ ಕಲೆಗಳನ್ನು ನಿರ್ಲಕ್ಷಿಸಿದರೆ ನಾಡಿಗೆ ಗಂಡಾಂತರ ತಪ್ಪ್ದ್ದಿದಲ್ಲ~ ಎಂದು ಎಚ್ಚರಿಕೆ ನೀಡಿದರು.

 ಕಲಾನಿಕೇತನ ಸಂಸ್ಥೆಯ ಟ್ರಸ್ಟ್ ಅಧ್ಯಕ್ಷ ಮೇಕಪ್ ಕೃಷ್ಣ ಮಾತನಾಡಿ, ನಾಟಕಕಾರ ಚಂದ್ರಶೇಖರ್ ಕಂಬಾರ ಅವರ ಹೆಸರಿನಲ್ಲಿ ನಾಟಕ ಮತ್ತು ರಂಗ ತರಬೇತಿ ಶಾಲೆಯನ್ನು ಶೀಘ್ರ ಪ್ರಾರಂಭಿಸಲಾಗುವುದು ಎಂದರು.

ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ಲೋಕಾಯುಕ್ತ ಜಾಗೃತ ದಳದ ನಿರ್ದೇಶಕ ಡಿ.ಮುನಿಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಎ. ಶಿವಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬೆಟ್ಟಯ್ಯ, ಮಾಜಿ ಅಧ್ಯಕ್ಷ ಆರ್.ಲಕ್ಷ್ಮಯ್ಯ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT