ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳು-ಅಧಿಕಾರಿಗಳ ಭಿನ್ನಾಭಿಪ್ರಾಯ

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸೋಮವಾರಪೇಟೆ: ಅಧಿಕಾರಿಗಳು ಕೆಲಸ ನಿರ್ವಹಿಸದೇ ಹಾರಿಕೆ ಉತ್ತರ ನೀಡುತ್ತಾರೆ ಎಂಬುದು ಜನಪ್ರತಿನಿಧಿಗಳ ಅಭಿಪ್ರಾಯವಾದರೆ, ಸಾಕಷ್ಟು ಅನುದಾನ ದೊರೆಯದೇ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾದರೂ ಹೇಗೆ ಎಂಬುದು ಅಧಿಕಾರಿಗಳ ವಾದ.

ಇವು ಇಲ್ಲಿ ನಡೆದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವಿನ ಸಂವಾದದ ತಿರುಳಾಗಿತ್ತು.  ತಾಲ್ಲೂಕು ಪಂಚಾಯಿತಿ, ಪತ್ರಿಕಾಭವನ ಟ್ರಸ್ಟ್, ನಗರ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ಪತ್ರಿಕಾಭವನದಲ್ಲಿ `ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾತ್ರ~ ಕುರಿತಾಗಿ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ರಸ್ತೆಗಳನ್ನು ರಿಪೇರಿಗೊಳಿಸಿ 3 ತಿಂಗಳೊಳಗೆ ಹಾಳಾಗಿರುತ್ತವೆ ಎಂದು ತಾಪಂ ಸದಸ್ಯರಾದ ಎಚ್.ಆರ್.ಸುರೇಶ್, ಅರೆಯೂರು ಜಯಣ್ಣ ದೂರಿದರು.

ೀಕೋಪಯೋಗಿ ಇಲಾಖೆ ಎಇಇ ರಾಮಕೃಷ್ಣ ಮಾತನಾಡಿ, ಹಿಂದೆ ರಸ್ತೆ ಕಾಮಗಾರಿ ಕೈಗೊಂಡಾಗ ಕಡಿಮೆ ಅನುದಾನ ಸಿಗುತ್ತಿದ್ದುದರಿಂದ ವೈಜ್ಞಾನಿಕವಾಗಿ ರಸ್ತೆ ನಿರ್ಮಿಸಲು ಸಾಧ್ಯವಾಗದೇ ರಸ್ತೆಗಳು ಹಾಳಾಗಿವೆ ಎಂದು ಪ್ರತಿಕ್ರಿಯಿಸಿದರು. ಜಾತಿ ಮತ್ತು ಆದಾಯ ದೃಢೀಕರಣ ಪತ್ರ ನೀಡಿಕೆಯಲ್ಲಿ ತುಂಬಾ ವಿಳಂಬ ಆಗುತ್ತಿದೆ ಎಂದು ಜನಪ್ರತಿನಿಧಿಗಳು ತಹಶೀಲ್ದಾರ್‌ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT