ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಮನ ಗೆದ್ದ ಕಾಸರವಳ್ಳಿ ಚಿತ್ರೋತ್ಸವ

Last Updated 9 ಅಕ್ಟೋಬರ್ 2011, 7:05 IST
ಅಕ್ಷರ ಗಾತ್ರ

`ಸಿನಿಮಾ ಪ್ರೇಕ್ಷಕರ ಬೇಕು- ಬೇಡಗಳನ್ನು ನಗರ ಗಳಲ್ಲಿರುವ ಯಾರೋ ನಿರ್ಧರಿಸುತ್ತಾರೆ~, ಇವು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಇಂದಿನ ಜನಪ್ರಿಯ ಚಲನಚಿತ್ರಗಳ ಕುರಿತಂತೆ ಆಡಿದ ಮಾತುಗಳು.

ಸಿದ್ದಾಪುರ ಪಟ್ಟಣದ ಶಂಕರಮಠ ದಲ್ಲಿ ಈಚೆಗೆ ಏರ್ಪಡಿಸಿದ್ದ ಅವರದೇ ಚಿತ್ರಗಳ ಚಲನಚಿತ್ರೋತ್ಸವದ ಕೊನೆಯ ದಿನ ನಡೆದ ಸಂವಾದದಲ್ಲಿ ಭಾಗವ ಹಿಸಿದ್ದ ಗಿರೀಶ್ ಕಾಸರವಳ್ಳಿ, ಇಂದಿನ ಸಿನಿಮಾಗಳ ಬಗ್ಗೆ ಖಚಿತವಾದ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಸರವಳ್ಳಿ ಅವರ ವಿಚಾರಧಾರೆ ಸ್ಪಷ್ಟವಾಗಿತ್ತು. ಕಲಾತ್ಮಕ ಚಿತ್ರಗಳನ್ನು ನೋಡದೇ ಅವುಗಳ ಬಗ್ಗೆ ವಿಮರ್ಶೆ ಮಾಡುವ ಸಿನಿಮಾ ಮಂದಿಯ ಬಗ್ಗೆ ಅವರು ಖಾರವಾಗಿ ಪ್ರತಿಕ್ರಿಯಿಸಿದರು.  ಕಲಾತ್ಮಕ ಚಿತ್ರಗಳ ಪ್ರದರ್ಶನ ಅಸಾಧ್ಯವಾಗಿರುವ ವ್ಯವಸ್ಥೆಯ ಕುರಿತು ವ್ಯಥೆ ವ್ಯಕ್ತಪಡಿಸಿದರು.  

 ಚಲನಚಿತ್ರಗಳಲ್ಲಿ ಅದರಲ್ಲಿಯೂ ಹಾಲಿವುಡ್ ಚಿತ್ರ ಗಳು ಗ್ರಾಫಿಕ್‌ನಿಂದ ಏನೆಲ್ಲಾ ಅವಾಸ್ತವ ವನ್ನು ಸೃಷ್ಟಿಸುವದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ಸಿನಿಮಾ ಗಳಲ್ಲಿ ಸುಂದರ ಪುರುಷ ಮತ್ತು ಸುಂದರ ಸ್ತ್ರಿಯರು ಮಾತ್ರ ನಟಿಸಬಹುದಾದ ಪರಿಸ್ಥಿತಿಯನ್ನು ನಿರ್ಮಿಸಿ ರುವ ಬಾಲಿವುಡ್ ಮನೋಧರ್ಮಕ್ಕೆ ಖೇದ ವ್ಯಕ್ತಪಡಿ ಸಿದರು.  ನಮ್ಮದೇ ಊರಿನ ಯಾವು ದೋ ಗಲ್ಲಿಯಲ್ಲಿ ಇರುವ ಸೌಂದರ್ಯ ವನ್ನು ಗ್ರಹಿಸದೇ, ಚಿತ್ರೀಕರಣ ಕ್ಕಾಗಿ ವಿದೇಶಕ್ಕೆ ತೆರಳುವ ಸ್ಥಿತಿಗೆ ಆಶ್ಚರ್ಯ ವ್ಯಕ್ತಪಡಿಸಿದರು.  

ಏಳು ದಿನಗಳ ಕಾಲ(ಸೆ,25ರಿಂದ ಅ.1ರವರೆಗೆ) ನಡೆದ ಚಲನಚಿತ್ರೋತ್ಸ ವದಲ್ಲಿ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ `ದ್ವೀಪ~, `ತಾಯಿ ಸಾಹೇಬ~, `ಘಟಶ್ರಾದ್ಧ~, `ಗುಲಾಬಿ ಟಾಕೀಸ್~, `ನಾಯಿ ನೆರಳು~, `ಕನಸೆಂಬ ಕುದುರೆಯನೇರಿ~ ಮತ್ತು  `ಕ್ರೌರ್ಯ~ ಚಿತ್ರಗಳು ದಿನಕ್ಕೊಂದರಂತೆ ಪ್ರದರ್ಶನ ಗೊಂಡವು. ಈ ಸಿನಿಮಾಗಳೆಲ್ಲ ಸ್ಥಳೀಯ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಿದವು.  ಪ್ರತಿದಿನ ಸಂಜೆ 7ಕ್ಕೆ ಪ್ರಾರಂಭವಾಗುತ್ತಿದ್ದ ಈ ಚಲನಚಿತ್ರಗಳು ಸುಮಾರು 100-150 ಪ್ರೇಕ್ಷಕ ರೆದುರು ಪ್ರದರ್ಶನಗೊಂಡವು. ಚಿತ್ರಮಂದಿರಗಳತ್ತ ಮುಖ ಹಾಕದ ಹಲವರು ಈ ಚಿತ್ರಗಳನ್ನು ನೋಡಿ ಸಂತಸಪಟ್ಟರು.

ಪ್ರತಿದಿನದ ಚಲನಚಿತ್ರ ಪ್ರದರ್ಶನಕ್ಕೆ ಮೊದಲು ಬೆಂಗಳೂರಿನ `ಕಾಫಿಬೈಟ್~ ತಂಡದವರಿಂದ ಕಿರು ಚಿತ್ರಗಳ ಪ್ರದರ್ಶನ ನಡೆಯಿತು. ಸ್ಥಳೀಯ ಪತ್ರಕರ್ತ ಗಂಗಾಧರ ಕೊಳಗಿ ನಿರ್ಮಿಸಿದ ತಾಲ್ಲೂಕಿನ ತಾಲ್ಲೂಕಿನ ಬುರುಡೆ ಜಲಪಾತದ ಕುರಿತ ಸಾಕ್ಷ್ಯಚಿತ್ರ ಕೂಡ ಒಂದು ದಿನ  ಪ್ರದರ್ಶನ ಗೊಂಡಿತು.

ಸ್ಥಳೀಯ ಶಂಕರಮಠದ ಧರ್ಮಾ ಧಿಕಾರಿ ವಿಜಯ ಹೆಗಡೆ ದೊಡ್ಮನೆ ಅವರ ಸಾಂಸ್ಕೃತಿಕ  ಕಾಳಜಿ ಮತ್ತು ಬೆಂಗಳೂರಿನ ಕೆ.ವಿ.ಸುಬ್ಬಣ್ಣ ಆಪ್ತ ಸಮೂಹದ ವನಜಾಕ್ಷಿ ಕೊಳಗಿ ಮತ್ತಿತರರ ಆಸಕ್ತಿಯ ಕಾರಣ ದಿಂದ  ಈ ಅಪರೂಪದ ಚಲನಚಿತ್ರೋತ್ಸವ ಸಿದ್ದಾಪುರ ದಂತಹ ಸಣ್ಣ ಪಟ್ಟಣ ದಲ್ಲಿಯೂ ಆಯೋಜನೆ ಗೊಂಡಿತು.

ಸ್ಥಳೀಯ ರಂಗತಂಡಗಳಾದ ರಂಗ ಸೌಗಂಧ ಮತ್ತು ಒಡ್ಡೋಲಗದ ಕಾರ್ಯಕರ್ತರ ಸಹಕಾರವೂ ಚಲನ ಚಿತ್ರೋತ್ಸವಕ್ಕೆ ಸಿಕ್ಕಿತು.  ಈ ಅಪರೂ ಪದ ಕಾರ್ಯ ಕ್ರಮದ ಉದ್ಘಾಟನೆಯ ದಿನದಂದು ಖ್ಯಾತ ಸಾಹಿತಿ ನಾ. ಡಿಸೋಜ ಮತ್ತು ಸಮಾರೋಪದ ದಿನ ಸ್ವತಃ ಗಿರೀಶ್ ಕಾಸರವಳ್ಳಿ ಉಪಸ್ಥಿತರಿದ್ದುದು `ಗಿರೀಶ್ ಕಾಸರವಳ್ಳಿ ಚಿತ್ರಗಳ ಚಲನಚಿತ್ರೋತ್ಸವ~ದ ಮೆರು ಗನ್ನು ಬಹಳಷ್ಟು  ಹೆಚ್ಚಿಸಿತು.
          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT