ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಮನ ಸೆಳೆದ ಜೋಡು ಕುದುರೆ ಸ್ಪರ್ಧೆ

Last Updated 1 ಜನವರಿ 2014, 7:10 IST
ಅಕ್ಷರ ಗಾತ್ರ

ಐಗಳಿ (ತಾ. ಅಥಣಿ): ಕೊಕಟನೂರ ಯಲ್ಲಮ್ಮದೇವಿ ಜಾತ್ರೆ ಅಂಗವಾಗಿ ಮಂಗಳವಾರ ಜೋಡು ಕುದುರೆ ಓಡಿಸುವ ಸ್ಪರ್ಧೆ ನೋಡುಗರ ಗಮನ ಸೆಳೆಯಿತು. ಡಿಗ್ರಜದ ಮಧುಕರ ದೇಶಮುಖ ಅವರ ಕುದರೆಗಳು ಪ್ರಥಮ, ಶೇಡಬಾಳದ ಸಂಜಯ ನಾಯಿಕ ದ್ವಿತೀಯ, ಅವರವಾಡದ ಮಂಜೂರ ಮುಲ್ಲಾ ತೃತೀಯ ಹಾಗೂ ಶೇಡಬಾಳದ ಚಂದ್ರಕಾಂತ ನಂದ­ಗಾಂವ ಅವರ ಜೋಡಿ ಕುದುರೆಗಳು ನಾಲ್ಕನೇ ಸ್ಥಾನ ಪಡೆದವು. ಸ್ಪರ್ಧೆಯಲ್ಲಿ 17 ಜೋಡಿ ಕುದುರೆಗಳು ಪಾಲ್ಗೊಂಡಿದ್ದವು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಹ್ಲಾದ ಪೂಜಾರಿ ಸ್ಪರ್ಧೆಗೆ ಚಾಲನೆ ನೀಡಿ, ರೈತರ ಒಡನಾಡಿಗಳಾದ ಎತ್ತು, ಕುದುರೆ ಗಾಡಿನ ಸ್ಪರ್ಧೆಗಳು ಇಂದು ಮರೆಯಾಗುತ್ತಿವೆ. ಗ್ರಾಮೀಣ ಪ್ರದೇಶದ ಹಬ್ಬ ಹರಿದಿನಗಳಲ್ಲಿ ಇಂತಹ ಸಾಹಸಮಯ ಸ್ಪರ್ಧೆಗಳು ನಡೆಯುತ್ತಿರುವುದು ಸಮಾಧನಕರ ಸಂಗತಿಯಾಗಿದೆ ಎಂದರು.

ನಮ್ಮ ಸಂಸ್ಕೃತಿಯ ಉಳಿವಿಗಾಗಿ ಗ್ರಾಮೀಣ ಕ್ರೀಡೆಗಳನ್ನು ಉಳಿಸ­ಬೇಕಾಗಿದೆ. ನಮ್ಮತನ ಉಳಿಯ­ಬೇಕಾದರೆ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವುದು ಅವಶ್ಯವಿದೆ. ಪ್ರಾಣಿಗಳ ಹಿಂಸೆ ಅಪರಾಧ, ಮೂಕ ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಸದೇ ಅವುಗಳ ಸಾಮರ್ಥ್ಯದ ಅನು­ಗುಣವಾಗಿ ಓಡಿಸಬೇಕು ಎಂದು ಸಲಹೆ ನೀಡಿದರು.

ಪ್ರದೇಶ ಕಾಂಗ್ರೆಸ್‌ ಸಮಿತಿ ಸದಸ್ಯ ಶ್ಯಾಮರಾವ್‌ ಪೂಜಾರಿ, ಜಾಯಪ್ಪ ದೇಸಾಯಿ, ಅರ್ಜುನ ಪೂಜಾರಿ, ಬಾಪು­­ಗೌಡ ಭುಲಗೌಡರ, ಅರ್ಜುನ ಜಾಧವ, ಶಿವರುದ್ರ ಪರಾಂಡೆ, ಬಾಳಾ­ಸಾಬ ಇಜಾರೆ, ಮಹಾವೀರ ಹಳಕಿ, ಕುಮಾರ ವೀರಗೌಡ, ಮಹೇಶ ಕಾಡದೇವರಮಠ, ಅಣ್ಣಾಸಾಬ ದೇಸಾಯಿ, ಪರಶುರಾಮ ಚಮಕೇರಿ, ಬಸಪ್ಪ ಅಂಬಾಜಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT