ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ದಾರಿ ತಪ್ಪಿಸಲು ಹೋರಾಟ

Last Updated 6 ಫೆಬ್ರುವರಿ 2012, 8:40 IST
ಅಕ್ಷರ ಗಾತ್ರ

ಕಾರವಾರ: ಕಳೆದ 60 ದಿನಗಳಿಂದ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿರುವ ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಕಿಲೋ ಮೀಟರ್ ವ್ಯಾಪ್ತಿಯ ಹೋರಾಟಗಾರ ರನ್ನು ಕೆಲವು  ಸ್ವಯಂಘೋಷಿತ ಕಮ್ಯೂನಿಸ್ಟ್ ಮುಖಂಡರು ದಾರಿತಪ್ಪಿ ಸುತ್ತಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ನಗರ ಘಟಕದ ಅಧ್ಯಕ್ಷ ರಾಜೇಶ ನಾಯಕ ಹೇಳಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ  ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತೆಯರನ್ನು ಹೋರಾಟದ ಹೆಸರಲ್ಲಿ ದಾರಿ ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಂಡ ವ್ಯಕ್ತಿಗಳೇ ಕೈಗಾದ ಮುಗ್ಧ ಜನರನ್ನು ದಾರಿ ತಪ್ಪಿಸುತ್ತಿರುವುದು ಖಂಡನೀಯ ಎಂದರು.

ಕೈಗಾದ ಸಮಸ್ಯೆ ಸರ್ಕಾರದ ನಿರ್ಧಾರಕ್ಕೆ ಒಳಪಟ್ಟಿದೆ. ಈ ಸಮಸ್ಯೆಗೂ, ರಾಜ್ಯ ಸರ್ಕಾರಕ್ಕೂ ಸಂಬಂಧವೇ ಇಲ್ಲ ಎಂದು ತಿಳಿದಿದ್ದರೂ ಈ ಸ್ವಯಂಘೋಷಿತ ನಾಯಕರು ತಾವು ಕೈಗಾದ ಸುತ್ತಮುತ್ತಲಿನ ಐದು ಕಿ.ಮೀಟರ್ ವ್ಯಾಪ್ತಿಯ ಗ್ರಾಮಗಳ ಜನರನ್ನು ಮತ್ತೊಂದೆಡೆ ಸ್ಥಳಾಂತರಿಸಿ ಅವರಿಗೆ ಉದ್ಯೋಗ, ಪರಿಹಾರ ಹಾಗೂ ಜಮೀನು ನೀಡುವುದಾಗಿ ಸುಳ್ಳು ಭರವಸೆ ನೀಡಿ ದಾರಿ ತಪ್ಪಿಸ ಲಾಗುತ್ತಿದೆ ಎಂದರು.

ಬಿಸಿಲು, ಚಳಿ ಲೆಕ್ಕಿಸದೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ತೊಡಗುವಂತೆ ಮಾಡಿ, ಕಮ್ಯೂನಿಸ್ಟ್ ಪಕ್ಷದ ರಾಷ್ಟ್ರ ನಾಯಕರನ್ನು ಇಲ್ಲಿಗೆ ಕರೆತಂದು ಮುಗ್ಧ ಜನರನ್ನು ಅವರೆದುರು ಪ್ರದರ್ಶನ ಮಾಡಿ ತಾವು ಮಹಾನ್ ಸಂಘಟಕರು ಎಂದು ಪೋಸ್ ನೀಡುವ ಮೂಲಕ ಪಕ್ಷದಲ್ಲಿ ಉನ್ನತ ಹುದ್ದೆ ಗಿಟ್ಟಿಸಿ ಕೊಳ್ಳುವ ಪ್ರಯತ್ನದಲ್ಲಿರುವ ಈ ನಾಯಕರನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ನಾಯಕ ನುಡಿದರು.

ಜ. 26ರಂದು ಸಂಸದ ಬಸುದೇವ ಆಚಾರ್ಯ ಅವರನ್ನು ಕರೆತಂದು ಅವರ ಎದುರು ಪ್ರತಿಭಟನಾಕಾರರನ್ನು ಪ್ರದರ್ಶನಕ್ಕಿರಿಸಿದ ನಾಯಕರು ಈಗ ಸಮಸ್ಯೆಗೆ ರಾಜ್ಯ ಸರ್ಕಾರವೇ ಕಾರಣ ಎಂಬ ಹೇಳಿಕೆ ನೀಡುತ್ತಿರುವುದು ನಿಜಕ್ಕೂ ಆಶ್ಚರ್ಯ ಎಂದ ಅವರು, ಸಚಿವರಾದ ಆನಂದ ಅಸ್ನೋಟಿಕರ್ ಅವರು ಹೆಚ್ಚಿನ ಮುತುವರ್ಜಿ ವಹಿಸಿ ಚಳವಳಿ ನಿರತ ನಾಯಕರನ್ನು ದಿಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಇದು ಸಮಸ್ಯೆಗಳ ಬಗ್ಗೆ ಬಿಜೆಪಿಗಿರುವ ಕಳಕಳಿಯನ್ನು ಎತ್ತಿ ತೋರಿಸುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಪ್ರತಿಭಟನಾ ನಿರತರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿ ಚಳವಳಿಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದರೂ ಈ ಸ್ವಯಂಘೋಷಿತ ನಾಯಕರು ಅದಕ್ಕೆ ಅಡ್ಡಗಾಲು ಹಾಕಿ ತಮ್ಮ  ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕಮ್ಯೂನಿಸ್ಟ್ ನಾಯಕ ಸೀತಾರಾಮ ಯೆಚೂರಿ ಅವರೇ ವಿಪತ್ತು ನಿರ್ವಹಣಾ ಸಮಿತಿ ಉಪಾಧ್ಯಕ್ಷ ಶಶಿಧರ ರೆಡ್ಡಿ ಅವರನ್ನು ಭೇಟಿ ಮಾಡಿದಾಗ ಈ ಬೇಡಿಕೆ ಒಪ್ಪಲು ಸಾಧ್ಯವಿಲ್ಲ ಎಂದು ರೆಡ್ಡಿ ತಿಳಿಸಿದ್ದಾರೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಈ ಕಮ್ಯೂನಿಸ್ಟ್ ನಾಯಕರು ಬಿಜೆಪಿ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದರೆ ಮಾತ್ರ ಕೇಂದ್ರ ಸರ್ಕಾರ ಬೇಡಿಕೆಗಳನ್ನು ಒಪ್ಪಿಕೊಳ್ಳುತ್ತದೆ ಎಂದು ಹೇಳಿ ಮುಗ್ಧ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ನಾಯಕ ಹೇಳಿದರು.

ಹೋರಾಟದ ಆರಂಭದಲ್ಲಿ ಸರ್ವಪಕ್ಷಗಳ ಹೋರಾಟ ಎಂದು ಜನರನ್ನು ಕರೆತಂದು ಅಲ್ಲಿ   ಕಮ್ಯೂ ನಿಸ್ಟ್ ಬಾವುಟ ಹಚ್ಚಿ ಬೇರೆ ಪಕ್ಷದ ವರು ಬರದಂತೆ ಸಮಸ್ಯೆಯನ್ನು ಜಟಿಲ ಗೊಳಿಸಿದ ಕಮ್ಯೂನಿಸ್ಟ್ ನಾಯಕರು ಜನರ ಕ್ಷಮೆ ಯಾಚಿಸಬೇಕು ಎಂದು ನಾಯಕ ಆಗ್ರಹಿಸಿದ್ದಾರೆ.

ಬಿಜೆಪಿ ಕಾರ್ಯದರ್ಶಿ ರತನ್ ದುರ್ಗೇಕರ್, ಗಜಾ ಸುರಂಗೇಕರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT