ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜನರ ಮನಗೆದ್ದ ರಾಯಣ್ಣ'

Last Updated 22 ಡಿಸೆಂಬರ್ 2012, 6:27 IST
ಅಕ್ಷರ ಗಾತ್ರ

ಧಾರವಾಡ: `ಧಾರವಾಡ ಪೇಢಾ ಚೆಂದ, ಈ ನಾಡಿನ ಜನತೆ ಅದಕ್ಕಿಂತ ಲೂ ಇನ್ನೂ ಚೆಂದ' ಎಂದು ಚಲನಚಿತ್ರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳುತ್ತಿದ್ದಂತೆಯೇ ಜನಸ್ತೋಮ ಹೋ ಎಂದು ಕೂಗಿತು.

ನಗರದ ಕಡಪಾ ಮೈದಾನದಲ್ಲಿ ವಿನಯ ಕುಲಕರ್ಣಿ ಗೆಳೆ ಯರ ಬಳಗದ ವತಿಯಿಂದ, ಸಂಗೊಳ್ಳಿ ರಾಯಣ್ಣ ಚಲನಚಿತ್ರ ತಂಡದವರಿಗೆ ಕಲಾವಿದರಿಗೆ ಶುಕ್ರವಾರ ಆಯೋಜಿಸಿದ್ದ ಸಮಾರಂಭ ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಯಶಸ್ಸು ಕಾಣಲು ಅಭಿಮಾನಿ ಗಳು ಹೆಚ್ಚು ಪ್ರೋತ್ಸಾಹ ನೀಡಿದ್ದಾರೆ. ಉಳಿದೆಲ್ಲ ನಗರಗಳಿಗಿಂತಲೂ ಹೆಚ್ಚು ಪ್ರೇಕ್ಷಕರು ಧಾರವಾಡ ನಗರದಲ್ಲಿ ಚಲನಚಿತ್ರವನ್ನು ನೋಡಲು ಸೇರು ತ್ತಿದ್ದಾರೆ. ಇದರ ವಿಜಯೋತ್ಸವಕ್ಕೆ ಪ್ರೇಕ್ಷಕರೇ ಕಾರಣ. ಮಾಜಿ ಶಾಸಕ ವಿನಯ ಕುಲಕರ್ಣಿ ಹಾಗೂ ತಾವು ಏಳನೇ ತರಗತಿಯಿಂದಲೇ ಸ್ನೇಹಿತರು' ಎಂದು ಸ್ಮರಿಸಿದರು.

ನಿರ್ಮಾಪಕ ಆನಂದ ಅಪ್ಪುಗೋಳ, ನಿರ್ದೇಶಕ ನಾಗಣ್ಣ, ನಟರಾದ ಶಿವ ಕುಮಾರ ಹಾಗೂ ಸೌರಭ, ಮಾಜಿ ಶಾಸಕ ವಿನಯ ಕುಲಕರ್ಣಿ, ವಿಜಯ ಕುಲಕರ್ಣಿ, ಮನೋಜ ಕರ್ಜಗಿ ಮತ್ತಿತ ರರು ಈ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ರಾಯಣ್ಣನ ಪಾತ್ರ ಮಾಡಿ ಉತ್ತರ ಕರ್ನಾಟಕದ ಜನತೆಯ ಮನ ಗೆದ್ದ ದರ್ಶನ ಅವರನ್ನು ಕಾಣಲು ಆರೇಳು ಸಾವಿರಕ್ಕಿಂತಲೂ ಅಧಿಕ ಅಭಿಮಾನಿಗಳು ಕಡಪಾ ಮೈದಾನದಲ್ಲಿ ಸೇರಿದ್ದರು.

ದರ್ಶನ ಅವರು ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಅವರ ಹತ್ತಿರ ಆಟೋಗ್ರಾಫ್ ತೆಗೆದುಕೊಳ್ಳಲು ಹಾಗೂ ಕೈ ಕುಲಕಲು ಮುಂದಾದರು. ಇದನ್ನು ತಪ್ಪಿಸಲು ಪೊಲೀಸರು ಬೆತ್ತ ವನ್ನು ಬೀಸಬೇಕಾಯಿತು. ಸಿಕ್ಕಿದ್ದೇ ಸಮಯ ಎಂದು ಕೆಲ ಪ್ಯಾಕೆಟ್ ಕಳ್ಳರು ಪ್ಯಾಕೆಟ್ ಕದಿಯಲು ಹೋಗಿ ಪೊಲೀ ಸರ ಕೈಗೆ ಸಿಕ್ಕ ಪ್ರಸಂಗವೂ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT