ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಸಮಸ್ಯೆಗೆ ಸ್ಪಂದಿಸುವೆ

Last Updated 23 ಫೆಬ್ರುವರಿ 2011, 7:30 IST
ಅಕ್ಷರ ಗಾತ್ರ

ಗುರುಮಠಕಲ್: ಮತಕ್ಷೇತ್ರದಲ್ಲಿ ಬರುವ ಪ್ರತಿಯೊಂದು ಹಳ್ಳಿಗಳಿಗೆ ತೆರಳಿ ಸಮಸ್ಯೆಗಳನ್ನು ತಿಳಿದುಕೊಳ್ಳುವು ದಲ್ಲದೇ ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ, ಗ್ರಾಮ ಗಳಲ್ಲಿನ ರಸ್ತೆ, ಶೌಚಾಲಯ ತೊಂದರೆ ಗಳನ್ನು ನಿವಾರಿಸುವ ಪ್ರಯತ್ನ ಮಾಡು ತ್ತೇನೆ ಎಂದು ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷೆ ಅನುಸೂಯ ಬೋರ ಬಂಡ ತಿಳಿಸಿದರು.

ಅವರು ಮಂಗಳವಾರ ಮತಕ್ಷೇತ್ರದ ನಸಲವಯಿ ಗ್ರಾಮದಲ್ಲಿ ಹಮ್ಮಿಕೊಳ್ಳ ಲಾದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಗ್ರಾಮಸ್ಥರು ಮುಂದಿಟ್ಟ ಬೇಡಿಕೆ ಪಟ್ಟಿಯಲ್ಲಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಹುತೇಕ ಸಮಸ್ಯೆಗಳನ್ನು ನಿವಾರಿಸಿಸುವ ಕ್ರಮ ಶೀಘ್ರದಲ್ಲೆ ಕೈಗೆತ್ತಿಕೊಳ್ಳುವುದಾಗಿ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಯ ಬಣ್ಣ ಬೋರಬಂಡ ಮಾತನಾಡಿ ಗ್ರಾಮಸ್ಥರು ಮುಂದಿಟ್ಟ ಹದಿನೈದು ಸಮಸ್ಯೆಗಳನ್ನು ಆಲಿಸಿದ ಅವರು ಹೆಚ್ಚಾಗಿ ಸಿಸಿ ರಸ್ತೆ ಕಾಮಗಾರಿ ಇದ್ದು, ನಸಲವಯಿ ಗ್ರಾಮ ಸುವರ್ಣ ಗ್ರಾಮ ಯೋಜನೆಗೆ ಆಯ್ಕೆಯಾಗಿದೆ ಅದರಲ್ಲಿ ಗ್ರಾಮದಲ್ಲಿನ ರಸ್ತೆ, ಚರಂಡಿ ಹಾಗೂ ಶೌಚಾಲಯ ವ್ಯವಸ್ಥೆ ಇತರೆ ಸಮಸ್ಯೆ ಗಳು ಪರಿಹಾರಗೊಳ್ಳಲಿವೆ. ಗ್ರಾಮಕ್ಕೆ ಬಸ್ ವ್ಯವಸ್ಥೆ ಹಾಗೂ ಗ್ರಾಮದಿಂದ ಗೊರನೂರು, ಕುಂಟಿಮಾರಿ. ನರಸಾ ಪುರ ಮತ್ತು ಆಂಧ್ರಕ್ಕೆ ಸಂಪರ್ಕ ಮಾರ್ಗವಾದ ಬೈರಂಕೊಂಡ ಗ್ರಾಮ ಗಳಿಗೆ ತೆರಳುವ ರಸ್ತೆಗಳ ನಿರ್ಮಾಣ ಕ್ಕಾಗಿ ಕ್ಷೇತ್ರದ ಶಾಸಕರಲ್ಲಿ ಹಾಗೂ ಕೇಂದ್ರ ಸಚಿವರಲ್ಲಿ ಮನವಿ ಮಾಡಿ ಕಾಮಗಾರಿ ಪ್ರಾರಂಭಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತಿಸಿ ಹೂ ಮಾಲೆಯ ಸುರಿಮಳೆ ಗೈದರು.ನಂತರ ನೂತನ ಜಿಪಂ ಅಧ್ಯಕ್ಷರು ಗೋರನೂರು, ಕುಂಟಿಮಾರಿ ಗ್ರಾಮ ಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಗಳನ್ನು ಆಲಿಸಿ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.ವಿರೂಪಾಕ್ಷ ಕುಂಟಿಮಾರಿ, ರಾಮುಲು ಅನಪೂರ, ಬುಗ್ಗಪ್ಪ, ಮುಕುಂದರೆಡ್ಡಿ, ನಾಗೆಂದ್ರ ಅನಪೂರ, ಬಾಬು, ಬಸ್ಸಣ್ಣ ದೇವರಹಳ್ಳಿ, ಮೈನೊದ್ದಿನ್, ಶಿವಕುಮಾರ, ವಿಶ್ವನಾಥರೆಡ್ಡಿ, ಅನಂತಯ್ಯ ಎಲಸತ್ತಿ, ರಮೇಶ ಕುಲಕರ್ಣಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT