ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರು ಬದಲಾವಣೆ ಬಯಸಿದ್ದಾರೆ: ಬೆಳಮಗಿ

Last Updated 14 ಏಪ್ರಿಲ್ 2014, 7:03 IST
ಅಕ್ಷರ ಗಾತ್ರ

ಗುಲ್ಬರ್ಗ: ಗುಜರಾತ್‌ ರಾಜ್ಯದಲ್ಲಿ ನರೇಂದ್ರ ಮೋದಿ ಅವರು ಮಾಡಿರುವ ಅಭಿವೃದ್ಧಿ ಮಾದರಿಯನ್ನು ಜನರು ಮೆಚ್ಚಿದ್ದಾರೆ. ಹೀಗಾಗಿ ದೇಶದಲ್ಲಿ ಬದಲಾವಣೆಯನ್ನು ಬಯಸಿ ಜನರು ಬಿಜೆಪಿಗೆ ಮತ ಹಾಕ್ತಾರೆ ಎಂದು ಗುಲ್ಬರ್ಗ ಲೋಕಸಭೆಯ ಬಿಜೆಪಿ ಅಭ್ಯರ್ಥಿ ರೇವುನಾಯಕ್ ಬೆಳಮಗಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಭಾನುವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ನಾನು ಮೂಲತಃ ರಾಜಕಾರಣಿಯಲ್ಲ. ಗುಡ್ಡಗಾಡು ಪ್ರದೇಶದಲ್ಲಿ ನೇಗಿಲು ಹೊಡೆಯು ತ್ತಿದ್ದವನನ್ನು ಬಿಜೆಪಿ ಕರೆತಂದು ಶಾಸಕ, ಮಂತ್ರಿಯನ್ನಾಗಿ ಮಾಡಿದೆ. ಈ ಸಲ ಲೋಕಸಭೆ ಸ್ಥಾನಕ್ಕೆ ಟಿಕೆಟ್‌ ನೀಡುವ ಮೂಲಕ ಬಿಜೆಪಿ ಪಕ್ಷ ತನ್ನ ಹೃದಯ ವಿಶಾಲತೆಯನ್ನು ತೋರಿಸಿದೆ ಎಂದು ಮಾತು ಆರಂಭಿಸಿದರು.

ಮೋದಿ ಪ್ರಧಾನಿಯಾಗಬೇಕು. ಹೀಗಾಗಿ ಬೆಳಮಗಿ ಅವರಿಗೆ ಮತ ನೀಡಬೇಕು ಎಂದು ಹೇಳಿ ಗುಲ್ಬರ್ಗ ಮತಕ್ಷೇತ್ರದ ಜನಸಮೂಹ ಪ್ರಚಾರಕ್ಕೆ ಹೋದಾಗ ಬರಮಾಡಿಕೊಳ್ಳುತ್ತಿದೆ. ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯಲ್ಲಿ ಬೆಲೆಗಳು ಏರಿಕೆಯಾಗಿವೆ. ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ ಪ್ರಕರಣಗಳು ಹಾಗೂ ಗಡಿಯಲ್ಲಿ ಸೈನಿಕರ ಶಿರಚ್ಛೇದ ಮುಂತಾದವು ಗಳಿಗೆ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಲಿಲ್ಲ. ದೇಶಕ್ಕೆ ದಿಟ್ಟ ನಾಯಕತ್ವದ ಅಗತ್ಯತೆಯನ್ನು ಮನಗಂಡಿರುವ ಜನರು ಈ ಸಲ ಬಿಜೆಪಿಗೆ ಮತ ಹಾಕಲಿದ್ದಾರೆ ಎಂದು ಹೇಳಿದರು.

371(ಜೆ) ವಿಶೇಷ ಸ್ಥಾನಮಾನ ಜಾರಿಗಾಗಿ ನಾನು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಏಳು ಸಲ ದೆಹಲಿಗೆ ಹೋಗಿದ್ದೇನೆ. ಸ್ಥಾನಮಾನ ನೀಡುವಂತೆ ಕಾಂಗ್ರೆಸ್‌ ಸಚಿವರನ್ನು ಒತ್ತಾಯಿಸಿದ್ದೇನೆ. ಕೇವಲ ನನ್ನಿಂದಲೇ ವಿಶೇಷ ಸ್ಥಾನಮಾನ ಜಾರಿಯಾ ಯಿತು ಎಂದು ಹೇಳಿಕೊಳ್ಳುವವರಿಗೆ, ಬಿಜೆಪಿ ಬೆಂಬಲ ನೀಡಿರುವುದು ಕಾಣುತ್ತಿಲ್ಲ ಎಂದು ಹರಿಹಾಯ್ದರು.

ಗುರುಮಠಕಲ್‌ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ಅವರು ಏಳು ಸಲ ಶಾಸಕರಾಗಿ ಆಯ್ಕೆ ಯಾಗಿದ್ದಾರೆ. ಆದರೆ ಪ್ರದೇಶ ಹಿಂದುಳಿದಿದೆ... ಹಿಂದುಳಿದಿದೆ ಎನ್ನುವ ಶಬ್ದ ಅಲ್ಲಿನ ಜನರಲ್ಲಿ ವಾಕರಿಕೆ ಹುಟ್ಟಿಸಿದೆ. 40 ವರ್ಷ ಆಡಳಿತಾವ ಧಿಯಲ್ಲಿ ಒಂದೇ ಒಂದು ಸರ್ಕಾರಿ ಪಿಯು, ಡಿಗ್ರಿ ಕಾಲೇಜು ಆರಂಭಿಸಿಲ್ಲ. ಜನರಿಂದ ಆಯ್ಕೆಯಾದ ಯಾವುದೇ ಜನಪ್ರತಿನಿಧಿ ಮಾಡುವ ಕೆಲಸವನ್ನು ಖರ್ಗೆ ಅವರು ಮಾಡಿದ್ದಾರೆ. ಅದರಲ್ಲೇನೂ ವಿಶೇಷವಿಲ್ಲ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುಲ್ಬರ್ಗ ದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪಿಸಬೇಕೆನ್ನುವ ನಿರ್ಧಾರ ವನ್ನು ಕೈಗೊಂಡಿದ್ದೇವೆ. ಮೈಸೂರಿಗೆ ಹೋಗುತ್ತಿದ್ದ ವಿಶ್ವವಿದ್ಯಾಲಯವನ್ನು ಗುಲ್ಬರ್ಗ ದಲ್ಲಿ ಸ್ಥಾಪಿಸಬೇಕು ಎಂದು ನಾನು ಒತ್ತಾಯ ಮಾಡಿದೆ. ಇದೆಲ್ಲವನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.

ಈ ಭಾಗದ ಕಬ್ಬು ಹಾಗೂ ತೊಗರಿ ಬೆಳೆಗಾರರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಖರ್ಗೆ ಅವರು ಮಾಡಿಲ್ಲ. ದೇಶದಲ್ಲಿ ಪ್ರತಿವರ್ಷ 30ಲಕ್ಷ ಮೆಟ್ರಿಕ್‌ ಟನ್‌ ತೊಗರಿ ಬಳಸಲಾಗುತ್ತದೆ. ಈ ಸಲ 29 ಲಕ್ಷ ಮೆಟ್ರಿಕ್‌ ಟನ್‌ ತೊಗರಿ ದೇಶದಲ್ಲಿ ಬೆಳೆದಿದೆ. 1 ಲಕ್ಷ ಮೆಟ್ರಿಕ್‌ ಟನ್‌ ತೊಗರಿ ಆಮದು ಮಾಡಿಕೊಳ್ಳಬೇಕಿದ್ದ ಕೇಂದ್ರ ಸರ್ಕಾರ 7 ಲಕ್ಷ ಮೆಟ್ರಿಕ್‌ ಟನ್‌ ಬೆಳೆಯನ್ನು ಆಮದು ಮಾಡಿ ಕೊಂಡ ಪರಿಣಾಮದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿವರಿಸಿದರು.

ಬಿಜೆಪಿ ಮುಖಂಡರಾದ ಅಮರನಾಥ ಪಾಟೀಲ, ರಾಜಕುಮಾರ್‌ ಪಾಟೀಲ ತೇಲ್ಕೂರ್‌, ಸೈಯದ್‌ ಪಟೇಲ್‌, ಬಾಬುರಾವ ಚವ್ಹಾಣ ಮತ್ತು ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ್‌ ಯಡ್ರಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT