ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ 23, ಸೋಮವಾರ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಆಂಜನೇಯ ಸ್ವಾಮಿ ವೆಲ್‌ಫೇರ್ ಅಸೋಸಿಯೇಷನ್: ಚಿನ್ನಯ್ಯನ ಪಾಳ್ಯ. ಮಾರಮ್ಮ ಮತ್ತು ಆಂಜನೇಯಸ್ವಾಮಿ ದೇವಾಲಯಗಳ ವಾರ್ಷಿಕೋತ್ಸವ ಸಮಾರಂಭ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ ಜನ್ಮ ಶತಾಬ್ದಿ ಕಾರ್ಯಕ್ರಮ. ಬೆಳಗ್ಗೆ 9.

ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ: ಎ.ವಿ.ಸೀ. ಸಭಾಂಗಣ, ಬಿ.ಎಂಶ್ರೀ ಕಲಾಭವನ, 3ನೇ ಮುಖ್ಯರಸ್ತೆ, ನರಸಿಂಹ ರಾಜ ಕಾಲೋನಿ. ಎನ್. ಅನಂತರಂಗಾಚಾರ್ ದತ್ತಿ ಕಾರ್ಯಕ್ರಮ. ಉಪನ್ಯಾಸ: ತಿರುಮಲೆ ಶ್ರೀರಂಗಾಚಾರ್. ಸಂಜೆ 5.30.

ಕರ್ನಾಟಕ ಪ್ರದೇಶ ನೇತಾಜಿ ಸುಭಾಷ್ ಚಂದ್ರಬೋಸ್ ವಿಚಾರ ವೇದಿಕೆ: ನಂ. 2, ಕರ್ನಾಟಕ ವಿಶ್ವಕರ್ಮ ಸಮಾಜ, ಸಿರೂರು ಪಾರ್ಕ್ ರಸ್ತೆ, ನಟರಾಜ ಟಾಕೀಸ್ ಹಿಂಭಾಗ, ಶೇಷಾದ್ರಿಪುರಂ. ಸುಭಾಷ್ ಚಂದ್ರಬೋಸ್‌ರವರ 115ನೇ ಜನ್ಮ ದಿನಾಚರಣೆ. ಉದ್ಘಾಟನೆ: ಲೋಕಸಭಾ ಮಾಜಿ ಸದಸ್ಯ ಹಾಗೂ ಕಾರ್ಯಾಧ್ಯಕ್ಷ ಸಿ.ನಾರಾಯಣಸ್ವಾಮಿ. ಅಧ್ಯಕ್ಷತೆ: ಸಂಘದ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಗೌಡ. ಸನ್ಮಾನ ಸಮಾರಂಭ: ಖ್ಯಾತ ಉದ್ಯಮಿ ಹರಿ ಖೋಡೆ. ಅತಿಥಿಗಳು: ವಿರೋಧ ಪಕ್ಷದ ನಾಯಕಿ ಮೋಟಮ್ಮ, ಶಾಸಕ ನೆ.ಲ.ನರೇಂದ್ರಬಾಬು, ಅಣ್ಣಪ್ಪ. ಬೆಳಿಗ್ಗೆ 10.30.

ಸ್ನೇಹ ಸೇತು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ: ನಯನ ಸಭಾಂಗಣ, ಜೆ.ಸಿ.ರಸ್ತೆ, ಕನ್ನಡ ಭವನ. ಡಾ.ಎಸ್.ವಿ. ಪ್ರಭಾವತಿಯವರ `ನದಿ ಹರಿಯುತಿರಲಿ~ ಪುಸ್ತಕ ಬಿಡುಗಡೆ ಸಮಾರಂಭ. ಬಿಡುಗಡೆ: ಹಿರಿಯ ಕವಿ ಪ್ರೊ.ಎಚ್.ಜಿ ಸಿದ್ದರಾಮಯ್ಯ. ಅತಿಥಿಗಳು: ಪ್ರೊ.ಚಂದ್ರಶೇಖರ ಪಾಟೀಲ, ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಸಾಹಿತಿ ಪ್ರೊ.ಎಲ್.ಎನ್. ಮುಕುಂದರಾಜ್, ಜಾನಪದ ಚಿಂತಕ ಡಾ.ವೀರೇಶ್ ಬಳ್ಳಾರಿ. ಸಂಜೆ 6.

ದಿ ಬೆಂಗಳೂರು ಸೋಶಿಯಲ್ ಸೈನ್ಸ್ ಫೋರಂ: ಡಾ.ಎಚ್.ಎನ್.ಮಲ್ಟಿಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು, ಬಸವನಗುಡಿ. ಡಾ.ಎಚ್. ನರಸಿಂಹಯ್ಯ ಅಂತರ ಕಾಲೇಜು ಉಪನ್ಯಾಸ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭ. ಅತಿಥಿಗಳು: ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ಡಾ.ಎ.ಎಚ್.ರಾಮಾ ರಾ, ನ್ಯಾಯಾಧೀಶ ಎ.ಜೆ.ಸದಾಶಿವ. ಸಂಜೆ 6.

ರಮಣ ಮಹರ್ಶಿ ಅಧ್ಯಯನ ಕೇಂದ್ರ: ರಮಣ ಮಹರ್ಶಿ ಹೆರಿಟೇಜ್ ಆಡಿಟೋರಿಯಂ, ಸಂಜಯನಗರ. 35ನೇ ರಾಷ್ಟ್ರೀಯ ವಿಚಾರಗೋಷ್ಠಿ ಹಾಗೂ ಸಂಸ್ಥಾಪನಾ ದಿನ. ಅತಿಥಿಗಳು: ಸದ್ಗುರು ಸಾಧನ ಕೇಂದ್ರದ ಸ್ವಾಮಿ ವಿರಾಜಾನಂದ, ಸಂಸ್ಥೆಯ ಅಧ್ಯಕ್ಷೆ ಡಾ. ಶಾರದ, ಕೈಲಾಶ ಆಶ್ರಮದ ಜಯೇಂದ್ರ ಪುರಿ ಸ್ವಾಮೀಜಿ. ಬೆಳಿಗ್ಗೆ 11.
ನೇತಾಜಿ ಸುಭಾಷ್ ಚಂದ್ರಬೋಸ್ ಸಂಶೋಧನಾ ಮತ್ತು ಬಹು ಅಭಿವೃದ್ಧಿ ಟ್ರಸ್ಟ್: ಸುಭಾಸ್ ಭವನ, ನಂ.9, 9ನೇ ಮುಖ್ಯರಸ್ತೆ, ಐಡಿಯಲ್ ಹೋಮ್ಸ, ರಾಜರಾಜೇಶ್ವರಿ ನಗರ, ಸುಭಾಷ್ ಚಂದ್ರಬೋಸ್ ಅವರ 115ನೇ ಜನ್ಮ ದಿನಾಚರಣೆ ಮತ್ತು ನೇತಾಜಿ ಮಾಡೆಲ್ ಶಾಲಾ ಕಟ್ಟಡದ ಶಿಲಾನ್ಯಾಸ, ಸಾನಿಧ್ಯ- ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಜಯೇಂದ್ರಪುರಿ ಸ್ವಾಮೀಜಿ, ಅತಿಥಿಗಳು- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಎಚ್. ಡಿ. ಕುಮಾರಸ್ವಾಮಿ, ಬೆಳಿಗ್ಗೆ 11.30.

ಬೆಂಗಳೂರು ವಿಶ್ವವಿದ್ಯಾಲಯ: ಪ್ರೊ.ಕೆ. ವೆಂಕಟಗಿರಿ ಗೌಡ ಸ್ಮಾರಕ ಭವನ, ಜ್ಞಾನ ಭಾರತಿ ಆವರಣ, ಬೆಂಗಳೂರು ವಿವಿ, ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭ, ವಿಷಯ- `ಸೈಟಾಲಜಿ ಆಂಡ್ ಜಿನೆಟಿಕ್ಸ್~, ಅತಿಥಿಗಳು- ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಬೆಂಗಳೂರು ವಿವಿ ಕುಲಪತಿ ಡಾ.ಎನ್. ಪ್ರಭುದೇವ್, ಬೆಳಿಗ್ಗೆ 10.

ಸಾಹಿತ್ಯ ಸಂಘ: ಶಂಕರಪುರ, ನೇತಾಜಿ ಸುಭಾಷ್ ಚಂದ್ರಬೋಸ್ ಅವರ 115ನೇ ಜನ್ಮದಿನಾಚರಣೆ, ಅತಿಥಿಗಳು- ಚಿಂತಕ ಪ್ರೊ.ಎನ್.ವಿ.ನರಸಿಂಹಯ್ಯ, ಚಿತ್ರ ನಟ ಜಿ.ಸೋಮಶೇಖರ್ ರಾವ್, ಬಿಬಿಎಂಪಿ ಸದಸ್ಯ ಎ.ಎಚ್.ಬಸವರಾಜು, ಸಂಜೆ 5.

ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗಸಂಗಮ

ರಾಜ್ಯ ಸಮುದಾಯ ಸಮನ್ವಯ ಸಮಿತಿ: ಸಂಸ್ಕೃತಿ ಸಾಮರಸ್ಯ ಸಮುದಾಯ ರಂಗ ಸಂಗಮ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕವಿಗೋಷ್ಠಿ. ಉದ್ಘಾಟನೆ: ಡಾ.ಚಂದ್ರಶೇಖರ ಕಂಬಾರ. ಅಧ್ಯಕ್ಷತೆ: ಎಸ್.ಜಿ.ಸಿದ್ಧರಾಮಯ್ಯ. ಸಂಜೆ 5ಕ್ಕೆ. ಬಳಿಕ ಕುಂದಾಪುರ ಸಮುದಾಯ ತಂಡದಿಂದ `ಕುಲಂ~ ನಾಟಕ ಪ್ರದರ್ಶನ.

ಕುಲದ ಪ್ರಶ್ನೆ ಮಹಾಭಾರತ ಕಾಲದಲ್ಲಿ ಪ್ರಾರಂಭವಾದುದೂ ಅಲ್ಲ, ಅಲ್ಲಿಯೇ ನಿಂತುಹೋದದ್ದೂ ಅಲ್ಲ. ಅವನ ಜಾತಿ ಯಾವುದು ಎಂಬ ಪ್ರಶ್ನೆ ಈಗಲೂ ಅಷ್ಟೇ ಜೀವಂತ. ಈ ಸಮಸ್ಯೆ ಈಗಲೂ ಜ್ವಲಂತ. ಕರ್ಣನ ಕುಲದ ಪ್ರಶ್ನೆಯನ್ನು ಎತ್ತಿಕೊಂಡು ರಚಿಸಲ್ಪಟ್ಟ ಮತ್ತೊಂದು ನಾಟಕ ಕುಲಂ.

ಪಾಂಡವರಿಗೂ ಕೌರವರಿಗೂ ನಡೆದ ಮಹಾಭಾರತ ಯುದ್ಧದ ಸೆಲೆಯೊಂದರ ಮೇಲೆ ಈ ನಾಟಕ ನಿಂತಿದೆ. ಕುಲದ ಕಾರಣದಿಂದ ಅವಮಾನಕ್ಕೊಳಗಾಗುವ ಕರ್ಣ, ಅದೇ ಕಾರಣದಿಂದ ವಂಚಿತನಾಗುವ ಏಕಲವ್ಯ ಇಬ್ಬರೂ ವಾಸ್ತವವಾಗಿ ಯಾರದೋ ಅಧಿಕಾರದ ಹಂಬಲಕ್ಕಾಗಿ ಬಲಿಯಾಗುವ ಪಾತ್ರಗಳು. ಯುದ್ಧದ ಹಿನ್ನೆಲೆಯಲ್ಲಿ ಜಾತಿ ಸಮಸ್ಯೆಯನ್ನು ಚರ್ಚೆಗೆ ಒಳಪಡಿಸಿರುವುದು ನಾಟಕದ ವಿಶೇಷ.

ಸ್ಥಳ: ರವೀಂದ್ರ ಕಲಾಕ್ಷೇತ್ರ. ಜೆ.ಸಿ.ರಸ್ತೆ.

ಪ್ರವಚನ

ರಾಘವೇಂದ್ರ ಸೇವಾ ಸಮಿತಿ: ಪುರಂದರದಾಸರ ಪುಣ್ಯದಿನ ಮಹೋತ್ಸವದಲ್ಲಿ ರಮೇಶಾಚಾರ್ಯ ಅವರಿಂದ ಪುರಂದರದಾಸರ ಕುರಿತು ಪ್ರವಚನ.

ಸ್ಥಳ: 6ನೇ ಕ್ರಾಸ್, ಸುಧೀಂದ್ರ ನಗರ, ಮಲ್ಲೇಶ್ವರ. ಸಂಜೆ 6.30.

ಸಂಗೀತೋತ್ಸವ

ನಾದಜ್ಯೋತಿ ತ್ಯಾಗರಾಜ ಸ್ವಾಮಿ ಭಜನಾ ಸಭಾ: 47ನೇ ನಾದಜ್ಯೋತಿ ಸಂಗೀತೋತ್ಸವ. ಪುರಂದರದಾಸರ ಆರಾಧನೋತ್ಸವದಲ್ಲಿ ಮೋಹನ್ ಕುಮಾರ್ ದಾಸ್ ಅವರಿಂದ ಹರಿಕಥೆ. ಟಿ.ಎನ್. ರಾಮಮೂರ್ತಿ (ಕೀಬೋರ್ಡ್), ಎಚ್.ಎಲ್.ಗೋಪಾಲಕೃಷ್ಣ. (ತಬಲ).

ಸ್ಥಳ: ರವಿಶಂಕರ್ ಸಭಾಂಗಣ, ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಅವರಣ, 8ನೇ ಕ್ರಾಸ್, ಮಲ್ಲೇಶ್ವರಂ. ಸಂಜೆ 6ಕ್ಕೆ.

ಗಾಯನ

ಸಂಗೀತ ಕಲಾ ಭವನ: ಸಂಗೀತ ಸಂಜೆಯಲ್ಲಿ ದತ್ತಾತ್ರೇಯ ವೇಲಾಂಕರ್, ಇಂದೂಧರ್ ನಿರೋದಿ, ವ್ಯಾಸಮೂರ್ತಿ ಕಟ್ಟಿ ಅವರಿಂದ ಹಾಡುಗಾರಿಕೆ. ಮಧುಸೂದನ್ (ಹಾರ್ಮೋನಿಯಂ), ಗುರುಚರಣ್ ಗಾರ್ಡ್ (ತಬಲಾ).

ಸ್ಥಳ: `ವೇದ~, 323/51, 5ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ರಾಜಮಹಲ್ ವಿಲಾಸ್, ಸದಾಶಿವ ನಗರ. ಸಂಜೆ 5.30.

ಉಪನ್ಯಾಸ

ಧ್ಯಾನ ಮತ್ತು ವ್ಯಾಸಂಗ ವೃತ್ತ:ಎಸ್.ಆರ್.ಅರುಣಾ ಅವರಿಂದ `ದೇಹ, ಮನಸ್ಸು, ಮತ್ತು ಆತ್ಮ~ ವಿಷಯದ ಕುರಿತು ಉಪನ್ಯಾಸ.

ಸ್ಥಳ: ಜಯನಗರ `ಟಿ~ ಬ್ಲಾಕ್, ಎಸ್.ಎಸ್. ಎಂ.ಆರ್.ವಿ. ಪಿ.ಯು. ಕಾಲೇಜು. ಸಂಜೆ 6.30.

ಕಿಂಕಿಣಿ ನೃತ್ಯೋತ್ಸವ

28ನೇ ಕಿಂಕಿಣಿ ನೃತ್ಯೋತ್ಸವದಲ್ಲಿ ಸಂಜೆ 6.15ಕ್ಕೆ ಐಶ್ವರ್ಯಾ ನಿತ್ಯಾನಂದ ಅವರಿಂದ ಭರತನಾಟ್ಯ ಮತ್ತು ಭಾರತಿ ಶಿವಾಜಿ ಅವರಿಂದ ಮೋಹಿನಿ ಆಟ್ಟಂ ಪ್ರದರ್ಶನ.

ಸ್ಥಳ: ಜಯನಗರದ ಜೆ.ಎಸ್.ಎಸ್. ಸಭಾಂಗಣ.

ಆರಾಧನಾ ಸಪ್ತಾಹ

ಬಿಟಿಎಂ ಕಲ್ಚರಲ್ ಅಕಾಡೆಮಿ: 20ನೇ ಆರಾಧನಾ ಸಪ್ತಾಹ. ಶತಾವಧಾನಿ ಡಾ.ಆರ್.ಗಣೇಶ್ ಅವರಿಂದ ಉದ್ಘಾಟನೆ. ವಿದುಷಿ ಕಲಾವತಿ ಅವಧೂತ್ ಅವರ ಶಿಷ್ಯೆಯರಿಂದ ಗಣೇಶ ಸ್ತುತಿ. ಶಂಕರಿ ಮೂರ್ತಿ ಬಲಿಲ ಅವರಿಂದ ಗಾಯನ.

ಮೈಸೂರು ದಯಾಕರ (ಪಿಟೀಲು), ಸಿ.ಚೆಲುವರಾಜು (ಮೃದಂಗ), ಎಸ್.ಎನ್.ನಾರಾಯಣ ಮೂರ್ತಿ(ಘಟ), ಭಾಗ್ಯಲಕ್ಷ್ಮಿ ಕೃಷ್ಣ (ಮೋರ್ಚಿಂಗ್) ಸಂಜೆ 5.

ರಮಣ ಮಹರ್ಷಿ ಅಕಾಡೆಮಿ, 3ನೇ ಅಡ್ಡರಸ್ತೆ, 3ನೇ ಹಂತ, ಜೆ.ಪಿ.ನಗರ.

ದಾಸವಾಣಿ

ಗುರುರಾಜ ಸೇವಾ ಸಮಿತಿ: ಪುರಂದರದಾಸರ ಆರಾಧನೆ ಕಾರ್ಯಕ್ರಮದಲ್ಲಿ ವಿದ್ವಾನ್ ರಾಯಚೂರು ಶೇಷಗಿರಿದಾಸ್ ಅವರಿಂದ ದಾಸವಾಣಿ. ನಂ.5, ಎರಡನೇ ಮುಖ್ಯರಸ್ತೆ, 8ನೇ ಎ ಕ್ರಾಸ್, ಯಲಹಂಕ ಉಪನಗರ. ಸಂಜೆ 7.

ದೇವರನಾಮ ಗಾಯನ

ದೇವಗಿರಿ ಶ್ರೀ ಗುರು ಸೇವಾ ಸಮಿತಿ: ಪುರಂದರದಾಸರ ಆರಾಧನಾ ಪ್ರಯುಕ್ತ ದೇವರನಾಮಗಳು ಮತ್ತು ಬಹುಮಾನ ವಿತರಣೆ.

ಸ್ಥಳ: 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT