ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಕರ್ಷಿಸುತ್ತಿರುವ ಕೆಸಿ ಪಾರ್ಕ್

Last Updated 8 ಆಗಸ್ಟ್ 2011, 8:35 IST
ಅಕ್ಷರ ಗಾತ್ರ

ಧಾರವಾಡ: ಜನರಿಂದ ದೂರವಾಗಿದ್ದ ಪಾರ್ಕ್, ಇದೀಗ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದೆ. ಉದ್ಯಾನವನ ಎಂದು ಹೇಳಲು ಮುಜುಗುರ ಪಡುತ್ತಿದ್ದವರು ಇಂದು ಹೆಮ್ಮೆಯಿಂದ ಹೇಳುವಂತಾಗಿದೆ. ಅದರ ಹೆಸರು ಕಿತ್ತೂರ ಚೆನ್ನಮ್ಮ ಪಾರ್ಕ್. ಭಾನುವಾರವಂತೂ ಈ ಪಾರ್ಕಿನಲ್ಲಿ ಜನಜಾತ್ರೆ ನೆರೆದಿರುತ್ತದೆ.

ಸುಮಾರು ಒಂದು ವರ್ಷದಿಂದೀಚೆಗೆ ಈ ಪಾರ್ಕಿಗೆ ಜನರು ಬರುವಂತಾಗಿದೆ. ಈ ಮೊದಲು ಪಾರ್ಕಿಗೆ ಜನರು ಬರುವುದು ಕಡಿಮೆಯಿತ್ತು, ಬಂದರೂ ಬಹಳ ಹೊತ್ತು ಕಾಲಕಳೆಯುತ್ತಿರ ಲಿಲ್ಲ. ಅಲ್ಲಿರುವ ತ್ಯಾಜ್ಯವನ್ನು ನೋಡಿಯೇ ಅನೇಕರು ಪಾರ್ಕಿನ ಸಮೀಪ ಹಾಯುತ್ತಿರಲಿಲ್ಲ. ಆದರೆ ಈಗ ಪಾರ್ಕಿಗೆ ಹೊಸ `ಲುಕ್~ ನೀಡಲಾಗಿದೆ.

ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಪಾರ್ಕು ಅಭಿವೃದ್ಧಿ ಪಡಿಸಲಾಗಿದೆ. ನಿರ್ಮಿತಿ ಕೇಂದ್ರದವರು ಈ ಪಾರ್ಕ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ. ಕಳೆದ ವರ್ಷದ ಬಸವ ಜಯಂತಿ ದಿನ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹ ಈ ಪಾರ್ಕಿಗೆ ಭೇಟಿ ನೀಡಿ, ಅಭಿವೃದ್ಧಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಮೊದಲು ಪಾರ್ಕ್‌ನಲ್ಲಿ ಕೇವಲ ಹುಲ್ಲುಹಾಸು ಮಾತ್ರವಿತ್ತು. ಇದರ ಜೊತೆಗೆ ಥ್ಯಾಕರೆ ಸ್ಮಾರಕ ದುಃಸ್ಥಿತಿಯಲ್ಲಿತ್ತು. ಆದರೆ ಇಂದು ಹುಲ್ಲುಹಾಸಿನ ಜೊತೆಗೆ ಅನೇಕ ಆಕರ್ಷಕ ಮಕ್ಕಳ ಆಟಿಕೆಗಳು ಸಹ ಇವೆ.

ಕಾರಂಜಿ, ಸಂಜೆ ಹೊತ್ತಿಗೆ ಆಕರ್ಷಕ ಬೆಳಕು ಹಾಗೂ ಬೊಂಬೆಗಳು ಎಲ್ಲರನ್ನೂ ಆಕರ್ಷಿಸುತ್ತಿವೆ. ಪಾರ್ಕ್‌ನಲ್ಲಿ ಎಂಪಿ ಥಿಯೇಟರ್ ವ್ಯವಸ್ಥೆ ಸಹ ಇದೆ.

ಕೆ.ಸಿ. ಪಾರ್ಕ್‌ನಲ್ಲಿ ಈಗ ನೂರಾರು ಜನರು ವಾಯು ವಿಹಾರಕ್ಕೆ ಬರುತ್ತಾರೆ. ಪಾರ್ಕಿನ ಸುತ್ತಲೂ ಜಾಗಿಂಗ್ ಟ್ರ್ಯಾಕ್ ನಿರ್ಮಿಸಲಾಗಿದೆ. ಈ ಪಾರ್ಕ್‌ನಲ್ಲಿ ಪ್ರತಿನಿತ್ಯ ಯೋಗ, ನಗೆ ಕೂಟಗಳ ಚಟುವಟಿಕೆ ನಸುಕಿನ ಜಾವ ನಡೆದಿರುತ್ತದೆ.

ಗಿಡಮರಗಳು, ಹಲ್ಲುಹಾಸುಗಳು ಮತ್ತು ಇತರ ಸಸ್ಯಗಳನ್ನು ಈಗಿರುವ ಮರಗಳ ತೋಪಿನಲ್ಲಿ ಮಿಳಿತಗೊಳಿಸಲಾಗಿದೆ. ಥ್ಯಾಕರೆ ಸ್ಮಾರಕವನ್ನು ದುರಸ್ತಿ ಮಾಡಲಾಗಿದ್ದು, ಅದರಲ್ಲಿ ಥ್ಯಾಕರೆ ಕುರಿತು ಮಾಹಿತಿ ಸಹ ಒದಗಿಸಲಾಗಿದೆ.

`ಧಾರವಾಡ ಶಹರದಲ್ಲಿ ಇಂಥದೊಂದು ಅಚ್ಚುಕಟ್ಟಾದ ಪಾರ್ಕಿನ ಅವಶ್ಯಕತೆ ಇತ್ತು. ಕೆಸಿ ಪಾರ್ಕ್ ದಶಕಗಳ ಇತಿಹಾಸ ಹೊಂದಿದ್ದರೂ ಇಲ್ಲಿಯವರೆಗೆ ಯಾರೂ ಅದರ ಅಭಿವೃದ್ಧಿಗೆ ಪ್ರಯತ್ನ ಮಾಡಿರಲಿಲ್ಲ. ಆದರೆ ಈಗ ಪಾರ್ಕಿನ ಸೌಂದರ್ಯ ಹೆಚ್ಚಿದೆ~ ಎಂದು ಪಾರ್ಕಿನಲ್ಲಿ ವಿಹಾರಕ್ಕೆ ಆಗಮಿಸಿದ್ದ ರವಿಕುಮಾರ ತೆಂಬದಮನಿ ಹೇಳುತ್ತಾರೆ.

`ಮಕ್ಕಳ ಆಟಿಕೆಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿಡಬೇಕು~ ಎಂದು ರಷ್ಮಿ ಕುಲಕರ್ಣಿ ಹೇಳುತ್ತಾರೆ.
`ಸುಮಾರು 10 ಎಕರೆ ವಿಸ್ತೀರ್ಣ ಹೊಂದಿರುವ ಈ ಪಾರ್ಕ್ ಅನ್ನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಪಾರ್ಕಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಇದರ ನಿರ್ವಹಣೆ ಸಹ ನಾವೇ ನೋಡಿಕೊಳ್ಳಬೇಕಾಗಿದೆ~ ಎಂದು ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಚಂದ್ರಶೇಖರ ಹೇಳುತ್ತಾರೆ.

`ಈ ಪಾರ್ಕ್ ಪಾಲಿಕೆ ವ್ಯಾಪ್ತಿಯಲ್ಲಿದ್ದರೂ, ಜಿಲ್ಲಾಧಿಕಾರಿಗಳು ನಿರ್ವಹಣೆ ಜವಾಬ್ದಾರಿ ನಮಗೆ ವಹಿಸಿದ್ದಾರೆ. ವಿದ್ಯುತ್ ಬಿಲ್, ಸ್ವಚ್ಛತೆ ಸೇರಿದಂತೆ ಪ್ರತಿ ತಿಂಗಳು ಕನಿಷ್ಠ 40,000 ರೂ. ನಿರ್ವಹಣಾ ವೆಚ್ಚ ತಗಲುತ್ತಿದೆ. ಇಷ್ಟು ಹಣವನ್ನು ತರುವುದು ಕಷ್ಟವಾಗುತ್ತಿದೆ~ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT