ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್: ಅಣು ಸ್ಥಾವರದಿಂದ ವಿಕಿರಣಯುಕ್ತ ನೀರು ಸೋರಿಕೆ

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಟೋಕಿಯೊ (ಎಪಿ): ಸುನಾಮಿಯಿಂದ ಹಾನಿಗೊಳಗಾದ ಜಪಾನ್ ಅಣು ಸ್ಥಾವರದಲ್ಲಿನ ತಾತ್ಕಾಲಿಕ ಸಂಗ್ರಹಾಗಾರದಿಂದ ಇನ್ನೊಂದು ಸಂಗ್ರಹಾಗಾರಕ್ಕೆ ಭಾರಿ ಪ್ರಮಾಣದ ವಿಕಿರಣಯುಕ್ತ ನೀರನ್ನು ಸ್ಥಳಾಂತರಿಸುತ್ತಿದ್ದಾಗ ಸೋರಿಕೆಯಾಗಿದೆ.

ಸಂಗ್ರಹಾಗಾರದ ಒಳತುದಿಯಿಂದ 120 ಟನ್‌ಗಳಷ್ಟು ವಿಕಿರಣಯುಕ್ತ ನೀರು ಸೋರಿಕೆಯಾಗಿದೆ. ಇದರ ಸ್ವಲ್ಪ ಪ್ರಮಾಣ ಮಣ್ಣಿನಲ್ಲಿ ಸೋರಿಕೆಯಾಗಿರುವ ಸಾಧ್ಯತೆ ಕೂಡ ಇದೆ. ವಿಕಿರಣಯುಕ್ತ ನೀರನ್ನು ಸಮೀಪದ ಟ್ಯಾಂಕ್‌ಗೆ ಸ್ಥಳಾಂತರಿಸುವ ಕಾರ್ಯ ಇನ್ನಷ್ಟು ದಿನ ನಡೆಯಲಿದೆ ಎಂದು ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪೆನಿ (ಟೆಪ್ಕೊ) ತಿಳಿಸಿದೆ.

ಈ ವಾರದ ಆರಂಭದಲ್ಲಿಯೇ ಸೋರಿಕೆಯನ್ನು ಟೆಪ್ಕೊ ಪತ್ತೆ ಹಚ್ಚಿತ್ತು. ಸಂಗ್ರಹಾಗಾರದ ಹೊರಗಡೆಯಿಂದ ಪಡೆದ ನೀರಿನ ಮಾದರಿಯಲ್ಲಿ ವಿಕಿರಣದ ಪ್ರಮಾಣ ಹೆಚ್ಚಿರುವುದು ತಿಳಿದು ಬಂದಿದೆ ಎಂದು ಟೆಪ್ಕೊ ಹೇಳಿದೆ.

ವಿಕಿರಣಯುಕ್ತ ನೀರಿನ ಸೋರಿಕೆಯಿಂದ ಸದ್ಯ ಪರಿಸರದ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ. ಆದರೆ, ವಿಕಿರಣಯುಕ್ತ ನೀರಿನ ಸ್ಥಳಾಂತರ ಕಾರ್ಯಕ್ಕೆ ಇದರಿಂದ ತೊಡಕಾಗಬಹುದು ಎಂದಿದೆ.

2011ರಲ್ಲಿ ಸುನಾಮಿಯಿಂದ ಹಾನಿಗೊಳಗಾದ ಫುಕುಶಿಮಾದ ಡೈ-ಇಚಿಯಲ್ಲಿ ರಿಯಾಕ್ಟರ್ ತಣ್ಣಗಿಡಲು ಬಳಸುತ್ತಿದ್ದ ಇಂಧನದ ಒಂದು ಭಾಗ ಈ ವಿಕಿರಣಯುಕ್ತ ನೀರು. ವಿಕಿರಣಯುಕ್ತ ನೀರಿನ ಸಂಗ್ರಹಕ್ಕಾಗಿ ಟೆಪ್ಕೊ ಪರದಾಡುತ್ತಿದೆ.

ಶೀಥಲೀಕರಣ ವಿಫಲ

ಫುಕುಶಿಮಾದ ಅಣುಸ್ಥಾವರದ ರಿಯಾಕ್ಟರ್‌ವೊಂದರ ಶೀಥಲೀಕರಣ ವ್ಯವಸ್ಥೆ ಒಂದೇ ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ವೈಫಲ್ಯಕ್ಕೆ ಒಳಗಾಗಿದೆ. ಆದರೆ, ಇದರಿಂದ ಸದ್ಯಕ್ಕೆ ಯಾವುದೇ ರೀತಿಯ ಅಪಾಯ ಉಂಟಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT