ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್: ಚಂಡಮಾರುತಕ್ಕೆ 20 ಬಲಿ

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಟೋಕಿಯೊ (ಎಪಿ): ಜಪಾನಿನ ಉತ್ತರ ಕರಾವಳಿ ಭಾಗದಲ್ಲಿ ಹಾದು ಹೋದ `ಟಲಾಸ್~ ಚಂಡಮಾರುತದಿಂದಾಗಿ ಸುರಿದ ಭಾರಿ ಮಳೆ ಹಾಗೂ ಭೂ ಕುಸಿತದಿಂದಾಗಿ 20ಜನರು ಮೃತಪಟ್ಟಿದ್ದಾರೆ. 43 ನಾಗರಿಕರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಪಶ್ಚಿಮ ಮತ್ತು ಕೇಂದ್ರ ಜಪಾನಿನ 4.6 ಲಕ್ಷ ನಿವಾಸಿಗಳಿಗೆ ಸರ್ಕಾರ ಸೂಚಿಸಿದೆ ಎಂದು ಕ್ಯೊಡೊ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಋತುವಿನಲ್ಲಿ ಅಪ್ಪಳಿಸಿದ 12ನೇ ಚಂಡಮಾರುತವಾದ ಟಲಾಸ್ ಜಪಾನಿನ ಉತ್ತರ ಭಾಗದ ಸಮುದ್ರದಲ್ಲಿ ಹಾದು ಹೋಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತವು ಶನಿವಾರ ರಾತ್ರಿ ದಕ್ಷಿಣ ಜಪಾನಿನಲ್ಲಿರುವ ಶಿಕೋಕು ದ್ವೀಪ ಮತ್ತು ಮುಖ್ಯ ದ್ವೀಪದ ಕೇಂದ್ರ ಭಾಗದ ಮೂಲಕ ಹಾದು ಹೋಗಿತ್ತು.ಚಂಡಮಾರುತವು ನಿಧಾನವಾಗಿ ಚಲಿಸುತ್ತಿರುವು ದರಿಂದ ತೀವ್ರ ಗಾಳಿ ಮಳೆ ಇನ್ನೂ ಮುಂದುವರಿಯ ಸಾಧ್ಯತೆ ಇದ್ದು, ಪ್ರವಾಹ, ಭೂಕುಸಿತ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT