ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್: ಪರಮಾಣು ವಿದ್ಯುತ್ ಸ್ಥಾವರದಲ್ಲಿ ವಿಕಿರಣ ಸೋರಿಕೆ

Last Updated 7 ಏಪ್ರಿಲ್ 2013, 11:26 IST
ಅಕ್ಷರ ಗಾತ್ರ

ಫಕುಶಿಮಾ (ಪಿಟಿಐ): ಜಪಾನ್‌ನ ಫಕುಶಿಮಾ ಪರಮಾಣು ವಿದ್ಯುತ್ ಸ್ಥಾವರದ ಎರಡನೇ ಘಟಕದಲ್ಲಿ ಭಾನುವಾರ ವಿಕಿರಣ ಸೋರಿಕೆಯಾಗಿದೆ ಎಂದು ಇಲ್ಲಿನ ಪರಮಾಣು ವಿದ್ಯುತ್ ಸ್ಥಾವರದ ಮೂಲಗಳು ತಿಳಿಸಿವೆ.

ಪರಮಾಣು ರಿಯಾಕ್ಟರ್ ಸುತ್ತ ಹಾಯಿಸುವ ನೀರಿನಲ್ಲಿ ವಿಕಿರಣಗಳ ಸೋರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 120 ಟನ್‌ನಷ್ಟು ವಿಕಿರಣ ಸೋರಿಕೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ವಿಕಿರಣ ಬೇರತ ನೀರನ್ನು ಭೂಮಿಯೊಳಗೆ ಹರಿಯ ಬಿಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಿಯಾಕ್ಟರ್‌ಗೆ ಅಳವಡಿಸಿರುವ ಶೀತಲಿಕರಣದ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದರಿಂದ  ಸೋರಿಕೆ ಉಂಟಾಗಿದೆ ಎನ್ನಲಾಗಿದೆ. ಇದರ ದುರಸ್ತಿಗೆ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ ಎಂದು ಜಪಾನ್ ಮೂಲಗಳು ತಿಳಿಸಿವೆ. ಈ ಸೋರಿಕೆಯಿಂದ ಗಾಬರಿ ಪಡಬೇಕಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT