ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ಗೆ ಕೊಪ್ಪಳ ವಿದ್ಯಾರ್ಥಿನಿ

Last Updated 13 ಫೆಬ್ರುವರಿ 2011, 8:50 IST
ಅಕ್ಷರ ಗಾತ್ರ

ಕೊಪ್ಪಳ: ಜಪಾನ್ ದೇಶದ ಪ್ರತಿಷ್ಠಿತ ಕಾರ್ಯಕ್ರಮವಾದ ‘ಜಪಾನ್-ಈಸ್ಟ್ ಏಶಿಯಾ ನೆಟ್‌ವರ್ಕ್ ಆಫ್ ಎಕ್ಸ್‌ಚೇಂಜ್ ಫಾರ್ ಸ್ಟುಡೆಂಟ್ಸ್ ಆ್ಯಂಡ್ ಯೂಥ್’ (ಜೆ.ಇ.ಎನ್. ಇ.ಎಸ್.ವೈ.ಎಸ್.) ಅಂಗವಾಗಿ ದೇಶದಿಂದ ಜಪಾನ್ ದೇಶಕ್ಕೆ ತೆರಳುವ ತಂಡದಲ್ಲಿ ನಗರದ ನಿಶಾ ಎನ್.ಜೆ. ಅವಕಾಶ ಪಡೆದಿದ್ದಾಳೆ.

ನಗರದ ಎಸ್.ಎಫ್.ಎಸ್. ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದ ನಿಶಾ 2009-10ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಳು.
ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರಿ ಜಪಾನ್ ದೇಶ ಸಂದರ್ಶಿಸುವ ಅವಕಾಶ ಪಡೆದಿರುವ ನಿಶಾಗೆ ಶಾಲೆಯ ಪ್ರಾಚಾರ್ಯ, ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT