ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ನಲ್ಲಿ ಬೃಹತ್ ರ‌್ಯಾಲಿ

Last Updated 11 ಜೂನ್ 2011, 19:30 IST
ಅಕ್ಷರ ಗಾತ್ರ

ಟೋಕಿಯೊ (ಎಪಿ ವರದಿ): ಅಣು ಶಕ್ತಿ ಬಳಕೆಯನ್ನು ವಿರೋಧಿಸಿ ಜಪಾನಿಯರು ಶನಿವಾರ ಟೋಕಿಯೊದಲ್ಲಿ ಬೃಹತ್ ರ್ಯಾಲಿ ನಡೆಸಿದರು. ಪ್ರಕೃತಿ ವಿಕೋಪ ದುರಂತ ಸಂಭವಿಸಿ ಮೂರು ತಿಂಗಳು ಕಳೆದ ಕಾರಣ ಈ ರ‌ಯಾಲಿಯನ್ನು ಆಯೋಜಿಸಲಾಗಿತ್ತು.

ಮಾಸ್ಕೊ ವರದಿ:
ಜಪಾನ್‌ನಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಮೂರು ತಿಂಗಳು ಕಳೆದರೂ 90 ಸಾವಿರಕ್ಕೂ ಹೆಚ್ಚು ಸಂತ್ರಸ್ತರು ಇನ್ನೂ ನಿರಾಶ್ರಿತರ ಶಿಬಿರದಲ್ಲಿಯೇ ಇದ್ದಾರೆ ಎಂದು ಎನ್‌ಎಚ್‌ಕೆ ವಾಹಿನಿ ಶನಿವಾರ ವರದಿ ಮಾಡಿದೆ.

ಸ್ಥಳಾಂತರಿಸಲಾದ ಸಂತ್ರಸ್ತರಿಗಾಗಿ 28 ಸಾವಿರ ತಾತ್ಕಾಲಿಕ ಮನೆ ನಿರ್ಮಿಸಲಾಗಿದೆ. ಇನ್ನು 52 ಸಾವಿರ ಮನೆ ನಿರ್ಮಿಸಲು ಜಪಾನ್ ಸರ್ಕಾರ ಯೋಜನೆ ರೂಪಿಸಿದೆ. ಆದರೆ. ಅನೇಕರು ಅಲ್ಲಿಗೆ ಹೋಗಲು ನಿರಾಕರಿಸುತ್ತಿದ್ದಾರೆ. ಜಪಾನ್ ಭೂಕಂಪ ಮತ್ತು ಸುನಾಮಿಯಿಂದ 15,405 ಮಂದಿ ಅಸುನೀಗಿದ್ದಾರೆ. 8,095 ಮಂದಿ ಕಣ್ಮರೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT