ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ನಿಂದ ಅತಿವೇಗದ ಸೂಪರ್‌ಕಂಪ್ಯೂಟರ್

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ಟೋಕಿಯೋ (ಎಎಫ್‌ಪಿ): ಜಪಾನ್ ತಯಾರಿಸಿರುವ ನೂತನ ಸೂಪರ್‌ಕಂಪ್ಯೂಟರ್‌ವೊಂದು ಜಗತ್ತಿನಲ್ಲೇ ಅತಿವೇಗದ ಸೂಪರ್‌ಕಂಪ್ಯೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಫ್ಯೂಜಿತ್ಸು ಲಿ. ಕಂಪೆನಿ ಹಾಗೂ ಸರ್ಕಾರಿ ಹೂಡಿಕೆಯ ಸಂಶೋಧನಾ ಸಂಸ್ಥೆ ರಿಕೆನ್ ಇನ್ಸ್‌ಟಿಟ್ಯೂಟ್ ಅಭಿವೃದ್ಧಿ ಪಡಿಸಿರುವ ಕೆ.ಕಂಪ್ಯೂಟರ್ ಈವರೆಗಿನ ಅತಿವೇಗದ ಸೂಪರ್‌ಕಂಪ್ಯೂಟರ್ ಆಗಿ ಹೊರಹೊಮ್ಮಿದೆ. ಇದು ಈ ವರೆಗಿನ ನಂ.1 ಸೂಪರ್‌ಕಂಪ್ಯೂಟರ್ ಆಗಿದ್ದ ಚೀನದ ಕಂಪ್ಯೂಟರ್‌ಗಿಂತ ಮೂರು ಪಟ್ಟು ವೇಗದಲ್ಲಿ ಲೆಕ್ಕ ಮಾಡುತ್ತದೆ.

ಈ ಹೊಸ ಕಂಪ್ಯೂಟರ್ ಪ್ರತಿ ಸೆಕೆಂಡ್‌ಗೆ 8.162 ಕ್ವಾಡ್ರಿಲಿಯನ್ (ಒಂದು ಕ್ವಾಡ್ರಿಲಿಯನ್ ಎಂದರೆ ಒಂದರ ಪಕ್ಕ 15 ಸೊನ್ನೆಗಳು) ಲೆಕ್ಕಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT