ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮಾತ್‌ ನಾಯಕ ಮುಲ್ಲಾಗೆ ಗಲ್ಲು

1971ರ ಯುದ್ಧಾಪರಾಧ: ಪುನರ್‌­ಪರಿಶೀಲನಾ ಅರ್ಜಿ ತಿರಸ್ಕರಿಸಿದ ‘ಸುಪ್ರೀಂ’
Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಢಾಕಾ (ಪಿಟಿಐ): ಬಾಂಗ್ಲಾದೇಶ ವಿಮೋ­ಚನಾ ಹೋರಾಟ ವೇಳೆ ಎಸ­ಗಿದ ಯುದ್ಧ ಅಪರಾಧಕ್ಕಾಗಿ ಮೂಲ­ಭೂತ­ವಾದಿ ಜಮಾತೆ ಇಸ್ಲಾಮಿ
ಪಕ್ಷದ ಉನ್ನತ ನಾಯಕ ಅಬ್ದುಲ್‌ ಖಾದರ್‌ ಮುಲ್ಲಾನನ್ನು ಗುರುವಾರ ರಾತ್ರಿ ಇಲ್ಲಿ ಗಲ್ಲಿಗೇರಿಸಲಾಯಿತು.

ಇಲ್ಲಿನ ಕೇಂದ್ರ ಕಾರಾಗೃಹದಲ್ಲಿದ್ದ 65 ವರ್ಷದ ಮುಲ್ಲಾನ ವಿರುದ್ಧ ವಿಧಿಸಿದ ಮರಣದಂಡನೆ­ಯನ್ನು ಸುಪ್ರೀಂ­ಕೋರ್ಟ್‌ ಎತ್ತಿ ಹಿಡಿದ ಕೆಲವೇ ಗಂಟೆ­ಗಳಲ್ಲಿ (ಸ್ಥಳೀಯ ಕಾಲಮಾನ ರಾತ್ರಿ 10.01 ಕ್ಕೆ ಇದೇ ಜೈಲಿನಲ್ಲಿ) ಗಲ್ಲುಶಿಕ್ಷೆ ಜಾರಿಯಾಗಿದೆ.

1971ರ ಯುದ್ಧ ಅಪರಾಧಗಳಿಗಾಗಿ ‘ಮೀರ್‌ಪುರದ ಕಟುಕ’ ಎಂದು ಕುಖ್ಯಾತಿ ಪಡೆದಿದ್ದ ಮುಲ್ಲಾ ತನ್ನ ವಿರುದ್ಧ ವಿಧಿ­ಸಿದ್ದ ಮರಣದಂಡನೆ­ ಪ್ರಶ್ನಿಸಿ ಸಲ್ಲಿಸಿದ್ದ ಪುನರ್‌ಪರಿ­ಶೀಲನಾ ಅರ್ಜಿ­ಯನ್ನು ಮುಖ್ಯ ನ್ಯಾಯ­ಮೂರ್ತಿ ಮುಜಮ್ಮಲ್‌ ಹುಸೇನ್‌ ತಳ್ಳಿಹಾಕಿದ್ದರು.

ಕೊನೆಯ ಗಳಿಗೆಯಲ್ಲಿ ಮುಲ್ಲ್ಲಾ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಿದ ಕಾರಣ ಮರಣದಂಡನೆಯನ್ನು ತಡೆಹಿಡಿ­ಯಲಾಗಿತ್ತು. ಆದರೆ, ಸುಪ್ರೀಂಕೋರ್ಟ್‌ ಮನವಿಯನ್ನು ತಳ್ಳಿಹಾಕಿದ ಕಾರಣ ಮುಲ್ಲಾ ನೇಣುಗಂಬಕ್ಕೆ ಏರಿದ್ದಾನೆ.

ಎರಡು ದಿನ ಮುಲ್ಲಾ ಅರ್ಜಿ ವಿಚಾ­ರಣೆ ನಡೆಸಿದ ನ್ಯಾಯಾಲಯದ ತೀರ್ಪು ಗುರುವಾರ ಹೊರಬೀಳಲಿದ್ದ ಕಾರಣ ಆವರಣ ಕಿಕ್ಕಿರಿದು ತುಂಬಿತ್ತು. ಹೀಗಾಗಿ ನ್ಯಾಯಾಲಯದ ಒಳಗೆ ಮತ್ತು ಹೊರಗೆ ವ್ಯಾಪಕ ಭದ್ರತೆ ಒದಗಿಸಲಾಗಿತ್ತು. 

1971ರಲ್ಲಿ ನಡೆದ ಬಾಂಗ್ಲಾ ವಿಮೋ­ಚನಾ ಹೋರಾಟದಲ್ಲಿ ಪಾಕಿ­ಸ್ತಾನ ಸೇನೆಯ ಜೊತೆ ಕೈಜೋಡಿಸಿದ್ದ ಮುಲ್ಲಾನು, ಮಕ್ಕಳು ಸೇರಿ ನೂರಾರು ಜನರ ಸಾವಿಗೆ ಕಾರಣನಾಗಿದ್ದ. ಈ ಪ್ರಕರಣದ ಸಂಬಂಧ ಶಿಕ್ಷೆಗೆ ಒಳಗಾದ ನಾಲ್ಕನೇ ಜಮಾತ್‌ ನಾಯಕ ಹಾಗೂ ಮೊದಲ ರಾಜಕಾರಣಿ ಈತನಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT