ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ವಿವಾದದಿಂದ ಗುಂಪು ಘರ್ಷಣೆ

Last Updated 6 ಜನವರಿ 2012, 9:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾದ ಪರಿ ಣಾಮ ಹತ್ತು ಮಂದಿ ಗಾಯಗೊಂಡ ಘಟನೆ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆಯಿತು. ಘಟನೆಯಲ್ಲಿ ಐವರು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದು, ಇನ್ನೂ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗ್ರಾಮದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು, ಅಹಿತಕರ ಘಟನೆ ಜರುಗದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಬೊಮ್ಮನಹಳ್ಳಿ ಗ್ರಾಮಸ್ಥರಾದ ಮುನಿಕೃಷ್ಣಪ್ಪ (52), ಶ್ರೀನಿವಾಸ್ (32), ಬಿ.ಆರ್.ಅಶೋಕ್ (30), ಬಿ.ಎಂ.ಅಶೋಕ್ (20) ಮತ್ತು ಎಸ್.ಮುನಿರಾಜು (45) ಅವರ ತಲೆಗೆ ಮತ್ತು ಕೈಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚುವರಿ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಘಟನೆ ವಿವರ: `1989-90ರಲ್ಲಿ ಬೊಮ್ಮಹಳ್ಳಿ ಗ್ರಾಮದ ಮಾವಿನತೋಪು ಬಳಿಯಿರುವ ಸುಮಾರು 20 ಎಕರೆ ಜಮೀನನ್ನು 25 ಮಂದಿಗೆ ಹಂಚಿಕೆ ಮಾಡಲಾಗಿತ್ತು. ಆದರೆ ಇದನ್ನು ಆಕ್ಷೇಪಿಸಿದ್ದ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಜಮೀನಿಗೆ ಸಂಬಂ ಧಿಸಿದಂತೆ ಹಲವು ವರ್ಷಗಳ ಕಾಲ ವ್ಯಾಜ್ಯ ನಡೆದು, ನ್ಯಾಯಾಲಯದಿಂದ ಆಜ್ಞೆಯೊಂದನ್ನು ಪಡೆದು ಕೆಲವರು ಗುರುವಾರ ಜಮೀನು ಸ್ವಾಧೀನಪಡಿಸಿ ಕೊಳ್ಳಲು ಮುಂದಾಗಿದ್ದಾರೆ~ ಎಂದು ಪೊಲೀಸರು ತಿಳಿಸಿದರು.

`ಮೂರು ಜೆಸಿಬಿ ವಾಹನಗಳ ಮೂಲಕ ಅಲ್ಲಿನ ಗಿಡಗಂಟಿಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಆಗ ಕೆಲ ಗ್ರಾಮಸ್ಥರನ್ನು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಬಳಿಕ ಮಾರಕಾಸ್ತ್ರಗಳಿಂದ ಘರ್ಷಣೆ ನಡೆದಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಿದೆವು. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು. ಗ್ರಾಮದಲ್ಲಿ ಪೊಲೀಸ್ ಪಹರೆ ವಿಧಿಸಲಾಗಿದೆ. ಎರಡೂ ಗುಂಪಿನವರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು~ ಎಂದು ಅವರು ಹೇಳಿದರು.

ಜಮೀನು ಹಂಚಿಕೆ ಸಮರ್ಪಕ ವಾಗಿಲ್ಲ: `ಇಷ್ಟೆಲ್ಲ ಘರ್ಷಣೆ ಉಂಟಾಗಲು ಮತ್ತು ಶಾಂತಿ ಕದಡಲು ಜಮೀನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿದ್ದವರದ್ದೇ ತಪ್ಪು. ಜೆಸಿಬಿ ವಾಹನಗಳ ಮೂಲಕ ಗಿಡಗಂಟಿಗಳನ್ನು ತೆರವುಗೊಳಿಸಿ, ಜಮೀನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿದ್ದೇಕೆ ಎಂದು ಪ್ರಶ್ನಿಸಲು ಮುಂದಾದಾಗ ಅವರ ಕಡೆ ಗುಂಪಿನವರು ನಮ್ಮ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿದರು. ಮಚ್ಚುಲಾಂಗ್‌ಗಳಿಂದ ಹಲ್ಲೆ ಮಾಡಿದ ಕಾರಣ ಐವರ ತಲೆಗೆ ಮತ್ತು ಕೈಗಳಿಗೆ ಏಟಾಗಿದೆ~ ಎಂದು ಬೊಮ್ಮನಹಳ್ಳಿ ಗ್ರಾಮದ ಮುಖಂಡ ರಾಮಸ್ವಾಮಿ ತಿಳಿಸಿದರು.

`ಅದು ಗೋಮಾಳ ಜಮೀನಾಗಿದ್ದು, ಜಮೀನು ಯಾರಿಗೆ ಸೇರಬೇಕು ಎಂದು ನಿರ್ಧರಿಸಬೇಕಾದದ್ದು ಸರ್ಕಾರ ಇಲ್ಲವೇ ನ್ಯಾಯಾಲಯ. ನ್ಯಾಯಾಲಯದ ವ್ಯಾಜ್ಯ ನಡೆಯುತ್ತಿರುವಾಗಲೇ ಕೆಲವರು ಜಮೀನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದು ಸರಿಯಲ್ಲ. ಜಮೀನು ಮೇಲೆ ಹಕ್ಕು ಯಾರ‌್ಯಾರಿಗೆ ಇದೆಯೋ ಅವರಿಗೆ ಹಂಚಿಕೆಯಾಗಬೇಕು~ ಎಂದು ಅವರು ಹೇಳಿದರು.

ಘಟನೆಯಿಂದ ಆಕ್ರೋಶಗೊಂಡ ಕೆಲ ಗ್ರಾಮಸ್ಥರು ಮತ್ತು ಮಹಿಳೆಯರು ಗ್ರಾಮಾಂತರ ಪೊಲೀಸ್ ಠಾಣೆ ಎದುರು ಜಮಾಯಿಸಿದರು.

ನಮಗೆ ನ್ಯಾಯ ಒದಗಿಸಬೇಕು ಎಂದು ಪಟ್ಟುಹಿಡಿದರು. ಅವರನ್ನು ಸಮಾಧಾನಪಡಿಸಿದ ಪೊಲೀಸರು ಗ್ರಾಮಕ್ಕೆ ಹಿಂದಿರುಗವಂತೆ ಸೂಚಿಸಿದರು. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ.ಪವಾರ್, ಸರ್ಕಲ್ ಇನ್ಸ್‌ಪೆಕ್ಟರ್ ಎಸ್. ಮಹೇಶ್‌ಕುಮಾರ್, ಡಿವೈಎಸ್ಪಿ ಕಾಖಂಡಕಿ, ಗ್ರಾಮಾಂತರ ಠಾಣೆ ಎಸ್‌ಐ ಬಿ.ಐ.ರೆಡ್ಡಿ ಅವರು ಗ್ರಾಮಸ್ಥರ ವಿಚಾರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT