ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು-ಕಾಶ್ಮೀರ ಉಳಿಸಿ: ಆಗ್ರಹ

Last Updated 7 ಜುಲೈ 2012, 5:50 IST
ಅಕ್ಷರ ಗಾತ್ರ

ಹಾಸನ: ಜಮ್ಮು ಮತ್ತು ಕಾಶ್ಮೀರದ ಬಗ್ಗೆ ದಿಲೀಪ್ ಪಡಗಾಂವ್‌ಕರ್ ನೇತೃತ್ವದ ಸಂವಾದಕಾರರ ತಂಡವು ನೀಡಿರುವ ವರದಿಯನ್ನು ವಿರೋಧಿಸಿ

ಹಾಗೂ ಜಮ್ಮುಕಾಶ್ಮೀರ ಉಳಿಸುವಂತೆ ಆಗ್ರಹಿಸಿ  ಜಮ್ಮು ಕಾಶ್ಮೀರ ಉಳಿಸಿ ಹೋರಾಟ ಸಮಿತಿ ಜಿಲ್ಲಾ ಘಟಕದವರು ಮುಖಂಡ ಸಿ.ಎಸ್.ಕೃಷ್ಣಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿದಿ ಮಾತನಾಡಿದ ಕೃಷ್ಣಸ್ವಾಮಿ, `ವರದಿಯಲ್ಲಿ ಅನೇಕ ಭಾರತ ವಿರೋಧಿ ಅಂಶಗಳಿರುವುದರಿಂದ ಇದನ್ನು ಒಪ್ಪಲಾಗದು. ರಾಷ್ಟ್ರಪತಿಗಳು ಈ ವರದಿಯನ್ನು ಭಾರತ ಸರ್ಕಾರದ ಗೃಹ ಸಚಿವಾಲಯದ ಅಧಿಕೃತ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿ, ಆ ಮೂಲಕ ಸಾರ್ವಜನಿಕ ಚರ್ಚೆಯಾಗಲು ಅನುವು ಮಾಡಿಕೊಡಬೇಕು~ ಎಂದರು.

ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ, ಅಫ್ಘಾನಿಸ್ತಾನಗಳು ಅಕ್ರಮವಾಗಿ ಭಾರತ ಗಡಿಯನ್ನು ಪ್ರವೇಶಿಸುತ್ತಿವೆ. ಪಾಕಿಸ್ತಾನವು ತಮ್ಮ ರಾಷ್ಟ್ರದಲ್ಲಿನ ಉಗ್ರರನ್ನು ಭಾರತದ ಗಡಿ ನುಸುಳುವಂತೆ ಪ್ರೇರೆಪಿಸಿ ಕಾಶ್ಮೀರದಲ್ಲಿ ದಿನ ನಿತ್ಯ ಹಿಂದೂ ಪ್ರಜೆಗಳ ಮೇಲೆ ದಾಳಿ ನಡೆಸಲು ಕುಮ್ಮಕು ನೀಡುತ್ತಿದೆ, ಕೇಂದ್ರ ಸರ್ಕಾರವು ಇದನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದು ಕೊಂಡಿಲ್ಲ  ಎಂದು~ ಅವರು ನುಡಿದರು.

ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಇದು ನಮ್ಮೆಲ್ಲರ ದೃಢ ಸಂಕಲ್ಪವಾಗಲಿ ಎಂದು ಜನರಲ್ಲಿ ಜಾಗೃತಿ ಮೂಡಿಸುವ  ನಿಟ್ಟಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ~ ಎಂದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಬರೆದ ಪತ್ರವನ್ನು ಸಲ್ಲಿಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಯಿಂದ ಮೆರವಣಿಗೆಯಲ್ಲಿ ಸಾಗಿದ ಸಮಿತಿ ಕಾರ್ಯಕರ್ತರು, ನಾಗರಿಕರು, ಹಾಗೂ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಮಾಜಿ ಸೈನಿಕ ಶೇಷಪ್ಪ, ಎಚ್.ಎಮ್.ಶಿವಣ್ಣ, ವೈ.ಎಸ್. ವೀರಭದ್ರಪ್ಪ, ನಾಗೇಶ್ ಇದ್ದರು.

ಚನ್ನರಾಯಪಟ್ಟಣ ವರದಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ 370 ವಿಧಿ ಸದಾ ಜಾರಿಯಲ್ಲಿರಬೇಕು ಎಂದು ತ್ರಿಸದಸ್ಯ ಸಮಿತಿ ನೀಡಿರುವ ವರದಿಯನ್ನು ವಿರೋಧಿಸಿದ ಕಾಶ್ಮೀರ ಉಳಿಸಿ ಹೋರಾಟ ಸಮಿತಿಯ ಸದಸ್ಯರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕೆ.ಆರ್. ಸರ್ಕಲ್‌ನಿಂದ ಮೆರವಣಿಗೆ ಹೊರಟ ಸದಸ್ಯರು ಮಿನಿ ವಿಧಾನ ಸೌಧದ ಆವರಣಕ್ಕೆ ಬಂದು ಸೇರಿದರು. ಕೇಂದ್ರ ಗೃಹ ಸಚಿವಾಲಯ 2010ರಲ್ಲಿ ಜಮ್ಮು,ಕಾಶ್ಮೀರ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ತ್ರಿಸದಸ್ಯರ ತಂಡ ರಚಿಸಿತು. ಈ ತಂಡ ನೀಡಿದ ವರದಿಯಿಂದ ದೇಶದ ಏಕತೆಗೆ ಧಕ್ಕೆಯಾಗಿದೆ.

ಸಂಧಾನಕಾರರ ವರದಿಯಿಂದ ಕಾಶ್ಮೀರಕ್ಕೆ ಒಳಿತು ಮಾಡುವುದಕ್ಕಿಂತ ಅದನ್ನು ಭಾರತದಿಂದ ಶಾಶ್ವತವಾಗಿ ಬೇರ್ಪಡಿಸುವ ಹುನ್ನಾರ ಅಡಗಿದೆ. ಈ ವರದಿಯಿಂದ ಪ್ರತ್ಯೇಕತವಾದಕ್ಕೆ ಪುಷ್ಟಿ ನೀಡಿದಂತಾಗುತ್ತದೆ ಎಂದು ದೂರಿದರು.

ಹಾಗಾಗಿ ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ ಆ ವರದಿಯನ್ನು ತಿರಸ್ಕರಿಸಿ ಭಾರತದ ಅಖಂಡತೆಯನ್ನು ಕಾಪಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಶಿರಸ್ತೇದಾರ್ ಸೋಮಶೇಖರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಡಾ.ಸಿ.ಎಸ್. ಶೇಷಶಯನ, ಪಟೇಲ್‌ಮಂಜುನಾಥ್, ಪಿ.ಎ. ನಾಗರಾಜು, ನಿಂಗೇಗೌಡ, ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT