ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನ್‌ ಪ್ರಜೆಗೆ ಹಂಪಿಯಲ್ಲಿ ತರ್ಪಣ

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಜರ್ಮನಿಯ ಪ್ರಜೆಯೊ­ಬ್ಬರು ತನ್ನ ಸ್ನೇಹಿತನ ಆತ್ಮಕ್ಕೆ ಶಾಂತಿ ಕೋರಲು ಹಂಪಿಯ ತುಂಗ­ಭದ್ರಾ ತಟದ ವೈದಿಕ ಮಂಟಪದಲ್ಲಿ ಹಿಂದೂ ಸಂಪ್ರದಾಯದಂತೆ ‘ನಾರಾಯಣ ಬಲಿ’ ನಡೆಸಿದ್ದಾರೆ.

ನಾಲ್ಕು ತಿಂಗಳ ಹಿಂದೆ ಸಂಭವಿಸಿದ  ಅಪಘಾತದಲ್ಲಿ ಮೃತಪ­ಟ್ಟ ಸ್ನೇಹಿತ ಪೀಟರ್‌ ಆತ್ಮಕ್ಕೆ ಶಾಂತಿ ಕೋರಲು ವಿಲಿಯಂ ಹಂಪಿಯಲ್ಲಿ ತರ್ಪಣ ನೀಡಿದರು ಪುರೋಹಿತರ ಮಾರ್ಗದರ್ಶ­ನ­ದಲ್ಲಿ ವಿಲಿಯಂ ಬುಧವಾರ ಬೆಳಿಗ್ಗೆ  ತಿಲ ಹೋಮ, ಪ್ರೇತ ಸಂಸ್ಕಾರ ಹಾಗೂ ದಶಪಿಂಡಾರಾಧನೆ ಮತ್ತಿತರ ವೈದಿಕ ಕೈಂಕರ್ಯ ನೆರ­ವೇರಿಸಿ­ದರು.

  ನದಿಯಲ್ಲಿ ಸ್ನಾನ ಮಾಡಿ ಶ್ವೇತ ವರ್ಣದ ಬಟ್ಟೆ ಧರಿ­ಸಿದ್ದ ವಿಲಿಯಂ ಎಲ್ಲ ಕ್ರಿಯಾ ವಿಧಿಗಳನ್ನು ಪೂರೈಸಿದ ನಂತರ ಸ್ನೇಹಿತನಿಗೆ ತರ್ಪಣ ಬಿಟ್ಟು ಬಂದರು.

‘ಪ್ರಜಾವಾಣಿ’ಯೊಂದಿಗೆ ಮಾತನಾ­ಡಿದ ಅವರು, ‘ಹಂಪಿಗೆ ಐದು ಬಾರಿ ಭೇಟಿ ನೀಡಿದ್ದೇನೆ. ಇಲ್ಲಿಯ ಸಂಸ್ಕೃತಿ, ಸಂಪ್ರ­ದಾಯ ತಿಳಿದುಕೊಂಡಿದ್ದೆ.   ಸ್ನೇಹಿತನ ಆತ್ಮಕ್ಕೆ ಶಾಂತಿ ಕೋರಲು ಈ ಕಾರ್ಯ ಮಾಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT