ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲವರ್ಣದಲ್ಲಿ ಭೂತಾನ್ ಸೊಬಗು

ಕಲಾಪ
Last Updated 24 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಕಲಾವಿದರೆಲ್ಲರಿಗೂ ನಿಸರ್ಗ ನೆಚ್ಚಿನ ವಸ್ತು. ಕಲಾವಿದ ಕೂಡಲಯ್ಯ ಹಿರೇಮಠ ಅವರಿಗೂ ಕೂಡ ಪ್ರಕೃತಿಯ ಮೇಲೆ ಇನ್ನಿಲ್ಲದ ಮೋಹ. ಈಶಾನ್ಯ ರಾಜ್ಯಗಳು ಹಾಗೂ ಭೂತಾನ್ ದೇಶದ ಸೊಬಗು ಇವರ ಕುಂಚದಲ್ಲಿ ಅದ್ಭುತವಾಗಿ ಮೈದಳೆದಿದೆ. ಈ ಕಲಾವಿದನ ಕುಂಚದಲ್ಲಿ ಮೂಡಿಬಂದ ಕಲಾಕೃತಿಗಳು ನಯನ ಮನೋಹರವಾಗಿವೆ.

ನಿವೃತ್ತಿ ಕಲಾ ಸಂಗಮ ಆಯೋಜಿಸಿರುವ `ರೆಮ್ನೋಂಟ್ಸ್ ಆಫ್ ಸಾಲಿಟ್ಯೂಡ್' ಪ್ರದರ್ಶನದಲ್ಲಿ ಕೂಡಲಯ್ಯ ಹಿರೇಮಠ ಅವರ ಅಪರೂಪದ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲಾರಸಿಕರದ್ದು.

`ನಿಸರ್ಗ ಮನುಷ್ಯನಿಗೆ ಸಂತಸ ಹಾಗೂ ಪ್ರೇರಣೆಯನ್ನು ನೀಡುತ್ತದೆ. ಇದನ್ನು ನನ್ನೆಲ್ಲಾ ಕೆಲಸಗಳಲ್ಲಿಯೂ ಬಿಂಬಿಸುವ ಪ್ರಯತ್ನ ಮಾಡಿದ್ದೇನೆ' ಎನ್ನುತ್ತಲೇ ಹಿರೇಮಠ್ ಅವರು ಕುಂಚದಲ್ಲಿ ರಮಣೀಯತೆ ಸೃಷ್ಟಿಸಿದ್ದಾರೆ.

ಅಂದಹಾಗೆ, ಕೂಡಲಯ್ಯ ಹಿರೇಮಠ್ ಅವರು ಜಲವರ್ಣ ಕಲಾಕೃತಿಗಳ ರಚನೆಯಲ್ಲಿ ದೊಡ್ಡ ಹೆಸರು ಮಾಡಿದವರು. ಇವರು ಪುಣೆಯ ಅಭಿನವ ಕಲಾ ಮಹಾವಿದ್ಯಾಲಯದಿಂದ ಫೈನ್ ಆರ್ಟ್ಸ್‌ನಲ್ಲಿ ಪದವಿ ಪಡೆದಿದ್ದಾರೆ.

ಈವರೆಗೆ ಹಲವು ಏಕವ್ಯಕ್ತಿ ಹಾಗೂ ಸಮೂಹ ಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ. ಅತೀ ಶ್ರೇಷ್ಠ 50 ಜಲವರ್ಣ ಕಲಾವಿದರ ಪೈಕಿ ಸ್ಥಾನ ಪಡೆದುಕೊಂಡ ಅಗ್ಗಳಿಕೆ ಇವರದ್ದು.

ಅಂತರರಾಷ್ಟ್ರೀಯ ಕಲಾ ಹಾಗೂ ಸಾಂಸ್ಕೃತಿಕ ಘಟಕ ಐಡಬ್ಲ್ಯೂಸಿಎಸ್‌ಎಸ್ ವತಿಯಿಂದ ಪ್ರಶಂಸೆಗೂ ಪಾತ್ರರಾಗಿದ್ದಾರೆ. ಇವರು ಪ್ರಸ್ತುತ ಕಲಾ ಜಗತ್ತಿನಲ್ಲಿ ಅತಿ ಜನ ಮೆಚ್ಚುಗೆಯ ಕಲಾವಿದರಾಗಿ ಬೆಳೆದಿದ್ದಾರೆ.

ಕೂಡಲಯ್ಯ ಹಿರೇಮಠ್ ಅವರ ವರ್ಣಚಿತ್ರ ಕಲೆಗೆ ನಿಸರ್ಗ ಹಾಗೂ ಗ್ರಾಮೀಣ ಭಾರತೀಯ ಪ್ರದೇಶಗಳ ಸುಂದರ ದೃಶ್ಯಗಳೇ ಪ್ರೇರಣೆ. ಇವರ ಕಲೆಯಲ್ಲಿ ಮಿಶ್ರ ಸಂದೇಶಗಳನ್ನು ಕಾಣಬಹುದು.

ಸ್ಥಳ: ನಿವೃತ್ತಿ ಕಲಾ ಸಂಗಮ, ನಂ. 72, ವಿಶ್ವೇಶ್ವರಯ್ಯ ಬಡಾವಣೆ, ಎಂವಿಐಟಿ ಎಂಜಿನಿಯರಿಂಗ್ ಕಾಲೇಜು ಬಳಿ, ನೀಲಾಕುಂಟೆ, ಬೆಟ್ಟಹಲಸೂರು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆ,  ಫೆಬ್ರುವರಿ 28ರವರೆಗೆ ಈ ಕಲಾಕೃತಿಗಳನ್ನು ವೀಕ್ಷಿಸಬಹುದು.

ಮಾಹಿತಿಗೆ: 080 6547082, 98808 72875.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT