ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವಾಹಿರಿ ಪಾಕ್‌ನಲ್ಲಿದ್ದಾನೆ

Last Updated 15 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ವಾಷಿಂಗ್ಟನ್  (ಎಎಫ್‌ಪಿ): ಅಲ್‌ಖೈದಾ ಸಂಘಟನೆಯ ನೂತನ ಮುಖ್ಯಸ್ಥ ಅಯ್‌ಮನ್ ಅಲ್-ಜವಾಹಿರಿ ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದಾನೆ ಎಂದು ಪೆಂಟಗಾನ್‌ನ ಪ್ರಮುಖ ಅಧಿಕಾರಿಯೊಬ್ಬರು   ಹೇಳಿದ್ದಾರೆ.

`ಜವಾಹಿರಿ ಪಾಕಿಸ್ತಾನ ಬಿಟ್ಟು ಇನ್ನೆಲ್ಲಿಯಾದರೂ ಇರುವ ಬಗ್ಗೆ ನಮಗೆ ಮಾಹಿತಿ ಇಲ್ಲ~ ಎಂದು ಪೆಂಟಗಾನ್ ವಕ್ತಾರ ಜಾರ್ಜ್ ಲಿಟ್ಲ್  ತಿಳಿಸಿದ್ದಾರೆ.
 
9/11 ರ ದಾಳಿಯ 10ನೇ ವರ್ಷದ ಸಂದರ್ಭದಲ್ಲಿ ಜವಾಹಿರಿ ಜಿಹಾದಿ ವೆಬ್‌ಸೈಟ್‌ನಲ್ಲಿ ಒಂದು ಗಂಟೆ ಅವಧಿಯ ವಿಡಿಯೊ ದೃಶ್ಯವನ್ನು ಪ್ರಸಾರ ಮಾಡಿದ ಬೆನ್ನಲ್ಲಿಯೇ ಲಿಟ್ಲ್  ಈ ಹೇಳಿಕೆ ನೀಡಿದ್ದಾರೆ.
 
 ಈಜಿಪ್ಟ್‌ನ ಮಾಜಿ ಉಗ್ರ ಹಾಗೂ ಅಲ್‌ಖೈದಾ ಸಂಘಟನೆಯಲ್ಲಿ ಸುದೀರ್ಘ ಅವಧಿಗೆ ಎರಡನೇ ನಾಯನಾಗಿ ಗುರುತಿಸಿಕೊಂಡಿರುವ ಜವಾಹಿರಿ, ಒಸಾಮಾ ಬಿನ್ ಲಾಡೆನ್ ಹತ್ಯೆ ಬಳಿಕ ಸಂಘಟನೆಯ ಸಾರಥ್ಯವನ್ನು ವಹಿಸಿಕೊಂಡಿದ್ದಾನೆ.

  2001 ರ ಸೆಪ್ಟೆಂಬರ್ 11 ರ ದಾಳಿ ಬಳಿಕ ಅಮೆರಿಕವು `ಉಗ್ರರ ವಿರುದ್ಧ ಸಮರ~ ಸಾರಿದ ನಂತರ ಜವಾಹಿರಿ ತಲೆಮರೆಸಿಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT