ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗ ವಿವಾದ:ಅರೆಬೆತ್ತಲೆ ಪ್ರತಿಭಟನೆ

Last Updated 22 ಫೆಬ್ರುವರಿ 2011, 9:25 IST
ಅಕ್ಷರ ಗಾತ್ರ

ಬಾಗಲಕೋಟೆ: ಸಮುದಾಯ ಭವನ ಹಾಗೂ ಶೈಕ್ಷಣಿಕ ಕೇಂದ್ರ ಸ್ಥಾಪನೆಗಾಗಿ ನೀಡಲಾಗಿದ್ದ ಜಾಗವನ್ನು ಅಕ್ರಮವಾಗಿ ಸರ್ವಧರ್ಮ ಸಂಘಟನೆಗೆ ನೀಡಲಾಗುತ್ತಿದೆ ಎಂದು ಆರೋಪಿಸಿ ಹುನಗುಂದ ತಾಲ್ಲೂಕು ಇಳಕಲ್‌ನ ಶ್ರೀ ಶಿವಶರಣ ಸಮಗಾರ ಹರಳಯ್ಯ ಸಮಾಜದ ಸದಸ್ಯರು ಸೋಮವಾರ ಜಿಲ್ಲಾಡಳಿತ ಭವನದ ಎದುದು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

ಇಳಕಲ್‌ನ ವಾರ್ಡ್ ನಂ.7 ಅಲ್ಲಂಪೂರ ಪೇಟೆಯಲ್ಲಿ ಸಮಗಾರ ಸಮುದಾಯ ಭವನ ಹಾಗೂ ಸಮಾಜದ ಜನರಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಕೇಂದ್ರ ಸ್ಥಾಪನೆಗಾಗಿ ನೀಡಲಾಗಿದ್ದ ಜಮೀನನ್ನು ಪುರಸಭೆ ಅಧ್ಯಕ್ಷ ವೆಂಕಟೇಶ ಗುಡಗುಂಟಿ ಅವರು ಅಕ್ರಮವಾಗಿ ಸರ್ವಧರ್ಮ ಸಂಘಟನೆಗೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.ಸಮಾಜಕ್ಕೆ ನೀಡಿದ ಜಾಗೆಯನ್ನು ಸರ್ವಧರ್ಮ ಸಂಘಟನೆ ನೆಪದಲ್ಲಿ ಕಿತ್ತುಕೊಂಡು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಒಂದು ವೇಳೆ ಸರ್ವಧರ್ಮ ಸಂಘಟನೆಗೆ ನಮ್ಮ ಜಾಗವನ್ನು ನೀಡುವುದಾದರೆ ಆಗಿನ ಪುರಸಭೆ ಹಾಗೂ ಇಂದಿನ ನಗರಸಭೆ ವತಿಯಿಂದ ವಿವಿಧ ಸಮಾಜದವರಿಗೆ ನೀಡಲಾಗಿರುವ ನಿವೇಶನಗಳನ್ನು ‘ಸರ್ವಧರ್ಮಗಳ ಬಳಕೆ ಉದ್ದೇಶಕ್ಕೆ’ ಎಂದು ಮಾರ್ಪಡಿಸಿ, ಎಲ್ಲ ಧರ್ಮದವರಿಗೂ ಕಾರ್ಯಕ್ರಮ ನಡೆಸಲು ಅಲ್ಲಿ ಅವಕಾಶ ಕಲ್ಪಿಸಬೇಕು’ ಎಂದು ಶಿವಶರಣ ಹರಳಯ್ಯ ಸಮಾಜದ ಕೋಶಾಧ್ಯಕ್ಷ ಪಿ.ವಿ. ಮಬ್ರುಮಕರ ಒತ್ತಾಯಿಸಿದರು.

ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದ್ದರೂ ನಗರಸಭೆ ಅಧ್ಯಕ್ಷ ವೆಂಕಟೇಶ ಗುಡಗುಂಟಿ ಅವರು ಸಮಾಜದ ಜಾಗವನ್ನು ಇನ್ನೊಬ್ಬರಿಗೆ ಹಸ್ತಾಂತರಿಸುವ ಮೂಲಕ ನ್ಯಾಯಾಲಯ ನಿಂದನೆ ಮಾಡಿದ್ದಾರೆ ಎಂದು ಟೀಕಿಸಿದರು.‘ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಸ್ಥಳೀಯ ಠಾಣೆಯ ಅಧಿಕಾರಿಗಳು ಹಾಗೂ ಡಿಎಸ್‌ಪಿ ಅವರು ನಮ್ಮ ಮೇಲೆಯೇ ದೂರು ದಾಖಲಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೆಲಕಾಲ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಸಮಾಜದ ಸದಸ್ಯರು, ತಕ್ಷಣವೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಅವರಿಗೆ ಮನವಿಪತ್ರ ಸಲ್ಲಿಸಿದರು.ಪಿ.ವಿ. ಮಬ್ರುಮಕರ, ರವಿ ಕಾಸೆ, ರಾಮಣ್ಣ ಚಲವಾದಿ, ಯಲ್ಲಪ್ಪ ರಾಜಾಪುರ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT