ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ತಾಪಮಾನ ಅಳೆಯಲು ಇಂದು ನ್ಯಾನೊ ಉಪಗ್ರಹ ಉಡಾವಣೆ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚೆನ್ನೈ: ಜಾಗತಿಕ ತಾಪಮಾನ ಅಳೆಯಲು ವಿದ್ಯಾರ್ಥಿಗಳೇ ನಿರ್ಮಿಸಿರುವ ಒಂದು ನ್ಯಾನೊ ಉಪಗ್ರಹ ಸೇರಿದಂತೆ ಬುಧವಾರ ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮೂರು ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ಪ್ರತಿಷ್ಠಿತ ಭಾರತ - ಫ್ರಾನ್ಸ್ ಜಂಟಿ ಉಪಗ್ರಹ ಯೋಜನೆಯಡಿಯಲ್ಲಿ ಉಷ್ಣ ವಲಯದ ವಾತಾವರಣ ಅಧ್ಯಯನಕ್ಕಾಗಿ ನಿರ್ಮಿಸಲಾಗಿರುವ ಉಪಗ್ರಹ ಮತ್ತು ಎರಡು ನ್ಯಾನೊ ಉಪಗ್ರಹಗಳನ್ನು ಬೆಳಿಗ್ಗೆ 11 ಗಂಟೆಗೆ ಇಸ್ರೊ ನಿರ್ಮಿಸಿದ ಉಡಾವಣಾ ವಾಹಕ ಪಿಎಸ್‌ಎಲ್‌ವಿ-ಸಿ18ರ ಮೂಲಕ ಬಾಹ್ಯಾಕಾಶ ಕಕ್ಷೆಗೆ ಹಾರಿಬಿಡಲಾಗುವುದು.

ಒಂದು ಸಾವಿರ ಕೆ.ಜಿ ತೂಕದ ಉಪಗ್ರಹವನ್ನು ಉಷ್ಣ ವಲಯದ ವಾತಾವರಣದ ಪ್ರಭಾವಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ನಿರ್ಮಿಸಲಾಗಿದೆ. ಈ ಉಪಗ್ರಹದ ಮೂಲಕ ಹವಾಮಾನ ಮುನ್ಸೂಚನೆ ಬಗ್ಗೆ ಇನ್ನಷ್ಟು ನಿಖರ ಮಾಹಿತಿ ಪಡೆಯಲು ಉದ್ದೇಶಿಸಲಾಗಿದೆ.

ಚೆನ್ನೈ ಬಳಿಯ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಿರ್ಮಿಸಿರುವ 10.9 ಕೆ.ಜಿ ತೂಕದ ನ್ಯಾನೊ ಉಪಗ್ರಹ ಸಹ ಬಾಹ್ಯಾಕಾಶದ ಕಕ್ಷೆ ಸೇರಲಿದ್ದು, ಜಾಗತಿಕ ತಾಪಮಾನ ಮತ್ತು ಪರಿಸರ ಮಾಲಿನ್ಯದ ಬಗ್ಗೆ ಇದು ಅಧ್ಯಯನ ಮಾಡಲಿದೆ. ಈ ಉಪಗ್ರಹಕ್ಕೆ ಎಸ್‌ಆರ್‌ಎಂಸ್ಯಾಟ್ ಎಂದು ಹೆಸರಿಡಲಾಗಿದೆ.

ಈ ಎರಡು ಉಪಗ್ರಹಗಳ ಜತೆ ಇಸ್ರೊ ನಿರ್ಮಿಸಿರುವ ಇನ್ನೊಂದು ನ್ಯಾನೊ ಉಪಗ್ರಹವನ್ನೂ ಬಾಹ್ಯಾಕಾಶಕ್ಕೆ ಹಾರಿಬಿಡಲಾಗುತ್ತಿದೆ. ಇದು ಹಡಗುಗಳಿಗೆ ನೇರ ಸಂಕೇತಗಳನ್ನು ರವಾನಿಸುವ ಕಾರ್ಯ ನಿರ್ವಹಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT