ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಸ್ಪರ್ಧೆಗೆ ನಮ್ಮ ಶಾಲಾ ಮಕ್ಕಳು ಸನ್ನದ್ಧರಾಗಲಿ

Last Updated 6 ಜುಲೈ 2012, 7:15 IST
ಅಕ್ಷರ ಗಾತ್ರ

ಮುಂಡರಗಿ: `ನಮ್ಮ ಮಕ್ಕಳು ಮತ್ತು ನಾವು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸ ಬೇಕಾಗಿರುವುದು ಇಂದು ಅನಿವಾರ್ಯ ವಾಗಿದ್ದು, ಸಾಕ್ಷರರಾಗುವುದರ ಜೊತೆಗೆ ಎಲ್ಲ ವಿಷಯಗಳನ್ನು ಅರಿಯುವುದು ತುಂಬಾ ಅಗತ್ಯವಾಗಿದೆ~ ಎಂದು ಶಿರ ಹಟ್ಟಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಧ್ಯಕ್ಷ ಕೆ.ವಿ.ಹಂಚಿನಾಳ ತಿಳಿಸಿದರು.

ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವು ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ `ಶಾಲೆಗಾಗಿ ನಾವು, ನೀವು~ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಹಾಗೂ ಮತ್ತಿತರ ಅನವಶ್ಯಕ ಕಾರಣ ಗಳಿಂದ ಪಾಲಕರು ಮಕ್ಕಳನ್ನು ಶಾಲೆ ಯಿಂದ ದೂರವಿಡುತ್ತಿದ್ದು, ಎಲ್ಲ ಪಾಲಕರು ತಪ್ಪದೆ ತಮ್ಮ ಎಲ್ಲ ಮಕ್ಕಳನ್ನು ಶಾಲೆಗೆ ಸೇರಿಸಬೇಕು~ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಮನವಿ ಮಾಡಿಕೊಂಡರು.

`ಕೇವಲ ಹಣ ಗಳಿಸುವುದು, ಹಣ ಕಾಸಿನ ನೆರವು ನೀಡುವುದಷ್ಟೆ ಬ್ಯಾಂಕು ಗಳ ಉದ್ದೇಶವಲ್ಲ. ಹಣಕಾಸಿನ ವ್ಯವ ಹಾರವನ್ನು ಹೊರತುಪಡಿಸಿ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಹಲವು ವರ್ಷಗಳಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮ ಗಳನ್ನು ಹಾಕಿಕೊಳ್ಳುತ್ತಿದೆ. ಸಾರ್ವಜನಿಕ ಸಂಘ ಸಂಸ್ಥೆಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು~ ಎಂದು ಸಮಾ ರಂಭದಲ್ಲಿ ಭಾಗವಹಿಸಿದ್ದ ಭಾರತೀಯ ಸ್ಟೇಟ್ ಬ್ಯಾಂಕ್‌ನ ಹಿರಿಯ ಅಧಿಕಾರಿ ಶಿವಲಿಂಗಯ್ಯ ಹೇಳಿದರು.

ಡಯಟ್ ಉಪನ್ಯಾಸಕ ಕೆ.ಡಿ.ಬಡಿ ಗೇರ ಮಾತನಾಡಿದರು. ಇದೇ ಸಂದರ್ಭ ದಲ್ಲಿ ಎಸ್‌ಬಿಐ ಸ್ಥಳೀಯ ಶಾಖೆಯ ಹಿರಿಯ ಅಧಿಕಾರಿ ಶಿವಲಿಂಗಯ್ಯ ಬ್ಯಾಂಕ್‌ನ ಪರವಾಗಿ ರಾಮೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಮೂರು ಫ್ಯಾನ್‌ಗಳನ್ನು ದೇಣಿಗೆ ನೀಡಿದರು. ಅದಕ್ಕೂ ಪೂರ್ವದಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ `ಶಾಲೆಗಾಗಿ ನಾವು ನೀವು~ ಜನಜಾಗೃತಿ ಜಾಥಾ ಕೈಗೊಂಡರು.

ಪುರಸಭೆ ಅಧ್ಯಕ್ಷೆ ಶೇಖವ್ವ ಸಂಗಟಿ, ಮುಖಂಡರಾದ ಮಲ್ಲಪ್ಪ ಸಂಗಟಿ, ಎಸ್‌ಡಿಎಂಸಿ, ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರು ವೇದಿಕೆಯ ಮೇಲೆ ಹಾಜರಿದ್ದರು.ಎಸ್.ಎಂ.ಭೂಮರಡ್ಡಿ ಶಾಲೆ ವರದಿ: ಪಟ್ಟಣದ ಎಸ್.ಎಂ.ಭೂಮರಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ `ಶಾಲೆ ಗಾಗಿ ನಾವು ನೀವು~ ಕಾರ್ಯಕ್ರಮದ ಅಂಗವಾಗಿ ಗುರುವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನ ಜಾಗೃತಿ ಉಂಟು ಮಾಡಿದರು.

`ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ~
ರೋಣ: ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಶಿಕ್ಷಣ ಪರವಾದ ಯೋಜನೆ ಗಳಿವೆ. ಸರ್ಕಾರದ ಮಹತ್ವಕಾಂಕ್ಷೆಯ ಸಾಕಾರಗೊಳ್ಳಲು ಶಿಕ್ಷಣದ ಮಟ್ಟ ಸುಧಾರಣೆಯಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾವಹಕ ಅಧಿಕಾರಿ ಎಸ್. ಎಂ.ರುದ್ರಯ್ಯಸ್ವಾಮಿ ಹೇಳಿದರು.

ಅವರು ಗುರುವಾರ ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಶಿಕ್ಷಣ ಹಕ್ಕು ಮಾಹಿತಿ ಗೋಡೆ ಹಾಗೂ ಶಾಲೆಗಾಗಿ ನಾವು- ನೀವು ಕಿರು ಹೊತ್ತಿಗೆ ಬಿಡುಗಡೆ ಸಮಾ ರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ವರ ತಪ್ಪಿನಿಂದ ಸರ್ಕಾರದ ಶಿಕ್ಷಣದ ಬಗೆಗಿನ ಯೋಜನೆಗಳು ನಿಷ್ಪಲವಾಗುತ್ತಿವೆ. ಶಿಕ್ಷಕರು, ಪಾಲಕರು, ಶಾಲಾ ಸುಧಾರಣಾ ಸಮಿತಿಯವರು ಮಕ್ಕಳ ಗುಣಮಟ್ಟದ ಮತ್ತು ವಿಚಾರವಂತ ಶಿಕ್ಷಣದ ಕಡೆಗೆ ಪ್ರಾಮಾಣಿಕವಾಗಿ ಶ್ರಮಿಸಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಅವರು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಲ್.ಬಿ.ಜಂಗಣ್ಣ ವರ ಮಾತನಾಡಿ, ಶಿಕ್ಷಣವಿಲ್ಲದ ವ್ಯಕ್ತಿ ಮುಂಬರುವ ದಿನಗಳಲ್ಲಿ ತೀವ್ರತರ ತೊಂದರೆ ಅನುಭವಿಸಬೇಕಾಗುತ್ತದೆ. ಕೆಲವು ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರೆಯುತ್ತಿಲ್ಲ. ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಪ್ರಾಮಾಣಿಕ ಪ್ರಯತ್ನದೊಂದಿಗೆ ನಡೆದು ಕೊಳ್ಳಬೇಕಾಗಿದೆ.

ಶಾಲಾ ಮಕ್ಕಳಿಗೆ ಊಟ, ಬಟ್ಟೆ, ಪುಸ್ತಕ, ಸೈಕಲ್ ಎಲ್ಲ ಸೌಕರ್ಯಗಳನ್ನು ಸರ್ಕಾರ ಉಚಿತವಾಗಿ ನೀಡುತ್ತಿರುವುದನ್ನು ಉಪಯೋಗಿಸಿ ಕೊಳ್ಳಬೇಕು ಎಂದರು.ಎಸ್‌ಡಿಎಂಸಿ ಅಧ್ಯಕ್ಷ ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಹೇಶ ಕುರಿ ನಿರೂಪಿಸಿ, ಶಿಕ್ಷಕ ಹೆರಕಲ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT