ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜಾಗರಿ ಪಾರ್ಕ್' ಆರಂಭ

ಮುಧೋಳಲ್ಲಿ ರೂ 8 ಕೋಟಿ ವೆಚ್ಚದಲ್ಲಿ ನಿರ್ಮಾಣ
Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬಾಗಲಕೋಟೆ: ಧಾರವಾಡ ಕೃಷಿ ವಿಶ್ವವಿದ್ಯಾಲಯವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೂ 8 ಕೋಟಿ ವೆಚ್ಚದಲ್ಲಿ ಮುಧೋಳದಲ್ಲಿ ನಿರ್ಮಿಸಿರುವ 40 ಟನ್ ಸಾಮರ್ಥ್ಯದ `ಜಾಗರಿ ಪಾರ್ಕ್' (ಸಾವಯವ ಬೆಲ್ಲ ತಂತ್ರಜ್ಞಾನ ಸಂಸ್ಥೆ) ಸೋಮವಾರ ಆರಂಭವಾಯಿತು.

ಜಾಗರಿ ಪಾರ್ಕ್‌ಗೆ ಚಾಲನೆ ನೀಡಿದ ಕೃಷಿ ಸಚಿವ ಕೃಷ್ಣ ಬೈರೇಗೌಡ, `ಕಬ್ಬು ಲಾಭದಾಯಕ ಬೆಳೆಯಾಗಿದೆ. ಇಳುವರಿ ಹೆಚ್ಚಿಸುವ ಬಗ್ಗೆ ಮತ್ತು ಕಬ್ಬು ಬೆಳೆಯಲು ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ಶಾಶ್ವತ ಯೋಜನೆ ರೂಪಿಸಲಿದೆ. ಬೆಲೆ ನಿಗದಿ, ಹಣ ಪಾವತಿಯಲ್ಲಿ ಆಗುತ್ತಿರುವ ವಿಳಂಬದಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ರೈತರು, ಸಕ್ಕರೆ ಕಾರ್ಖಾನೆಗಳು ಮತ್ತು ಸರ್ಕಾರದ ನಡುವೆ ಸದಾಕಾಲ ನಡೆಯುತ್ತಿರುವ ವಾಗ್ವಾದವನ್ನು ತಪ್ಪಿಸಲಿ ಶಾಶ್ವತ ಪರಿಹಾರ ರೂಪಿಸಲಾಗುವುದು' ಎಂದರು.

`ರಾಜ್ಯದ ಕೃಷ್ಣಾ ಮತ್ತು ಕಾವೇರಿ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಸಾಕಷ್ಟು ಕೃಷಿ ಭೂಮಿ ಸವಳು-ಜವಳು ಆಗಿದೆ. ಈ ಬಗ್ಗೆ ತಜ್ಞರಿಂದ ವರದಿ ಪಡೆದು, ಜವಳು ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್.ಎಸ್.ವಿಜಯಕುಮಾರ, `ಕಬ್ಬು ಬೆಳೆ ಸಂಶೋಧನೆ, ವಿಸ್ತರಣೆ, ಉತ್ಪಾದನೆ, ಸೂಕ್ತ ಮಾರುಕಟ್ಟೆ ಜಾಲಗಳ ಮಾಹಿತಿ ಸಂಗ್ರಹಣೆ ಉದ್ದೇಶದಿಂದ ಜಾಗರಿ ಪಾರ್ಕ್ ನಿರ್ಮಿಸಲಾಗಿದೆ'. `ಉತ್ಕೃಷ್ಟ ಗುಣಮಟ್ಟದ, ಸ್ವಚ್ಛ ಮತ್ತು ಆರೋಗ್ಯಪೂರ್ಣ ಜಲಬೆಲ್ಲ (ಕಾಕ್ವಿ), ಪುಡಿ ಬೆಲ್ಲ, ಪೆಂಡಿಬೆಲ್ಲ ಮತ್ತು ಮೌಲ್ಯವರ್ಧಿತ ಬೆಲ್ಲ ತಯಾರಿಸಿ, ದೇಶ-ವಿದೇಶದ ಮಾರುಕಟ್ಟೆಗೆ ಪೂರೈಕೆ ಮಾಡಲಾಗುವುದು' ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT