ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜಾಗೃತರಾಗಿ ಮತ ಚಲಾಯಿಸಿ'

Last Updated 2 ಏಪ್ರಿಲ್ 2013, 10:06 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಯುವಜನಾಂಗ ಜಾಗೃತರಾಗಿ ಮತದಾನದಲ್ಲಿ ಭಾಗವಹಿಸಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಜವಾಬ್ದಾರಿ ಯುತ ಸರ್ಕಾರ ರಚನೆಯಾಗಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ಅಧಿಕಾರಿ ಪ್ರಸನ್ನಕುಮಾರ್ ತಿಳಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ಜನಾಂಗದಲ್ಲಿ ಮತದಾನ ಜಾಗೃತಿ ಬಗ್ಗೆ ಸೋಮವಾರ ನಡೆದ ಯುವಸಮ್ಮೇಳನ ಕಾರ್ಯಾ ಗಾರದಲ್ಲಿ ಸಾರ್ವತ್ರಿಕ ಮತದಾನದ ಬಗ್ಗೆ ಅವರು ಮಾಹಿತಿ ನೀಡಿದರು.

ಯುವ ಜನಾಂಗವನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಹಾಗಾಗಿ ಯುವ ಜನಾಂಗ ಮತದಾನದ ಮಹತ್ವವನ್ನು ಅರಿತು ಮತವನ್ನು ಯಾವುದೇ ಆಮಿಷಗಳಿಗೆ ಮಾರಾಟ ಮಾಡಿಕೊಳ್ಳದೆ. ಪ್ರಾಮಾಣಿಕವಾಗಿ ಮತ ಚಲಾಯಿಸ ಬೇಕು. 2013ಜನವರಿ 1ಕ್ಕೆ 18ವರ್ಷ ತುಂಬಿದ ಎಲ್ಲರೂ ಮತದಾರರ ಪಟ್ಟಿಯಲ್ಲಿ  ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಹೆಸರು ನೊಂದಾಯಿಸಿಕೊಳ್ಳಬಹುದು.

ಇದೇ 7ರೊಳಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಕೊನೆ ದಿನ. ಮತದಾರರ  ಪಟ್ಟಿಯಲ್ಲಿ ಎರಡು ಕಡೆ ಹೆಸರು ಸೇರ್ಪಡೆಯಾಗಿದ್ದರೆ ಒಂದು ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು ನಮೂನೆ-7ರಲ್ಲಿ ಅರ್ಜಿಯನ್ನು ಬೂತ್‌ಮಟ್ಟದ ಅಧಿಕಾರಿಗೆ/ ತಾಲ್ಲೂಕು ಕಚೇರಿಯಲ್ಲಿ ಸಲ್ಲಿಸಬೇಕು. ವಿದ್ಯಾವಂತರಾದ ಪದವಿ ವಿದ್ಯಾರ್ಥಿಗಳು ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕೆಂದು ಹೇಳಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣೆ ಬಗ್ಗೆ ಮಾಹಿತಿ ನೀಡಿದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಉಮೇಶ್ ಮಾನವನ ಗಮನಕ್ಕೆ ಮೀರಿರುವ ಅತಿವೃಷ್ಟಿ, ಅನಾವೃಷ್ಟಿ, ಚಂಡಮಾರುತ, ಸುನಾಮಿಯಂತಹ ನೈಸರ್ಗಿಕ ವಿಕೋಪಗಳು ಮನುಷ್ಯನ ಬದುಕನ್ನು ದುಃಸ್ಥಿಗೆ ತೆಗೆದುಕೊಂಡು ಹೋಗುತ್ತವೆ. ಇದರ ನಿರ್ವಹಣೆ ವಿಶ್ವ ಸಂಸ್ಥೆಯೂ ಸೇರಿದಂತೆ ಪ್ರತಿ ರಾಷ್ಟ್ರದಲ್ಲೂ ವಿಪತ್ತು ನಿರ್ವಹಣಾ ನಿಧಿ ಇರುತ್ತದೆ ಎಂದರು.

ಸಮಾಜ ಕಾರ್ಯ ಉಪನ್ಯಾಸಕ ಸಚ್ಚಿನ್ ಗ್ರಾಮ ಸಭೆಗಳಲ್ಲಿ ಯುವಜನಾಂಗದ ಪಾತ್ರದ ಬಗ್ಗೆ ಮಾತನಾಡಿ, ಗ್ರಾಮಗಳಲ್ಲಿನ ಜನರು ಜೀವನ ನಿರ್ವ ಹಣೆಗಾಗಿ ಹಾಗೂ ನಗರ ಪ್ರದೇಶಗಳ ಜೀವನ ಶೈಲಿಗೆ ಆಕರ್ಷಿತರಾಗಿ ವಲಸೆ ಹೋಗುವ ಪ್ರಮಾಣ ಹೆಚ್ಚಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಕೆ.ಪೂರ್ಣೇಶ್ ಯುವಜನಾಂಗ ಮತದಾನದಲ್ಲಿ ಭಾಗವಹಿಸುವಿಕೆ ಕಡಿಮೆಯಾಗುತ್ತಿರುವುದರಿಂದ ಅವರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ. ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ  ಮತದಾನ ಮಾಡಬೇಕು. ಇತರರು ಮತದಾನ ಮಾಡುವಂತೆ ಪ್ರೇರಣೆ ನೀಡಬೇಕೆಂದು ತಿಳಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಮತದಾನದ ಘೋಷಣೆ ಬಗ್ಗೆ ಮಾಹಿತಿ ನೀಡಿದರು.

ಉಪನ್ಯಾಸಕ ಅಣ್ಣಪ್ಪ ಮಳೀಮಠ್, ವಿದ್ಯಾರ್ಥಿಗಳಾದ ಮೋನಿಕಾ, ಕೃಷ್ಣಪ್ರಸಾದ್, ಪ್ರತಿಮಾ, ಸುಬ್ರಹ್ಮಣ್ಯ ಇದ್ದರು. ಮುಕ್ತ ಮತ್ತು ನಿರ್ಭೀತ ಮತದಾನದಿಂದ ಯೋಗ್ಯ ಪ್ರತಿನಿಧಿಗಳ ಆಯ್ಕೆ ಸಾಧ್ಯವೆ? ಎಂಬ ವಿಷಯ ಬಗ್ಗೆ ನಡೆದ ಚರ್ಚಾಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಸುಕೇತ್(ಪ್ರಥಮ),ಕೌಶಿಕ್ (ದ್ವಿತೀಯ),ಅರುಣ್(ತೃತೀಯ), ಸಂಗೀತಾ(ಚತುರ್ಥ) ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT