ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಣತನಕ್ಕೆ ಬ್ರೇನ್ ಯೋಗ

Last Updated 10 ಜೂನ್ 2012, 19:30 IST
ಅಕ್ಷರ ಗಾತ್ರ

ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಅವರಿಗೆ ಯೋಗ್ಯ ಶಿಕ್ಷಣ ನೀಡುವುದರಿಂದ ಇಡೀ ಸಮಾಜ ಮತ್ತು ತನ್ಮೂಲಕ ದೇಶದ ಅಭಿವೃದ್ಧಿಯಾಗುತ್ತದೆ. ಅವರ ಜಾಣ್ಮೆಯ ಪ್ರಯೋಜನ ಸಮುದಾಯಕ್ಕೆ ಸಿಗುತ್ತದೆ.

ಜಾಣರಾಗುವುದು, ಬುದ್ಧಿವಂತಿಕೆ ಗಳಿಸಿಕೊಳ್ಳುವುದು ನಮ್ಮೆಲ್ಲರ ಜನ್ಮಸಿದ್ಧ ಹಕ್ಕು. ಅದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ `ಬ್ರೇನ್ ಯೋಗ~. ಇದು ಪರೀಕ್ಷೆಯಲ್ಲಿ ಅಂಕ ಗಳಿಸುವುದಕ್ಕೆ ಮಾತ್ರವಲ್ಲದೆ ಬದುಕಿನಲ್ಲಿ ಉನ್ನತ ಸ್ಥಾನ ಗಳಿಸಲು ಸಹಾಯ ಮಾಡುತ್ತದೆ. ನಿತ್ಯ ಕೆಲವೇ ನಿಮಿಷ ಮಾಡುವ ಈ ಯೋಗಾಭ್ಯಾಸ ನಿಮ್ಮ ಆಲೋಚನಾ ವಿಧಾನವನ್ನೇ ಬದಲಿಸಬಲ್ಲದು.

ಈಗ ಜಾಣರಾಗುವ ಸರದಿ ನಿಮ್ಮದಾಗಲಿ. ರಾಜ್ಯದ ಅನೇಕ ವಿದ್ಯಾಸಂಸ್ಥೆಗಳಲ್ಲಿ ಈ ಕಾರ್ಯಕ್ರಮ ಪ್ರಾರಂಭವಾಗಿದ್ದು, ಮೂರು ತಿಂಗಳಲ್ಲಿ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ತರಬೇತಿಗೆ ಕೇವಲ 3 ತಾಸು ಹಾಗೂ ನಿತ್ಯದ ಅಭ್ಯಾಸಕ್ಕೆ ಕೆಲವೇ ನಿಮಿಷ ಮೀಸಲಿಟ್ಟರೆ ಸಾಕು. ಶಾಲೆ, ಕಾಲೇಜಿನವರು ಕೂಡ ಇದರ ಪ್ರಯೋಜನ ಪಡೆಯಬಹುದು.

ಭಾರತೀಯರ ಬುದ್ಧಿಶಕ್ತಿ ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ಈ ವಿಶಿಷ್ಟ ವಿಧಾನವನ್ನು ರೂಪಿಸಿದವರು ಆ ಕಾಲದ ಶ್ರೇಷ್ಠ ಋಷಿಮುನಿಗಳು. ಇದನ್ನು ಅವರು ಗಣೇಶಾಸನ ಎಂದೂ ಕರೆದರು. ಆದರೆ ಇದರ ಮೂಲ ಹೆಸರು `ಥೊರ್ಪ್ಪಿಕರಣಂ~. ಥೊರ್ಪ್ಪಿ ಎಂದರೆ `ಕೈಗಳಿಂದ~ ಹಾಗೂ ಕರಣಂ ಎಂದರೆ `ಕಿವಿ~. ಇದರರ್ಥ ಕೈಗಳಿಂದ ಕಿವಿ ಹಿಡಿದುಕೊಳ್ಳುವುದು.

ನಮ್ಮ ಕಿವಿಯಲ್ಲಿ ಅಡಗಿರುವ ಗೌಪ್ಯ ಸತ್ವಗಳ ಆಧಾರದ ಮೇಲೆ ಈ ವಿಶೇಷ ವಿಧಾನ ರೂಪಿತವಾಗಿದೆ. ಆದರೆ ಗುರುಕುಲದ ಋಷಿಮುನಿಗಳು ಇದನ್ನು ಮುಕ್ತವಾಗಿ ಬೋಧಿಸದೆ ತಮ್ಮ ಆಪ್ತವಲಯದ ಶಿಷ್ಯವೃಂದಕ್ಕೆ ಮಾತ್ರವೇ ಬೋಧಿಸಿದ್ದರು. ನಳಂದ- ತಕ್ಷಶಿಲಾದಲ್ಲಿ ನಡೆದ ಅಗ್ನಿ ದುರಂತದಲ್ಲಿ ಇದರ ಉಲ್ಲೇಖವಿದ್ದ ತಾಳೇಗರಿಯ ಗ್ರಂಥಗಳು ನಾಶವಾದವು. ಹೀಗಾಗಿ ದುರದೃಷ್ಟವಶಾತ್ ಆ ಜ್ಞಾನ ಮತ್ತು ಆಚರಣೆಯ ಸರಿಯಾದ ವಿಧಿ ವಿಧಾನಗಳು ಭಾರತದ ಮುಂದಿನ ಪೀಳಿಗೆಗೆ ತಲುಪಲಿಲ್ಲ.

ಹಿಂದೆಲ್ಲ ಶಿಕ್ಷಕರು ತಪ್ಪು ಮಾಡುವ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಶಿಕ್ಷೆ ಎಂದರೆ ಕೈಗಳಿಂದ ಎರಡೂ ಕಿವಿ ಹಿಡಿದು ಮೇಲೆಳುವುದು, ಕುಳಿತುಕೊಳ್ಳುವುದು. ಉಟಾಬಸ್ಸಿ, ಬಸ್ಕಿ ಎಂದೂ ಇದನ್ನು ಕರೆಯುತ್ತಿದ್ದರು. ಇದು ದೇಶದ ಅನೇಕ ಭಾಗದಲ್ಲಿ ಇಂದೂ ಪ್ರಚಲಿತದಲ್ಲಿದೆ.

ಗಣೇಶ ಚತುರ್ಥಿಯಂದು ದೇವರ ಮುಂದೆ ಇದೇ ವ್ಯಾಯಾಮವನ್ನು 21 ಸಲ ಮಾಡಿ ವಿದ್ಯೆ, ಬುದ್ಧಿ ಕೊಡುವಂತೆ ಬೇಡಿಕೊಳ್ಳುವ ಪದ್ಧತಿ ಇಂದಿಗೂ ಭಾರತೀಯರಲ್ಲಿದೆ. ಆದರೆ ಇದರ ನಿಜವಾದ ಉದ್ದೇಶ ಬಹಳಷ್ಟು ಜನರಿಗೆ ಗೊತ್ತಿಲ್ಲ.

ಶಾಲೆಗಳಲ್ಲಿ ಗುರುಗಳು ತಪ್ಪು ಮಾಡಿದ ವಿದ್ಯಾರ್ಥಿಗಳ ಕಿವಿ ಹಿಂಡುತ್ತ್ದ್ದಿದರು. ಹಿರಿಯರ ಕಾಲದಲ್ಲಿ ಕಲ್ಲು- ಹರಳು ಹಿಡಿದು ಕಿವಿ ಹಿಂಡುತ್ತಿದ್ದುದನ್ನು ನೀವು ಕೇಳಿರಲೂಬಹುದು.

ಇದನ್ನು ಶಿಕ್ಷೆ ಎಂದು ಭಾವಿಸಿದರೆ ತಪ್ಪಾದೀತು. ಏಕೆಂದರೆ ಅವರು ಹಿಂಡುತ್ತಿದ್ದ ಕಿವಿಯ ಕೆಳಭಾಗವು ತಲೆ ಹಾಗೂ ವಿಶೇಷವಾಗಿ ಮೆದುಳನ್ನು ಪ್ರಚೋದಿಸುತ್ತದೆ ಎಂಬುದು ವೈಜ್ಞಾನಿಕವಾಗಿ ದೃಡಪಟ್ಟಿರುತ್ತದೆ.

ಹಾಗಾಗಿ ಗುರುಗಳು ಕಿವಿ ಹಿಂಡುತ್ತಿದ್ದುದು, ಮಗುವಿದ್ದಾಗಲೇ ಕಿವಿಯ ಕೆಳಭಾಗದಲ್ಲಿ ರಂಧ್ರ ಮಾಡಿ ಓಲೆ ಹಾಕುವುದರ ಹಿಂದೆ ವೈಜ್ಞಾನಿಕ ಅಂಶ ಇದೆ ಎಂಬುದರಲ್ಲಿ ಎರಡು ಮಾತಿಲ್ಲ.
ರಾಜ್ಯದ ವಿವಿಧ ಶಾಲೆಗಳಲ್ಲಿ ಬ್ರೇನ್ ಯೋಗ ಕಲಿಕೆ ನಂತರ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಪ್ರಾಣ ಯೋಗ ಪ್ರತಿಷ್ಠಾನ ರಾಜ್ಯದ ಎಲ್ಲ ಶಾಲೆಗಳಲ್ಲೂ ಈ ಯೋಗ ಕಲಿಸಲು ಉತ್ಸುಕವಾಗಿದೆ. ಇದನ್ನು 1 ವರ್ಷ ನಿರಂತರವಾಗಿ ಮಾಡುವುದು ಪ್ರಯೋಜನಕಾರಿ. ಆದರೆ ತರಬೇತಿದಾರರ ಮೂಲಕವೇ ಕಲಿಯಬೇಕು. ವಯಸ್ಸು, ಮಾನಸಿಕ, ಭಾವನಾತ್ಮಕ ಸ್ಥಿತಿಯನ್ನು ಪರಿಗಣಿಸಿ ಯೋಗ ವಿಧಾನ ಕಲಿಸಲಾಗುತ್ತದೆ. ರಾಜ್ಯ ಸರ್ಕಾರದ ಆಯುಷ್ ಇಲಾಖೆ ವತಿಯಿಂದ ಪ್ರತಿಷ್ಠಾನ 60 ತಾಲ್ಲೂಕಿನಲ್ಲಿ ಯೋಗ ಪ್ರಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲಿದೆ. 

ಮಾಹಿತಿಗೆ: 98451 72459, 99162 79167.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT