ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಆಧರಿತ ವೃತ್ತಿ ನಿಲ್ಲಲಿ: ರಾಜಣ್ಣ

Last Updated 6 ಜನವರಿ 2014, 6:49 IST
ಅಕ್ಷರ ಗಾತ್ರ

ತುಮಕೂರು: ಜಾತಿಯ ಜತೆಯಲ್ಲಿ ವೃತ್ತಿ ಮುಂದುವರೆಸಿಕೊಂಡು ಹೋಗುವ ಪರಿಪಾಠ ನಿಲ್ಲಬೇಕು ಎಂದು ಶಾಸಕ ಕೆ.ಎನ್‌.ರಾಜಣ್ಣ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಕುಂಭೇಶ್ವರಿ ಮಹಿಳಾ ಸಂಘದ ವಾರ್ಷಿಕೋತ್ಸವ, ಗಣ್ಯರಿಗೆ ಸನ್ಮಾನ ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬದಲಾದ ಸಮಾಜದಲ್ಲಿ ಆರ್ಥಿಕ­ವಾಗಿ ಸದೃಢರಾಗಲು ಬೇಕಾದ ವೃತ್ತಿ ಮಾಡುವುದು ಅನಿವಾರ್ಯ­ವಾಗಿದೆ. ಜಾತಿಗೆ ಸೀಮಿತವಾದ ವೃತ್ತಿಯನ್ನೇ ಅನುಸರಿಸಬೇಕೆಂದಿಲ್ಲ ಎಂದರು.

ಸಮಾಜದಲ್ಲಿ ಧ್ವನಿಯಿಲ್ಲದ ಸಮು­ದಾಯಗಳು ಈ ರೀತಿಯ ಶೈಕ್ಷಣಿಕ ಸಾಧನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಆರ್ಥಿಕ ಸದೃಢತೆಯ ಕೊರತೆಯ ನಡುವೆಯೂ ಬೇರೆ ಸಮಾಜದಿಂದ ಹಿಂದೆ ಬೀಳದಂತೆ ಸಮುದಾಯದ ಅಭಿವೃದ್ಧಿಗೆ ಸಂಘ ದುಡಿಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೇಯರ್‌ ಗೀತಾ ಮಾತನಾಡಿ, ಸಾಂಸ್ಕೃತಿಕ ಹಾಗೂ ಕಲಾ ಕ್ಷೇತ್ರದಲ್ಲಿ ಕುಂಭೇಶ್ವರಿ ಮಹಿಳಾ ಸಂಘದ ಸಾಧನೆ ಅಪಾರ ಎಂದರು. ಕುಂಬಾರರ ಸಂಘದ ಅಧ್ಯಕ್ಷ ಸಿದ್ಧನಂಜಶೆಟ್ಟಿ ಮಾತನಾಡಿದರು.

ಧರ್ಮ ಹಾಗೂ ವೈಚಾರಿಕತೆ ಕುರಿತಂತೆ ಹುಲಿಕಲ್‌ ನಟರಾಜ್‌ ಅವರು ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು.
ಶಾಸಕ ರಾಜಣ್ಣ, ಹುಲಿಕಲ್‌ ನಟರಾಜ್‌, ಶಿವಕುಮಾರ್‌, ಸೌಭಾಗ್ಯ ಅಂಪಣ್ಣ, ಗೀತಾ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT