ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಇರುವವರೆಗೂ ಮೀಸಲಾತಿ ಇರಲಿ

Last Updated 21 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬಡತನದಲ್ಲಿ ಹುಟ್ಟಿದವನು ಬಡವನಾಗಿಯೇ ಸಾಯಬೇಕಿಲ್ಲ.  ಆದರೆ ಹುಟ್ಟಿನಿಂದ ಪರಿಶಿಷ್ಟನಾದವನು ಆ ಹಣೆಪಟ್ಟಿಯಿಂದ, ಅಪಮಾನದಿಂದ, ತಾರತಮ್ಯದಿಂದ, ಸಾಮಾಜಿಕ ಅವಗಣನೆಯಿಂದ ಪಾರಾಗಲು ಅಸಾಧ್ಯ. ಬಾಬು ಜಗಜೀವನರಾಮ್‌ರಂತಹ ಪ್ರಧಾನಿ ಪಟ್ಟದ ಅಭ್ಯರ್ಥಿ ಯನ್ನು, ಜೇಸುದಾಸ್‌ರಂತಹ ಮಹಾನ್ ಗಾಯಕನನ್ನು ದೇವಾಲಯಕ್ಕೆ ಬಿಟ್ಟು ಕೊಂಡರೂ ನಂತರ ಇಡೀ ದೇವಾಲಯ ವನ್ನೇ ಶುದ್ಧೀಕರಣ ಮಾಡಿದರೆಂಬ ವಾರ್ತೆಯನ್ನು ಅರಿಯದವರಾರು?

  ನಮ್ಮ ಸೋಮಾರಿತನ, ಬಡವರ ಮನೆಯಲ್ಲಿ ಹುಟ್ಟು, ಅನಕ್ಷರತೆ, ಉದ್ಯೋಗ ದೊರಕದಂತಹ ನಾನಾ ಕಾರಣಗಳಿಗಾಗಿ ಬಡತನ ನಮ್ಮನ್ನು ಕಾಡುತ್ತಿರಬಹುದು.  ಆದರೆ ಕೇವಲ ಹುಟ್ಟಿನ ಕಾರಣಕ್ಕಾಗಿಯೇ ಸಾಮಾಜಿಕ ಶೋಷಣೆಗೆ ಒಳಗಾಗುವ ಅನಿಷ್ಠ ಪದ್ಧತಿಯನ್ನು ಬಡತನಕ್ಕೆ ಹೋಲಿಸಿ, ಆ ಕಾರಣಕ್ಕಾಗಿಯೇ ಎಲ್ಲಾ ಜಾತಿಯ ಬಡವರಿಗೂ ಮೀಸಲಾತಿ ನೀಡಬೇಕೆಂದು ಹುಯಿಲೆಬ್ಬಿಸುವುದರಲ್ಲಿ ಆಕ್ರೋಶ ವಿದೆಯೇ ವಿನಹ ಬಡವರ ಮೇಲಿನ ಕಳಕಳಿ ಕಾಣುವುದಿಲ್ಲ.

ಹಿಂದೆ ರಾಜಾಡಳಿತದ ಕಾಲದಲ್ಲಿ ಬ್ರಾಹ್ಮಣ ಪಂಡಿತರಿಗೆ ಮೀಸಲಾತಿ ಇದ್ದಿತು.  ಅವರಿಗೆ ಆಸ್ಥಾನ ಪಂಡಿತರ ಹುದ್ದೆಗಳನ್ನು ಮೀಸಲಿರಿಸುವ ಪದ್ಧತಿ ಯಿತ್ತು.  ಇವರು ವ್ಯವಸಾಯ ಮಾಡಿ ಉತ್ತಿಬಿತ್ತಿ ಬೆವರಿಳಿಸಲಾರದಷ್ಟು ಬಲಹೀನರೆಂದೇ ಉಂಬಳಿ ನೀಡ ಲಾಗುತ್ತಿತ್ತು.  ದಲಿತ ದುರ್ಬಲರಿಗೀಗ ಸುಧಾರಿಸಿದ ರೀತಿಯಲ್ಲಿ ಸರ್ಕಾರ ಮೀಸಲಾತಿ ಕಲ್ಪಿಸಿದೆಯೇ ಹೊರತು ಇದು ಹೊಸದಾಗಿ ಜಾರಿಗೆ ಬಂದ ಪದ್ಧತಿ ಏನಲ್ಲ.

ಇಂದು ಕೆಳಜಾತಿಯವರನ್ನು ದೊಡ್ಡ ಹುದ್ದೆಗಳಲ್ಲಿ ನಾವು ಕಾಣುತ್ತಿದ್ದೇವೆಂದರೆ ಅದು ಮೀಸಲಾತಿಯ ಪ್ರಭಾವ.  ಇಲ್ಲವಾಗಿದ್ದರೆ  ಗ್ರೂಪ್  ಡಿ ನೌಕರಿ ಯಲ್ಲಿ  ಕಾಣುವುದೂ ದುಸ್ತರವಾಗು ತ್ತಿತ್ತೇನೋ.  ಪಟ್ಟಣದ ವಿದ್ಯಾರ್ಥಿಗಳ ನಡುವೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ಪರ್ಧಿಸುವುದೇ ಕಷ್ಟ ವಾಗಿರುವಾಗ ಪರಿಶಿಷ್ಟರ ಪಾಡೇನು?

ಎಲ್ಲರನ್ನೂ ಸರಿಸಮಾನರನ್ನಾಗಿ ಕಾಣೋಣ, ಜಾತಿ ವಿನಾಶಕ್ಕಾಗಿ ಅಂತರ್ಜಾತೀಯ ವಿವಾಹಗಳಾಗೋಣ.  ಸಮಪಾಲು ಸಮಬಾಳು ತರೋಣ ವೆಂದು ಯಾವನಾದರೂ ಮೇಲು ಜಾತಿಯವ ಒಂದು ಕ್ಷಣವಾದರೂ ದಯಾಪರನಾಗಿ ಯೋಚಿಸಿದ್ದುಂಟೆ?

ತಮಗೆ ಮೇಲು ಜಾತಿಯ ಪಟ್ಟಬೇಕು. ಕೆಳಜಾತಿಯವರೊಡನೆ ಒಡನಾಟ ಬೇಡವೆಂದೇ ದೂರವಿರುವ ದೂರ ಇಟ್ಟಿರುವ ಇಂಥವರು ಹಿಂದೆ ಮಾಡಿದ ಪಾಪದಿಂದಾಗಿ; ಈಗಲೂ ತೋರದ ಔದಾರ್ಯದಿಂದಾಗಿಯೇ ಮೀಸಲಾತಿ ಯನ್ನು ಜೀವಂತವಾಗಿಟ್ಟಿದ್ದಾರೆ.  ಹೀಗಾಗಿ ಎಲ್ಲಿಯವರೆಗೆ ಜಾತಿ ಇರುತ್ತದೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು.

ಹೀಗೆ ಅಪಮಾನಗಳಾಗುತ್ತಿರುವು ದರಿಂದಲೇ ಅಲ್ಲವೆ ಸ್ವಾಭಿಮಾನಿ ಯಾದವನು ಮತಾಂತರದತ್ತ ಒಲವು ತೋರುವುದು.  ಮತಾಂತರ ಕೂಡದು,  ಹಿಂದು-ಒಂದು-ಬಂಧು ಎಂಬ ಮಾತು ಸಾಕೆ. ಅದು  ಕಾರ್ಯತಃ ಆಗಬೇಕಲ್ಲವೆ?
     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT