ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ನೋಡಿ ಆಯ್ಕೆಯೇ?

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಒಂದು ಸಿನಿಮಾ ನೋಡಲು ಹೀರೋ ಜಾತಿ, ರೋಗಕ್ಕೆ ಚಿಕಿತ್ಸೆ ಪಡೆಯಲು ಡಾಕ್ಟರ್ ಜಾತಿ, ಹಣ್ಣು ತರಕಾರಿ ಕೊಳ್ಳಲು ಅದನ್ನು ಮಾರುವವನ ಜಾತಿ ಧರ್ಮ ನೋಡುತ್ತೇವೆಯೇ ಅಥವಾ ಅವನ ನಟನೆ ಸಾಮರ್ಥ್ಯ ಡಾಕ್ಟರ್ ಕೈಗುಣ ಹಣ್ಣು ತರಕಾರಿ ಗುಣಮಟ್ಟ ನೋಡುತ್ತೇವೆಯೋ?

ಕ್ರೈಸ್ತರು ನಡೆಸುವ ಕಾನ್ವೆಂಟ್ ಆದರೂ ಒಬ್ಬ ಮಡಿವಂತ ಬ್ರಾಹ್ಮಣ ಅಲ್ಲಿಗೆ ಮಗುವನ್ನು ಸೇರಿಸಲು ಹಿಂದು ಮುಂದು ನೋಡುವುದಿಲ್ಲ.ಇಲ್ಲೆಲ್ಲೂ ಜಾತಿ ಧರ್ಮ ಮುಖ್ಯವಾಗುವುದಿಲ್ಲ ಗುಣ ಯೋಗ್ಯತೆಯೇ ಮುಖ್ಯ.

ದಿನನಿತ್ಯದ ಬದುಕು ಆರಂಭವಾಗುವದೇ ಒಂದು ಜಾತಿಯವನು ತಂದು ಕೊಡುವ ಹಾಲಿಂದ ಇನ್ನೊಂದು ಜಾತಿಯವನ ತರಕಾರಿ ಮತ್ತೊಂದು ಜಾತಿಯವನ ಪ್ರಾವಿಜನ್ ಅಂಗಡಿ.

ಜಾತಿ ಮತ ನೋಡಿದರೆ ಬದುಕೇ ಅಸಾಧ್ಯ.ಇಲ್ಲೆಲ್ಲ ಆಯ್ಕೆಗೆ ಗುಣಮಟ್ಟವೇ ಮುಖ್ಯ. ಹೀಗಿರುವಾಗ ಐದು ವರ್ಷಕಾಲ ನಮ್ಮ ಕ್ಷೇತ್ರವನ್ನು ನೆಮ್ಮದಿಯಿಂದ ನೋಡಿಕೊಳ್ಳಲು ಒಬ್ಬ ಅರ್ಹ ಶಾಸಕನನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ಇರುವ ಮತದಾರ ಜಾತಿ ನೋಡಿ ಮತ ಹಾಕುವುದು ಸರಿಯೇ?

ನಿಮ್ಮ ಜಾತಿಯವನೇ ಆಗಿದ್ದರೂ ಏನು ಅನುಕೂಲ? ಅನುಭವ ನೆನಪಿಸಿಕೊಳ್ಳಿ. ನಿಮ್ಮ ಕೆಲಸ ಮಾಡಿಕೊಟ್ಟಿದ್ದಾನೆಯೇ? ಹೋಗಲಿ ನಿಮ್ಮನ್ನು ಗೌರವದಿಂದಲಾದರೂ ಕಂಡಿದ್ದಾನೆಯೇ? ಆತನಿಗೆ ಹಣ ಮುಖ್ಯ ಜಾತಿಯವನನ್ನು ಮೂಸಿಯೂ ನೋಡುವುದಿಲ್ಲ. ಈಗಲಾದರೂ ಮತದಾರ ಎಚ್ಚೆತ್ತುಕೊಳ್ಳಬೇಕು. ನಮ್ಮ ಜಾತಿಯವನು ಎಂದು ಕೊಳೆತ ಹಣ್ಣನ್ನು ಸಜಾತಿಯವನಿಂದ ಕೊಂಡು ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ದಡ್ಡತನ ಮಾಡಬಾರದು.
-ಸತ್ಯಬೋಧ, ಬೆಂಗಳೂರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT