ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಕಲೆಗೆ ಪ್ರೋತ್ಸಾಹ ಅತ್ಯಗತ್ಯ: ಕಡಾಡಿ

Last Updated 3 ಆಗಸ್ಟ್ 2011, 6:20 IST
ಅಕ್ಷರ ಗಾತ್ರ

ಹಳ್ಳೂರ (ಮೂಡಲಗಿ): `ಗ್ರಾಮೀಣ ಜಾನಪದ ಕಲೆಗಳಿಗೆ ಉತ್ತೇಜನ ನೀಡುವುದರ ಮೂಲಕ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದು ಅವಶ್ಯವಿದೆ~ ಎಂದು ಜಿ.ಪಂ. ಅಧ್ಯಕ್ಷ ಈರಪ್ಪ ಕಡಾಡಿ ಹೇಳಿದರು.

ಜಿಲ್ಲಾ ಪಂಚಾಯ್ತಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ತಾ.ಪಂ. ಹಳ್ಳೂರ ಗ್ರಾ.ಪಂ. ಸ್ಥಳೀಯ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ, ಮಾಧವಾನಂದ ಯುವಕ ಸಂಘದ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾ ಯುವಜನ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಕಲೆಗಳನ್ನು ಉಳಿಸುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದರು.

ದಕ್ಷಿಣ ಕನ್ನಡದ ಯಕ್ಷಗಾನಕ್ಕೆ ದೊರೆಯುವಷ್ಟು ಮಾನ್ಯತೆಯು ಉತ್ತರ ಕರ್ನಾಟಕದ ಪಾರಿಜಾತ ಕಲೆಗೆ ದೊರೆಯದೆ ಇರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಪಾರಿಜಾತ ರಚಿಸಿದ ಗೋಕಾಕ ತಾಲ್ಲೂಕಿನ ಕುಲಿಗೋಡ ತಮ್ಮಣ್ಣ ಮತ್ತು ಕೌಜಲಗಿ ನಿಂಗಮ್ಮ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಚಾರ ದೊರೆಯಬೇಕಾಗಿದೆ ಎಂದರು.

ಯುವಕರನ್ನು ಸಂಘಟಿಸುವಲ್ಲಿ ಮತ್ತು ಗ್ರಾಮೀಣ ಕಲೆಗಳನ್ನು ಬೆಳೆಸುವಲ್ಲಿ ಯುವಜನ ಮೇಳಗಳ ವೇದಿಕೆಯು ಉಪಯುಕ್ತವಾಗಿದ್ದು, ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಯುವಕರ ತಂಡಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲಿ ಎಂದರು.

ಜಿ.ಪಂ. ಸದಸ್ಯ ಪ್ರಣಯ ವಿ. ಪಾಟೀಲ ಡೊಳ್ಳು ಬಾರಿಸುವ ಮೂಲಕ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು. ಯುವಜನ ಸೇವಾ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಎಸ್. ಕಣಬರಗಿ, ಜಿ.ಪಂ. ಮಾಜಿ ಸದಸ್ಯ ಶಂಕರಗೌಡ ಪಾಟೀಲ, ಬಸಗೌಡ ಪಾಟೀಲ ನಾಗನೂರ, ಜಿ.ಪಂ. ಸದಸ್ಯ ರಮೇಶ ಉಟಗಿ, ಕುಮಾ ಚೌಕಾಶಿ, ಹಾಸ್ಯ ಕಲಾವಿದ ರವಿ ಭಜಂತ್ರಿ ಮಾತನಾಡಿದರು.

ಜಿ.ಪಂ. ಸದಸ್ಯ ಮತ್ತು ಸಂಘಟನಾ ಅಧ್ಯಕ್ಷ ಭೀಮಶಿ ಮಗದುಮ್ ಪ್ರಾಸ್ತಾವಿಕ ಮಾತನಾಡಿ ಗ್ರಾಮೀಣ ಯುವಕರಲ್ಲಿ ಕಲೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಳ್ಳೂರ ಗ್ರಾಮದಲ್ಲಿ ಸಂಘಟಿಸಿದ್ದು, ಮೇಳದ ಯಶಸ್ಸಿಗೆ ಎಲ್ಲರ ಸಹಕಾರವನ್ನು ಸ್ಮರಿಸಿದರು.

ಸಾನ್ನಿಧ್ಯ ವಹಿಸಿದ್ದ ಸಿದ್ದಾರೂಢ ಮಠದ ವಿಶ್ವೇಶ್ವರನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ತಾ.ಪಂ. ಅಧ್ಯಕ್ಷೆ ಸತ್ತೆವ್ವ ಶಿರಗಾಂವಿ, ಜಿ.ಪಂ. ಸದಸ್ಯ ವಾಸುದೇವ ಸವತಿಕಾಯಿ, ತಾ.ಪಂ. ಸದಸ್ಯ ಮಲ್ಲಪ್ಪ ಪೂಜೇರಿ, ಎಂ.ಆರ್. ಭೋವಿ, ಎಂ.ಎನ್. ಮಾಳಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಬಸಪ್ಪ ಸಂತಿ, ಭೀಮಪ್ಪ ಛಬ್ಬಿ, ಸುರೇಶ ಕತ್ತಿ, ದುಂಡಪ್ಪ ಕತ್ತಿ, ಬಸವರಾಜ ಹಡಪದ, ಜಿಲ್ಲಾ ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಎಸ್.ಯು. ಜಮಾದಾರ ಮತ್ತಿತರು ಉಪಸ್ಥಿತರಿದ್ದರು.

ಶ್ರೀಶೈಲ ಬಾಗೋಡಿ ಸ್ವಾಗತಿಸಿದರು, ರಮೇಶ ಅಳಗುಂಡಿ, ಕರಿಬಸವ ಟಿ. ನಿರೂಪಿಸಿದರು, ಸಿದ್ದು ದುರದುಂಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT