ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಲೋಕದ ಧ್ರುವತಾರೆ ಬಾಳಪ್ಪ

Last Updated 14 ಸೆಪ್ಟೆಂಬರ್ 2011, 6:50 IST
ಅಕ್ಷರ ಗಾತ್ರ

ಮುರಗೋಡ (ಬೈಲಹೊಂಗಲ): ಜಾನಪದ ಕಲೆಯ ಮೂಲಕ ಗ್ರಾಮೀಣ ಸೊಗಡನ್ನು ಮನೆಮನೆಗೂ ತಲುಪಿಸಿದ ಶ್ರೇಯಸ್ಸು ಹುಕ್ಕೇರಿ ಬಾಳಪ್ಪ ಅವರಿಗೆ ಸಲ್ಲುತ್ತದೆ ಎಂದು ನೀಲಕಂಠ ಸ್ವಾಮೀಜಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಭಾರತ ಯಾತ್ರಾ ಕೇಂದ್ರ, ಧಾರವಾಡ ವಿದ್ಯಾವರ್ಧಕ ಸಂಘ ಹಾಗೂ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಮಹಾಂತೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಜಾನಪದ ಗಾರುಡಿಗ ಬಾಳಪ್ಪ ಹುಕ್ಕೇರಿ ಜನ್ಮ ಶತಮಾನೋತ್ಸವ ಅಂಗವಾಗಿ `ತತ್ವ ಪದಕಾರರ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜೋಗುಳ, ಬೀಸು ಕಲ್ಲಿನ ಪದಗಳು ಹಾಗೂ ರಂಗಭೂಮಿ, ಬಯಲಾಟ ಗೀತೆಗಳು ಸೇರಿದಂತೆ ಸ್ವಾತಂತ್ರ್ಯ ಜಾಗೃತಿ ಗೀತೆಗಳು ಬಾಳಪ್ಪನವರ ಹಾಡಿನ ಮೂಲವಾಗಿದ್ದವು. ಭಾಷೆ ಮೀರಿ ಜನಪದ ಲೋಕದಲ್ಲಿ ಬೆಳಗಿದ ಧ್ರುವತಾರೆಯಾಗಿ ಬೆಳಗಿದವರು ಬಾಳಪ್ಪ ಎಂದರು.

ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಬಾಳಪ್ಪನವರ ಸ್ಮರಣೆ ಮಾಡುವುದೇ ಒಂದು ಮಹತ್ಕಾರ್ಯವಾಗಿದ್ದು, ಅವರ ಪುತ್ಥಳಿ ಪ್ರತಿಷ್ಠಾಪಿಸಿ, ಜಾನಪದ ಉತ್ಸವ ನಿರಂತರವಾಗಿ ನಡೆಯುವಂತೆ ಎಲ್ಲರೂ ಸೇರಿ ಶ್ರಮಿಸೋಣ ಎಂದರು.

ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕೌಜಲಗಿ ಮಾತನಾಡಿದರು. ಶಾಸಕ ಚಂದ್ರಕಾಂತ ಬೆಲ್ಲದ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಅಶೋಕ ಶೆಟ್ಟರ, ಶಂಕ್ರಯ್ಯ ಮಲ್ಲಯ್ಯನವರ, ಸಿದ್ದು ಹುಕ್ಕೇರಿ, ಡಾ.ಬಾಳಣ್ಣ ಶೀಗಿಹಳ್ಳಿ, ಪ್ರೊ.ವಿ.ಎಸ್.ಮಾಳಿ, ಡಾ.ಶ್ರೀಶೈಲ ಹುದ್ದಾರ, ಪ್ರಕಾಶ ಅರಳೀಕಟ್ಟಿ ಉಪಸ್ಥಿತರಿದ್ದರು.

ಜಾನಪದ ಅಕಾಡೆಮಿ  ಅಧ್ಯಕ್ಷ ಗೋ.ರು. ಚೆನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ ವಂದಿಸಿದರು.

ಸದ್ಭಾವನಾ ದಿನಾಚರಣೆ
ಮ.ಬೆಳವಡಿ (ಬೈಲಹೊಂಗಲ): ಈಶಪ್ರಭು ಶಿಕ್ಷಣ ಸಂಸ್ಥೆಯ ಪಿ.ಬಿ.ಪಾಟೀಲ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ (ಡಿ.ಇಡಿ) ಕೋಮು ಸೌಹಾರ್ದ ಪಾಕ್ಷಿಕ ಹಾಗೂ ಸದ್ಭಾವನಾ ದಿನಾಚರಣೆ ಇತ್ತೀಚೆಗೆ ಆಚರಿಸಲಾಯಿತು.

ಸಂಸ್ಥೆಯ ಚೆರಮನ್ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಎಂ.ಪಿ.ಉಪ್ಪಿನ ಮಾತನಾಡಿ, ವ್ಯಕ್ತಿತ್ವ ವಿಕಸನದ ಜೊತೆಗೆ ಭಾರತೀಯರೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಉಪನ್ಯಾಸಕರಾದ ಸಿ.ಎಸ್.ಆನಿಕಿವಿ, ಬಿ.ಎನ್.ಕುರಕುರೆ, ಕು.ಎಂ.ಎಂ. ತುರಮರಿ, ವಿ.ಎಸ್.ಅಂಗಡಿ ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

ರಶ್ಮಿ ಹೊಂಗಲ ಪ್ರತಿಜ್ಞಾವಿಧಿ ಬೋಧಿಸಿದರು. ಸಂತೋಷ ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಉಳ್ಳಿಗೇರಿ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT