ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಸಂಸ್ಕೃತಿ ಉಳಿಸಲು ಸಲಹೆ

Last Updated 16 ಫೆಬ್ರುವರಿ 2011, 10:35 IST
ಅಕ್ಷರ ಗಾತ್ರ

ಕೋಲಾರ: ಪಾಶ್ಚಾತ್ಯ ಸಂಸ್ಕೃತಿಯ ಆರ್ಭಟದ ನಡುವೆ ಜಾನಪದ ಸಂಸ್ಕೃತಿ ಉಳಿಸುವ ಕಡೆಗೆ ಯುವ ಸಮುದಾಯ ದಿಟ್ಟ ಹೆಜ್ಜೆ ಇಡಬೇಕು ಎಂದು ಜಾನಪದ ಗಾಯಕ ಮುನಿರೆಡ್ಡಿ ಅಭಿಪ್ರಾಯಪಟ್ಟರು.ನಗರದ ಆದಿಮ ಸಾಂಸ್ಕೃತಿಕ ಸಂಘಟನೆ ಆವರಣದಲ್ಲಿ ಬೆಂಗಳೂರಿನ ಆರ್‌ಪಿಎ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ ಏರ್ಪಡಿಸಿರುವ ವಿಶೇಷ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಂಗಳವಾರ ಅವರು ಜಾನಪದ ಗೀತೆಗಳ ಬಗ್ಗೆ ಮಾತನಾಡಿದರು.

‘ಗ್ರಾಮೀಣ ಸಮುದಾಯದ ಬದುಕನ್ನು ಹಿಡಿದಿಟ್ಟಿರುವ ಜಾನಪದ ಗೀತೆ ಹಾಡುವುದನ್ನು ರೂಢಿಸಿಕೊಳ್ಳಬೇಕು. ಜಾನಪದ ಗೀತೆಗಳ ಒಂದೊಂದೂ ಸಾಲು ವಿಶಿಷ್ಟ ಬದುಕಿನ ಕಥನವೇ ಆಗಿದೆ. ಜಾನಪದ ಗೀತೆಗಳನ್ನು ಜೀವಂತವಾಗಿರಿಸಿದರೆ ಜಾನಪದ ಸಂಸ್ಕೃತಿಯನ್ನೇ ರಕ್ಷಿಸಿದಂತೆ ಎಂದರು.ಶಿಬಿರಾಧಿಕಾರಿ ಟಿ.ಗೋವಿಂದರಾಜು, ಆರ್‌ಪಿಎ ಕಾಲೇಜಿನ ಕನ್ನಡ ಉಪನ್ಯಾಸಕ ದೇವರಾಜ್, ಗ್ರಂಥಪಾಲಕ ಸೋಮಶೇಖರ್, ನಗರದ ಬಾಲಕರ ಸರ್ಕಾರಿ ಕಾಲೇಜು ಕನ್ನಡ ವಿಭಾಗದ ಉಪನ್ಯಾಸಕ ರುದ್ರೇಶ್ ಬಿ ಅದರಂಗಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಸುಷ್ಮಾ, ಆಸಿಫ್ ಶಿಬಿರದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಆಶಿಕ್ ನಿರೂಪಿಸಿದರು. ಅಶ್ವಥಿ ವಂದಿಸಿದರು. 

ಇಂದು ಸಂವಾದ:

ಶಿಬಿರದ ನಾಲ್ಕನೇ ದಿನವಾದ ಬುಧವಾರ ವಿ.ಎಸ್.ಎಸ್.ಶಾಸ್ತ್ರಿ ಅವರೊಡನೆ ಸಂವಾದ ನಡೆಯಲಿದೆ. ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಇತಿಹಾಸ ಪ್ರಾಧ್ಯಾಪಕ ಡಾ.ಜಿ.ಶಿವಪ್ಪ ಉಪನ್ಯಾಸ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT