ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಸಂಸ್ಕೃತಿ ಕಣ್ಮರೆ: ವಿಷಾದ

Last Updated 15 ಫೆಬ್ರುವರಿ 2012, 5:20 IST
ಅಕ್ಷರ ಗಾತ್ರ

ಹಾಸನ: `ಗ್ರಾಮೀಣ ಭಾಗದಲ್ಲೇ ಜಾನಪದ ಸಂಸ್ಕೃತಿ ಕಣ್ಮರೆಯಾಗುತ್ತಿದ್ದು, ಯುವಕರು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ತೆಗೆದುಕೊ ಳ್ಳಬೇಕು~ ಎಂದು ಎ.ವಿ.ಕೆ. ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಎಚ್.ಎಲ್. ಮಲ್ಲೇಶಗೌಡ ನುಡಿದರು.

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಾಸನ ತಾಲ್ಲೂಕಿನ ಕೆಂಚಟ್ಟಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.

`ನಮ್ಮ ಗ್ರಾಮೀಣ ಜಾನಪದ ಸಂಸ್ಕೃತಿಯ ಪ್ರತೀಕವಾಗಿದ್ದ ಹಲವು ಆಚರಣೆಗಳು ಒಂದೊಂದಾಗಿ ಕಣ್ಮರೆ ಯಾಗುತ್ತಿವೆ. ಇಂಥ ಆಚರಣೆಗಳು ನಮ್ಮ ದೇಶದ ಪರಂಪರೆಯನ್ನು ಬಿಂಬಿಸುತ್ತವೆ. ಆದರೆ ಇಂದಿನ ಜನಾಂಗ ಇದಕ್ಕೆ ಬೆಲೆ ಕೊಡದಿರುವುದು ವಿಶಾದದ ಸಂಗತಿ. ಇಂಥ ಶ್ರೀಮಂತ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಜವಾಬ್ದಾರಿ ಜಗ್ರಾಮೀಣ ಜನರು ಮತ್ತು ಯುವಜನತೆಯ ಮೇಲಿದೆ~ ಎಂದರು.

ಮಹಿಳಾ ಕಾಳೇಜಿನ ಎನ್.ಎಸ್.ಎಸ್. ಅಧಿಕಾರಿ ಎಂ.ಕೆ. ಮಹೇಶ್  ಮಾತನಾಡಿ, `ಮನುಷ್ಯ ಎಷ್ಟೇ ಮುಂದುವರಿದರೂ ಸನಾತನ ಸಂಸ್ಕೃತಿಯನ್ನು ಬಿಡಬಾರದು. ಮಾಧ್ಯ ಮಗಳ ಭರಾಟೆಯಿಂದ ಇಂದು ನಮ್ಮ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ~ ಎಂದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವೈದ್ಯರು ಗ್ರಾಮದ ಸಾರ್ವಜನಿಕರು ಹಾಗೂ ಎನ್‌ಎಸ್‌ಎಸ್ ಶಿಬಿರಾರ್ಥಿಗಳ ಉಚಿತ ಆರೋಗ್ಯ ತಪಾಸಣೆ ನಡೆಸಿದರು.

ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಎನ್. ನಿರ್ವಾಣಿಗೌಡ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಾದ ಲಕ್ಷ್ಮೀಕಾಂತ್, ವೇದಮೂರ್ತಿ, ದಿಲೀಪ್ ಕುಮಾರ್ ಎಚ್.ಕೆ, ಮಂಜೇಗೌಡ ಹಾಗೂ ಗ್ರಾಮದ ಕುಮಾರ್, ಅಣ್ಣಾಜಿಗೌಡ, ಸ್ವಾಮಿ, ಶಿವು ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT