ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಸಂಸ್ಕೃತಿ ರಕ್ಷಿಸಿ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮಾಗಡಿ: `ಸಾಂಸ್ಕೃತಿಕ ಕಲೆಗಳ ಮೂಲ ನೆಲೆಯಾಗಿರುವ ಜಾನಪದ ಸಂಸ್ಕೃತಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ~ ಎಂದು ಪ್ರಾಂಶುಪಾಲ ಕೆ.ಉಮೇಶ್ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಬಿ.ಜಿ.ಎಸ್ ವಿಜ್ಞಾನ ಪ.ಪೂ ಕಾಲೇಜು ಆವರಣದಲ್ಲಿ ನಡೆದ `ಜಾನಪದ ಸಾಂಸ್ಕೃತಿಕ~ ಉತ್ಸವದಲ್ಲಿ ವಿದ್ಯಾರ್ಥಿನಿಯರು ಬಿಡಿಸಿರುವ ರಂಗೋಲಿ ವೀಕ್ಷಿಸಿ ಮಾತನಾಡಿದರು. `ಪ್ರಕೃತಿಯೊಡನೆ ಬದುಕುತ್ತಿರುವ ಗ್ರಾಮೀಣ ಮಕ್ಕಳು ಅವುಗಳನ್ನು ಉಳಿಸುವ ಜೊತೆಗೆ ಜಾನಪದ ಕಲೆಗಳಾದ ರಂಗೋಲಿ, ಗೋಲಿ ಗಜ್ಜುಗ, ಅಟ್ಟುಗುಣಿ, ಚಿತ್ರಕಲೆಯಂತಹ ಚಟುವಟಿಕೆಗಳನ್ನು  ಮುಂದುವರಿಸಬೇಕು.
 
ಶಿಷ್ಟ ಕಲೆಗಳ ಮೂಲ ಸ್ವರೂಪವಾಗಿರುವ ಜನಪದದಲ್ಲಿ ಸುಗ್ಗಿ ಕುಣಿತಕ್ಕೆ ತನ್ನದೇ ಆದ ಲಯಬದ್ಧತೆಗಳಿವೆ~ ಎಂದು ಪ್ರಾಂಶುಪಾಲರು ತಿಳಿಸಿದರು. ಉಪನ್ಯಾಸಕರಾದ ಸುನಿಲ್‌ಕುಮಾರ್, ನಂದಿನಿ.ಸಿ, ಶಿವಕುಮಾರ್.ಎಸ್, ಮಂಜುನಾಥ್, ಜೈದೀಪ್.ಎನ್ ಜನಪದ ಕಲೆಗಳ ಬಗ್ಗೆ ಮಾತನಾಡಿದರು. ಶಶಿಕಲಾ.ಟಿ.ಎಸ್, ಪ್ರಸನ್ನಕುಮಾರ್, ಜಯಶಂಕರ್, ವನಜಾಕ್ಷಿ, ಸವಿತಾ ಜನಪದ ವೀರ ಗೀತೆಗಳಲ್ಲಿ ಬರುವ ಸಾಂಸ್ಕೃತಿಕ ವೀರರಾದ ಮಲೆಮಹದೇಶ್ವರಸ್ವಾಮಿ, ಮಂಟೇಸ್ವಾಮಿ, ಜುಂಜಪ್ಪ, ಕಾಟಮಲಿಂಗ, ಚಿಕ್ಕಣ್ಣಸ್ವಾಮಿ, ಅಟ್ಟಿಲಕ್ಕಮ್ಮ ಕುರಿತಾದ ಜನಪದ ಕಥನ, ಕಾವ್ಯಗಳನ್ನು ಕುರಿತು ಮಾತನಾಡಿದರು.

ಸ್ಪರ್ಧೆಗಳು: ರಂಗೋಲಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಬಿ.ಆರ್.ಹೇಮಲತಾ, ಮಮತಾಶ್ರೀ, ಮೇಘನಾ.ಸಿ, ಮೀನಾಕ್ಷಿ, ಸಂಗೀತ, ಚೈತ್ರ, ದೀಪಿಕಾ, ವಸುಂದರಾರಾಜ್, ಕುಸುಮ, ಅಂಜಲಿ ಪಾಲ್ಗೊಂಡಿದ್ದರು. ಕಾಲೇಜು ಅಂಗಳದಲ್ಲಿ ಬಣ್ಣಬಣ್ಣದ  ರಂಗೋಲಿಯನ್ನು ಬಿಡಿಸಿದರು.

ಚಿತ್ರಕಲೆಯಲ್ಲಿ ಸಂತೋಷ್.ಎಂ.ಎನ್, ಶಶಿಧರ್, ಗಿರೀಶ್ ಭಾಗವಹಿಸಿದ್ದರು.  ದೀಪಾ.ಆರ್, ಅಶ್ವಿನಿ, ನಿತ್ಯಾ.ಕೆ.ಎಚ್, ಸಚಿನ್, ಭಾನುಪ್ರಿಯ ಭಾವಗೀತೆಗಳನ್ನು ಹಾಡಿದರು. ಅಶ್ವಿನಿ, ನಿತ್ಯ, ಚೈತ್ರ, ನಯನ ಜನಪದ ಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT