ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಜಾರ್ಜ್' ಮೇಲೆ ಬೆಟ್ಟಿಂಗ್

ವಿಲಿಯಮ್ಸ-ಕೇಟ್ ದಂಪತಿ ಪುತ್ರನಿಗೆ ನಾಮಕರಣ: ಬಿಸಿ ಚರ್ಚೆ
Last Updated 23 ಜುಲೈ 2013, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ರಾಜಕುಮಾರ ವಿಲಿಯಮ್ಸ ಮತ್ತು ಕೇಟ್ ಮಿಡ್ಲ್‌ಟನ್ ದಂಪತಿಗೆ ಜನಿಸಿರುವ ಗಂಡು ಮಗುವಿಗೆ ನಾಮಕರಣ ಮಾಡುವ ವಿಚಾರ ಈಗ ಬ್ರಿಟನ್‌ನಲ್ಲಿ ಬಿಸಿ ಬಿಸಿ ಚರ್ಚೆಯ ವಿಷಯವಾಗಿದೆ.

ಮುಗುವಿಗೆ ಹೆಸರಿಡುವ ವಿಚಾರದಲ್ಲಿ ಭಾರಿ ಬೆಟ್ಟಿಂಗ್ ನಡೆಯುತ್ತಿದೆ. ಆರಂಭದಲ್ಲಿ ವಿಲಿಯಮ್ಸ ದಂಪತಿಗೆ ಹುಟ್ಟುವ ಮಗು ಹೆಣ್ಣೋ ಅಥವಾ ಗಂಡೋ ಎಂಬ ಬೆಟ್ಟಿಂಗ್ ನಡೆದಿತ್ತು.

ಹೆಚ್ಚಿನ ಬುಕ್ಕಿಗಳು `ಜಾರ್ಜ್' ಎಂಬ ಹೆಸರಿನ ಮೇಲೆ ಒಲವು ತೋರಿದ್ದಾರೆ. ಈಗ ಜನಿಸಿದ ಮಗುವಿನ ಮುತ್ತಜ್ಜನ ಹೆಸರು `ಜಾರ್ಜ್-6' ಆಗಿರುವುದರಿಂದ ಬುಕ್ಕಿಗಳು ಆ ಹೆಸರಿನ ಮೇಲೆ ಒಲವು ವ್ಯಕ್ತಪಡಿಸಿದ್ದಾರೆ. `ಜಾರ್ಜ್' ಹೊರತಾಗಿ `ಜೇಮ್ಸ', `ಲೂಯಿಸ್' `ಹೆನ್ರಿ' ಎಂಬ ಹೆಸರುಗಳು ಕೂಡ ಬುಕ್ಕಿಗಳ ನಡುವೆ ಚಾಲ್ತಿಯಲ್ಲಿವೆ.

ಶುಭಾಶಯಗಳ ಸುರಿಮಳೆ: ಕೇಟ್ ಗಂಡು ಮಗುವಿಗೆ ಜನ್ಮ ನೀಡಿದ ಸುದ್ದಿ ತಿಳಿಯುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮೆರಾನ್, ಆಸ್ಟ್ರೇಲಿಯಾ ಪ್ರಧಾನಿ ಕೆವಿನ್ ರುಡ್  ಸೇರಿದಂತೆ ಜಗತ್ತಿನ ಹಲವು ಗಣ್ಯರು ರಾಜ ದಂಪತಿಗೆ ಶುಭಾಶಯ ಕೋರಿದ್ದಾರೆ.

ಅಜ್ಜ, ಅಪ್ಪ, ಮೊಮ್ಮಗ ಜೊತೆಗೆ: ಕೇಟ್ ಅವರು ಗಂಡು ಮಗುವಿಗೆ ಜನ್ಮ ನೀಡಿರುವ ಹಿನ್ನೆಲೆಯಲ್ಲಿ ಬ್ರಿಟನ್ ರಾಜಮನೆತನದ ಇತಿಹಾಸದಲ್ಲಿ 1894ರ ನಂತರ ಅಂದರೆ, 119 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮೂರು ಪೀಳಿಗೆಯನ್ನು ಒಟ್ಟಿಗೆ ಕಾಣುವಂತಾಗಿದೆ.

ರಾಜಕುಮಾರ ಚಾರ್ಲ್ಸ್, ಅವರ ಪುತ್ರ ವಿಲಿಯಮ್ಸ ಮತ್ತು ಈಗ ಜನಿಸಿರುವ ವಿಲಿಯಮ್ಸ ಪುತ್ರ ಬ್ರಿಟನ್ ಅರಸೊತ್ತಿಗೆಯ ನೇರ 3ನೇ ಪೀಳಿಗೆ.

2,013 ಬೆಳ್ಳಿ ನಾಣ್ಯ: ವಿಲಿಯಮ್ಸ ಮತ್ತು ಕೇಟ್ ಅವರಿಗೆ ಮಗು ಜನಿಸಿದ ದಿನದಂದೇ ಹುಟ್ಟಿದ 2,013 ಅದೃಷ್ಟಶಾಲಿ ಮಕ್ಕಳಿಗೆ ಬ್ರಿಟನ್ ರಾಜಮನೆತನ ಬೆಳ್ಳಿ ನಾಣ್ಯಗಳನ್ನು ಉಡುಗೊರೆಯಾಗಿ ನೀಡಲಿದೆ.

ಬ್ರಿಟನ್‌ನಲ್ಲಿ ಸಂತಸದ ಹೊನಲು
ರಾಜಕುಮಾರ ವಿಲಿಯಮ್ಸ ಪತ್ನಿ ಕೇಟ್ ಮಿಡ್ಲ್‌ಟನ್ ಗಂಡು ಮಗುವಿಗೆ ಜನ್ಮ ನೀಡಿರುವುದರಿಂದ ರಾಜಮನೆತನ ಸೇರಿದಂತೆ ಇಡೀ ಬ್ರಿಟನ್‌ನಾದ್ಯಂತ ಸಂತಸ ಮನೆ ಮಾಡಿದೆ. ಜನಿಸಿರುವ ಭವಿಷ್ಯದ ರಾಜನನ್ನು ನೋಡುವುದಕ್ಕಾಗಿ ಸಾವಿರಾರು ಜನರು ಸೇಂಟ್ ಮೇರಿ ಆಸ್ಪತ್ರೆಯತ್ತ ದೌಡಾಯಿಸುತ್ತಿದ್ದ ದೃಶ್ಯ ಮಂಗಳವಾರ ಕಂಡುಬಂತು. 31 ವರ್ಷದ ಕೇಟ್ ಅವರು ಕೇಂದ್ರ ಲಂಡನ್ನಿನಲ್ಲಿರುವ ಸೇಂಟ್ ಮೇರಿ ಆಸ್ಪತ್ರೆಯಲ್ಲಿ ಸೋಮವಾರ ಸ್ಥಳೀಯ ಕಾಲಮಾನ ಸಾಯಂಕಾಲ 4.24ಕ್ಕೆ 3.8 ಕೆ.ಜಿ. ತೂಕವಿದ್ದ  ಗಂಡು ಮಗುವಿಗೆ ಜನ್ಮ ನೀಡ್ದ್ದಿದರು.

ಭಾರತೀಯ ವೈದ್ಯನ ಸೇವೆ
ಕೇಟ್ ಅವರ ಪ್ರಸವದ ಸಂದರ್ಭದಲ್ಲಿ ವೈದ್ಯಕೀಯ ಸೇವೆ ಒದಗಿಸುತ್ತಿದ್ದ ತಂಡದಲ್ಲಿ ಭಾರತ ಮೂಲದ ವೈದ್ಯರೊಬ್ಬರು ಇದ್ದರು.
ಮುಂಬೈ ಮೂಲದ ಡಾ. ಸುನೀತ್ ಗೊಡಂಬೆ ಅವರು ಸೇಂಟ್ ಮೇರಿ ಆಸ್ಪತ್ರೆಯಲ್ಲಿ ನವಜಾತಶಿಶುಗಳ ತಜ್ಞರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT