ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲಹಳ್ಳಿ: ವೈದ್ಯಾಧಿಕಾರಿ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ

Last Updated 2 ಜನವರಿ 2012, 8:05 IST
ಅಕ್ಷರ ಗಾತ್ರ

ಜಾಲಹಳ್ಳಿ: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆರ್.ಎಸ್. ಹುಲಮನಿಯರ ಮೇಲೆ ಸೂಕ್ತ ಕ್ರಮ ಕೈಗೋಳ್ಳಬೇಕೆಂದು ಮಾಜಿ ತಾಲ್ಲೂಕು ಪಂಚಾಯತ ಸದಸ್ಯರಾದ ಹನುಮಂತರಾಯ ಪಾಟೀಲ್ ಬಿಆರ್ ಗುಂಡ ಆಗ್ರಹಿಸಿದ್ದಾರೆ.  

 ಈಚೆಗೆ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಡಾ. ಹುಲಮನಿಯವರು ಇತ್ತೀಚೆಗೆ ಸಾರ್ವಜನಿಕರ ಜೊತೆಗೆ ಅಸಬ್ಯವಾಗಿ ನಡೆದುಕೊಳ್ಳುತ್ತಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ರೋಗಿಗಳಿಗೆ ಹೆದರಿಸುವದು ಮತ್ತು ದೈಹಿಕವಾಗಿ ಹಲ್ಲೆ ಮಾಡುವದು ಹೆಚ್ಚಾಗುತ್ತಿದೆ. ಇದರಿಂದ ರೋಗಿಗಳು ಆಸ್ಪತ್ರೆಗೆ ಹೋಗಲು ಭಯ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು. 

 ಖಾಯಿಲೆ ಬಂದು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋದ ಬಿ.ಆರ್.ಗುಂಡ ಗ್ರಾಮದ ಮಹಿಳೆ ತಿಮ್ಮವ್ವ ಗಂಡ ಶಿವಪ್ಪ ನಾಯಕ ಎಂಬ ಮಹಿಳೆಗೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಅದೇ ರೀತಿ ಶಿವಪ್ಪ ತಂದಿ ಗುಂಡಪ್ಪ ಹರಿಜನ ಎನ್ನುವರಿಗೆ ಅವ್ಯಾಚ ಶಬ್ದಗಳಿಂದ ಬೈದು ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ. ಇವು ಎರಡು ಘಟನೆಗಳು ಉದಾರಣೆ ಮಾತ್ರ ಇಂತಹ ಘಟನೆಗಳು ನೂರಾರು ಆಗಿವೆ. ಮೇಲಿಂದ ಮೇಲೆ ಈ ರೀತಿ ಘಟನೆಗಳು ಸಂಭವಿಸುತ್ತಿದ್ದು.
ಯಾವುದಕ್ಕು ಮೇಲಾಧಿಕಾರಿಗಳು ಡಾ.ಹುಲಮನಿಯವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹಳ್ಳಿಗಳಿಂದ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಹಣ ಪಡೆಯತ್ತಿದ್ದು ಅಲ್ಲದೇ ಔಷಧಗಳನ್ನು ಹೊರಗಡೆ ಬರೆಯುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಇದು ಸರಕಾರಿ ಆಸ್ಪತ್ರೆಯೋ ಅಥವಾ ಖಾಸಗಿ ಆಸ್ಪತ್ರೆಯೋ ಎನ್ನುವ ಅನುಮಾನಗಳು ಬರುತ್ತಿವೆ ಎಂದು ಅವರು ಹೇಳಿದರು.

ಕೂಡಲೇ ಆಸ್ಪತ್ರೆಗೆ ಬರುವ ರೋಗಿಗಳ ಜೊತೆ ಮತ್ತು ಸಾರ್ವಜನಿಕರ ಜೊತೆ ಅಸಬ್ಯವಾಗಿ ನಡೆದುಕೊಳ್ಳುವ ಡಾ.ಹುಲಮನಿಯವರ ಮೇಲೆ ಸೂಕ್ತ ಕ್ರಮ ಕೈಗೋಳ್ಳಬೇಕು ಹಾಗೂ ಅವರನ್ನು ವರ್ಗಾವಣೆ ಮಾಡಿ ಬೇರೆ ವೈದ್ಯರನ್ನು ನಿಯೋಜಿಸಬೇಕು ಎಂದು ಅವರು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮುಂಖಡರಾದ ಜಗನ್ನಾಥರಾಯ ಪಾಟೀಲ್, ಗಾಣದಾಳ ತಾ.ಪಂ. ಸದಸ್ಯರಾದ ಪಿಡ್ಡೆಗೌಡ, ಅಮರೇಶ ಬಿ.ಆರ್. ಗುಂಡ, ಭೂತಪ್ಪ ದೇವರಮನಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT