ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾವಾ ಕಾರ್ಮಿಕರಿಗೆ ಹಣ ನೀಡಲು ಆಗ್ರಹ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಐಡಿಯಲ್ ಜಾವಾ ಕಾರ್ಖಾನೆಯ ಕಾರ್ಮಿಕರಿಗೆ ಸೇರಬೇಕಾದ ಹಣವನ್ನು ಕೂಡಲೇ ನೀಡಬೇಕು~ ಎಂದು ಐಡಿಯಲ್ ಜಾವಾ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ಮಲ್ಲರಾಜೇ ಅರಸ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, `ಇರಾನಿ ಕುಟುಂಬದ ಒಳ ಜಗಳದಿಂದಾಗಿ ಜಾವಾ ಕಂಪನಿಯು ಮುಚ್ಚಲ್ಪಟ್ಟು ಕಾರ್ಮಿಕರು ಬೀದಿಗೆ ಬರುವಂತಾಯಿತು~ ಎಂದು ಹೇಳಿದರು.

`ಐಡಿಯಲ್ ಜಾವಾ ಕಾರ್ಖಾನೆಯನ್ನು  ರೋಗಗ್ರಸ್ಥ ಕಾರ್ಖಾನೆ ಎಂದು 1996ರಲ್ಲಿ ಮುಚ್ಚಿ 27 ಕೋಟಿ 70 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ.  ಅದರಲ್ಲಿ ಕಾರ್ಮಿಕರಿಗೆ ಸೇರಬೇಕಾದ ಹಣವನ್ನು ನಾಲ್ಕು ಕಂತುಗಳಲ್ಲಿ ನೀಡುತ್ತೇವೆ ಎಂದು ಹೇಳಿದ್ದರೂ ಹಣ ಮಾತ್ರ ಕಾರ್ಮಿಕರಿಗೆ ಸೇರಿಲ್ಲ~ ಎಂದು ತಿಳಿಸಿದರು.

ಹಾಗೆಯೇ, `ಮೈಸೂರಿನ ಮಹಾರಾಜರಿಂದ ಜಾವಾ ಕಾರ್ಖಾನೆ ನಿರ್ಮಿಸಲು 28 ಎಕರೆ ಜಮೀನನ್ನು ನೀಡಿರುತ್ತಾರೆ. ಇದರ ಅರ್ಧ ಭಾಗದಲ್ಲಿ  ಅಪಾರ್ಟ್‌ಮೆಂಟ್ ಕಟ್ಟಿ  ಇನ್ನರ್ಧ ಜಾಗವನ್ನು ಪುಟ್‌ಬಾಲ್ ಮೈದಾನಕ್ಕೆ ಬಿಟ್ಟಿರುತ್ತಾರೆ. ಇದು ಕಾನೂನು ಭಾಹಿರವಾಗಿದ್ದು ಈ ಜಾಗವನ್ನು ಮಾರಿ ಕಾರ್ಮಿಕರಿಗೆ ಹಣ ನೀಡಬೇಕು~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT