ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ-24: ಭಾರತಕ್ಕೆ ಅಧ್ಯಕ್ಷತೆ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಅಭಿವೃದ್ಧಿಶೀಲ ದೇಶಗಳ `ಜಿ-24~ ಗುಂಪಿನ ಅಧ್ಯಕ್ಷತೆಯು ಮೂರು ದಶಕಗಳ ನಂತರ ಈಗ ಭಾರತಕ್ಕೆ ದೊರೆಯುತ್ತಿದೆ.

ವಾಷಿಂಗ್ಟನ್‌ನಲ್ಲಿ ಇದೇ 22ರಂದು ನಡೆಯಲಿರುವ  ಅಭಿವೃದ್ಧಿ ಹೊಂದುತ್ತಿರುವ 24 ದೇಶಗಳ ಸಭೆಯ ಅಂತ್ಯದಲ್ಲಿ ಭಾರತ ಈ  ಗೌರವಕ್ಕೆ ಪಾತ್ರವಾಗಲಿದೆ. ದಕ್ಷಿಣ ಆಫ್ರಿಕಾದ ಹಣಕಾಸು ಸಚಿವ ಪಿ. ಜೆ. ಗೋರ್ಧನ್ ಅವರು ಪ್ರಣವ್ ಮುಖರ್ಜಿ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ(ಐಎಂಎಫ್) ಸಭೆಯ ಜತೆಯಲ್ಲಿಯೇ `ಜಿ-24~ ದೇಶಗಳ ಸಭೆಯೂ ನಡೆಯಲಿದೆ. ಈ ಗುಂಪಿನ ದೇಶಗಳ ಮಧ್ಯೆ ಬಾಂಧವ್ಯ ಕುದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.ಈ ಗುಂಪು 1971ರಲ್ಲಿ  ಅಸ್ತಿತ್ವಕ್ಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT