ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಆರ್‌ಇ: ಮುಂಬೈ ಅಶ್ವಿನಿಯ ಅಂಕ ದಾಖಲೆ

Last Updated 3 ಏಪ್ರಿಲ್ 2013, 17:49 IST
ಅಕ್ಷರ ಗಾತ್ರ

ಮುಂಬೈ (ಐಎಎನ್‌ಎಸ್): ಅಮೆರಿಕದ ಬಹುತೇಕ ಹಾಗೂ ಇತರ ದೇಶಗಳ ಪದವಿ ಕಾಲೇಜುಗಳ ಪ್ರವೇಶಕ್ಕೆ ಪೂರ್ವಾರ್ಹತೆ ಪಡೆಯಲು ನಡೆಸಲಾಗುವ ಗ್ರ್ಯಾಜುಯೇಟ್ ರೆಕಾರ್ಡ್ ಎಕ್ಸಾಮಿನೇಷನ್ (ಜಿಆರ್‌ಇ)ನಲ್ಲಿ ಮುಂಬೈ ಅಂಧೇರಿಯ ಸರ್ದಾರ್ ಪಟೇಲ್ ತಾಂತ್ರಿಕ ಸಂಸ್ಥೆಯ 20 ವರ್ಷದ ಅಶ್ವಿನಿ ನೆನೆ 340 ಅಂಕಕ್ಕೆ 340 ಅಂಕ ಗಳಿಸುವ ಮೂಲಕ ಅಗ್ರ ಸ್ಥಾನ ಗಳಿಸಿದ್ದಾಳೆ.

ವಿಶ್ವದಾದ್ಯಂತ ಈ ಪರೀಕ್ಷೆ ನಡೆಸುವ ಅಮೆರಿಕ ಮೂಲದ ಶೈಕ್ಷಣಿಕ ಪರೀಕ್ಷಾ ಸೇವಾ ಸಂಸ್ಥೆ ಬುಧವಾರ ಫಲಿತಾಂಶಗಳನ್ನು ಪ್ರಕಟಿಸಿದ್ದು ನೂರಕ್ಕೆ ನೂರು ಅಂಕಗಳನ್ನು ಪಡೆದ ವಿಶ್ವದ ಕೆಲವೇ ಕೆಲ ವಿದ್ಯಾರ್ಥಿಗಳಲ್ಲಿ ಅಶ್ವಿನಿ ಸಹ ಒಬ್ಬಳು ಎಂದು ತಿಳಿಸಿದೆ. ಈ ವರ್ಷ ಜಿಆರ್‌ಇ ಪರೀಕ್ಷೆ ಪಠ್ಯಕ್ರಮ ಪರಿಷ್ಕರಿಸಲಾಗಿರುವುದರ ಜತೆಯಲ್ಲಿ ತುಂಬ ಕಠಿಣವಾಗಿತ್ತು.

`ಎಂತಹ ಪ್ರಶ್ನೆ ಕೇಳಲಾಗುತ್ತದೆ ಎನ್ನುವುದನ್ನು ನಿರೀಕ್ಷಿಸುವುದು ಕಷ್ಟವಾಗಿತ್ತು. ಆದರೂ 340 ರ ಹತ್ತಿರ ಅಂಕ ಗಳಿಸುವ ವಿಶ್ವಾಸವಂತೂ ಇತ್ತು. ಅಮೆರಿಕದ ಅತ್ಯುತ್ತಮ ವಿಶ್ವವಿದ್ಯಾಲಯಕ್ಕೆ ಸೇರಿಕೊಳ್ಳುವ ಮೂಲಕ ನನ್ನ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವೆ' ಎಂದು ಅಶ್ವಿನಿ ಹೇಳಿದಳು.

ಮುಂಬೈ ಹೊರವಲಯದ ವಿಲೆ ಪಾರ್ಲೆಯ ಸಂಸ್ಥೆಯೊಂದರಲ್ಲಿ ಅಶ್ವಿನಿ ಪಾಲಕರು ತಾಂತ್ರಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT