ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಎಆರ್: ಶೋಮ್ ಸಮಿತಿ ವರದಿ ಸಲ್ಲಿಕೆ

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ತೆರಿಗೆ ತಪ್ಪಿಸುವ ಪ್ರವೃತ್ತಿ ತಡೆ ಸಾಮಾನ್ಯ ನಿಯಮಕ್ಕೆ (ಜಿಎಎಆರ್) ಸಂಬಂಧಿಸಿದಂತೆ ಪಾರ್ಥಸಾರಥಿ ಶೋಮ್ ಅಧ್ಯಕ್ಷತೆಯ ತಜ್ಞರ  ಸಮಿತಿ ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವ  ಪಿ.ಚಿದಂಬರಂ ಅವರಿಗೆ ಅಂತಿಮ ವರದಿ ಸಲ್ಲಿಸಿದೆ.

`ಶೋಮ್ ಸಮಿತಿ~ ನೀಡಿರುವ ಶಿಫಾರಸು ಪರಿಶೀಲಿಸಿ ಮುಂದಿನ 20 ದಿನಗಳಲ್ಲಿ `ಜಿಎಎಆರ್~ಗೆ ಸಂಬಂಧಿಸಿದ ನಿಯಮಗಳನ್ನು ಅಂತಿಮಗೊಳಿಸಲಾಗುವುದು. ಇದಕ್ಕೂ ಮುನ್ನ ಹೂಡಿಕೆದಾರರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಚಿದಂಬರಂ ಹೇಳಿದರು.

`ಜಿಎಎಎಆರ್~ ನಿಯಮ ಅಂತಿಮಗೊಂಡ ನಂತರ ಅಗತ್ಯವೆನಿಸಿದರೆ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದರು.ಹಿಂದಿನ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು 2012-13ನೇ ಸಾಲಿನ ಬಜೆಟ್‌ನಲ್ಲಿ `ಜಿಎಎಆರ್~ ಪ್ರಸ್ತಾಪಿಸಿದ್ದರು.

ಆದರೆ, ಇದಕ್ಕೆ ಹೂಡಿಕೆದಾರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.  ಈ ನಿಟ್ಟಿನಲ್ಲಿ ತೆರಿಗೆ ತಜ್ಞ `ಪಾರ್ಥಸಾರಥಿ ಶೋಮ್ ಸಮಿತಿ~ಯನ್ನು ಜುಲೈನಲ್ಲಿ ರಚಿಸಿದ್ದ ಪ್ರಧಾನಿ ಮನಮೋಹನ್ ಸಿಂಗ್, ದೇಶಿ ಮತ್ತು ವಿದೇಶಿ ಹೂಡಿಕೆದಾರರಿಗೆ `ಜಿಎಎಆರ್~ ಕುರಿತು ಕೆಲವು ಭಿನ್ನ ಅಭಿಪ್ರಾಯಗಳಿದ್ದು, ಅವನ್ನು ಬಗೆಹರಿಸುವುದಕ್ಕೆ ಸಂಬಂಧಿಸಿ ವರದಿ ನೀಡುವಂತೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT