ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಎಂ ಗ್ರಾಹಕ ಸಂಖ್ಯೆ 67 ಕೋಟಿ!

Last Updated 29 ಮೇ 2012, 19:30 IST
ಅಕ್ಷರ ಗಾತ್ರ

ಕಳೆದ ಏಪ್ರಿಲ್‌ನಲ್ಲಿ ದೇಶದ `ಜಿಎಸ್‌ಎಂ~(ಗ್ಲೋಬಲ್ ಸಿಸ್ಟಂ ಫಾರ್ ಮೊಬೈಲ್ ಕಮ್ಯುನಿಕೇಷನ್) ಸೇವಾ ವ್ಯಾಪ್ತಿಗೆ 65ಲಕ್ಷ ಗ್ರಾಹಕರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಇದರಲ್ಲಿ ಸಿಂಹಪಾಲು ಏರ್‌ಟೆಲ್‌ಗೆ. 20 ಲಕ್ಷ ಗ್ರಾಹಕರು ಏರ್‌ಟೆಲ್ ಜಾಲಕ್ಕೆ ಬಂದಿದ್ದು, ಅದರ ಒಟ್ಟು ಚಂದಾದಾರರ ಸಂಖ್ಯೆ 18.33 ಕೋಟಿಗೆ ಏರಿದೆ ಎಂದು ಭಾರತೀಯ ಮೊಬೈಲ್ ದೂರವಾಣಿ ಸೇವಾ ಸಂಸ್ಥೆಗಳ ಒಕ್ಕೂಟ(ಸಿಒಎಐ) ಹೇಳಿದೆ.

ಏಪ್ರಿಲ್ ಅಂತ್ಯಕ್ಕೆ ದೇಶದ ಒಟ್ಟು `ಜಿಎಸ್‌ಎಂ~ ಬಳಕೆದಾರರ ಸಂಖ್ಯೆ 67.05 ಕೋಟಿ ದಾಟಿದೆ. ಇದೇ ಅವಧಿಯಲ್ಲಿ ದೇಶದ 3ನೇ ಅತಿ ದೊಡ್ದ ದೂರವಾಣಿ ಸೇವಾ ಸಂಸ್ಥೆ ವೊಡಾಫೋನ್ 8.1 ಲಕ್ಷ ಚಂದಾದಾರರನ್ನು ಹೊಸದಾಗಿ ಸೇರ್ಪಡೆಮಾಡಿಕೊಂಡಿದ್ದು, ಅದರ ಒಟ್ಟು ಗ್ರಾಹಕರ ಸಂಖ್ಯೆ 15.13 ಕೋಟಿಗೆ ಹೆಚ್ಚಿದೆ. 

`ಟ್ರಾಯ್~ ಅಂಕಿ-ಅಂಶ ಪ್ರಕಾರ ಮಾರ್ಚ್ ಅಂತ್ಯಕ್ಕೆ ದೇಶದ ಒಟ್ಟು ಮೊಬೈಲ್ ಚಂದಾದಾರರ ಸಂಖ್ಯೆ (`ಜಿಎಸ್‌ಎಂ~ ಮತ್ತು `ಸಿಡಿಎಂಎ~ ಸೇರಿ) 91.90 ಕೋಟಿಗೆ ಏರಿದೆ.         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT