ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಎಂ ಗ್ರಾಹಕರ ಸಂಖ್ಯೆ 67.44ಕೋಟಿ

Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಜಿಎಎಸ್‌ಎಂ ಚಂದಾದಾರರ ಸಂಖ್ಯೆ ಆಗಸ್ಟ್‌ನಲ್ಲಿ 17.8 ಲಕ್ಷದಷ್ಟು ಏರಿಕೆ ಕಂಡಿದ್ದು ಒಟ್ಟು ಬಳಕೆದಾರರ ಸಂಖ್ಯೆ 67.44 ಕೋಟಿ ದಾಟಿದೆ ಎಂದು ಭಾರತೀಯ ಮೊಬೈಲ್‌ ದೂರವಾಣಿ ಸೇವಾ ಸಂಸ್ಥೆಗಳ ಒಕ್ಕೂಟ (ಸಿಒಎಐ) ಹೇಳಿದೆ.

ಜುಲೈ ಅಂತ್ಯಕ್ಕೆ ದೇಶದಲ್ಲಿ 67.26 ಕೋಟಿ ‘ಜಿಎಸ್‌ಎಂ’ ಚಂದಾದಾ­ರರಿದ್ದರು. ಆಗಸ್ಟ್‌ನಲ್ಲಿ ಏರ್‌ಸೆಲ್‌ ಕಂಪೆನಿ ತನ್ನ ಸೇವಾ ವ್ಯಾಪ್ತಿಗೆ ಹೊಸದಾಗಿ 8.76 ಲಕ್ಷ ಬಳಕೆದಾರರನ್ನು ಸೇರಿಸಿ­ಕೊಂಡು ಒಟ್ಟು ಸಂಖ್ಯೆಯನ್ನು 6.26 ಕೋಟಿಗೆ ಹೆಚ್ಚಿಸಿಕೊಂಡಿದೆ. ಏರ್‌ಟೆಲ್‌ ಚಂದಾದಾರರ ಸಂಖ್ಯೆ  8.33 ಲಕ್ಷದಷ್ಟು ಹೆಚ್ಚಿದ್ದು, ಒಟ್ಟು ಸಂಖ್ಯೆ 19.22 ಕೋಟಿಗೇರಿದೆ. ಏರ್‌ಟೆಲ್‌ ಮಾರುಕಟ್ಟೆ ಪಾಲು ಸಹ ಶೇ 28.50ಕ್ಕೆ ಜಿಗಿದಿದೆ. 

ಐಡಿಯಾ ಸೆಲ್ಯುಲರ್‌ ಗ್ರಾಹಕರ ಸಂಖ್ಯೆ 7.52 ಲಕ್ಷದಷ್ಟು ಹೆಚ್ಚಿದ್ದು 12.60 ಕೋಟಿಗೆ ಏರಿಕೆ ಕಂಡಿದೆ. ವೊಡಾ­ಫೋನ್‌ ತನ್ನ ಸೇವಾ ವ್ಯಾಪ್ತಿಗೆ ಹೊಸದಾಗಿ 85 ಸಾವಿರ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದೆ. ಕಂಪೆನಿ ಶೇ 22.88ರಷ್ಟು ಮಾರುಕಟ್ಟೆ ಪಾಲು ಕಾಯ್ದುಕೊಂಡಿದ್ದು ಒಟ್ಟಾರೆ ಗ್ರಾಹಕರ ಸಂಖ್ಯೆ 15.43 ಕೋಟಿ ದಾಟಿದೆ. ವಿಡಿಯೊ­ಕಾನ್‌ 1.58 ಲಕ್ಷ ಗ್ರಾಹಕ­ರನ್ನು ಹೊಸದಾಗಿ ಗಳಿಸಿಕೊಂಡಿದ್ದು, ಬಳಕೆ ದಾರರ ಸಂಖ್ಯೆ 29.29 ಲಕ್ಷಕ್ಕೇರಿದೆ.

ಯುನಿನಾರ್‌  5 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದು, ಚಂದಾದಾರರ ಸಂಖ್ಯೆ ಆಗಸ್ಟ್ ಅಂತ್ಯಕ್ಕೆ 3.22 ಕೋಟಿಗೆ ತಗ್ಗಿದೆ. ‘ಎಂಟಿಎನ್‌ಎಲ್‌’ ಗ್ರಾಹಕರ ಸಂಖ್ಯೆಯೂ 2.48 ಲಕ್ಷದಷ್ಟು ತಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT