ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿಗೆ ವಿರೋಧ.

Last Updated 11 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ  ಜಾರಿಗೆ ಸಂಬಂಧಿಸಿದಂತೆ ಸಂವಿಧಾನ ತಿದ್ದುಪಡಿಯ ಕೇಂದ್ರ ಸರ್ಕಾರದ ಹೊಸ ಕರಡು ಪ್ರಸ್ತಾವನೆಗೆ ಬಿಜೆಪಿ ಆಡಳಿತಾರೂಢ ರಾಜ್ಯ ಸರ್ಕಾರಗಳು ಮತ್ತೆ ವಿರೋಧ ವ್ಯಕ್ತಪಡಿಸಿವೆ.ಸಂವಿಧಾನ ತಿದ್ದುಪಡಿಯ ಈ ಮೂರನೇ ಕರಡು ಪ್ರಸ್ತಾವನೆಯಲ್ಲಿ, ‘ಜಿಎಸ್‌ಟಿ ಮಂಡಳಿ’ ರಚಿಸುವ ಅಧಿಕಾರವನ್ನು ಸಂಸತ್ತಿಗೆ ನೀಡಲಾಗಿದೆ. ಈ ಕ್ರಮಕ್ಕೆ ಬಿಜೆಪಿ ಸರ್ಕಾರ ಇರುವ ರಾಜ್ಯಗಳು ವಿರೋಧ ದಾಖಲಿಸಿದ್ದು, ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳು ಬೆಂಬಲ ವ್ಯಕ್ತಪಡಿಸಿವೆ.ಕೇಂದ್ರ ಸರ್ಕಾರದ ಹೊಸ ಕರಡು ಪ್ರಸ್ತಾವನೆಯು ಪ್ರತಿಗಾಮಿಯಾಗಿದ್ದು, ವಿತ್ತೀಯ ಒಕ್ಕೂಟ ವ್ಯವಸ್ಥೆಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಗುಜರಾತ್‌ನ ಹಣಕಾಸು ಸಚಿವ ಸೌರಭ್ ಪಟೇಲ್ ಟೀಕಿಸಿದ್ದಾರೆ.

ರಾಷ್ಟ್ರಪತಿಗಳ ಆದೇಶದ ಬದಲಿಗೆ ಸಂಸತ್ತಿಕ ಕಾಯ್ದೆ ಮೂಲಕ ‘ಜಿಎಸ್‌ಟಿ ಮಂಡಳಿ’ ರಚಿಸಲು ಹೊಸ ಕರಡು ಪ್ರಸ್ತಾವನೆಯಲ್ಲಿ ಉದ್ದೇಶಿಸಲಾಗಿದೆ. ಈ ಮಂಡಳಿಯು ಪರೋಕ್ಷ ತೆರಿಗೆಗಳ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಸಲಹೆ ನೀಡಲಿದೆ.ಹಲವಾರು ಪರೋಕ್ಷ ತೆರಿಗೆಗಳು ರಾಜ್ಯಗಳ ಮತ್ತು ಕೆಲ ತೆರಿಗೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರಲಿರುವುದರಿಂದ  ಸಂವಿಧಾನ ತಿದ್ದುಪಡಿಯ ಅಗತ್ಯ ಇದೆ.ಸಂಪೂರ್ಣ ನಷ್ಟ ಭರ್ತಿ: ಕೇಂದ್ರೀಯ ಮಾರಾಟ ತೆರಿಗೆ (ಸಿಎಸ್‌ಟಿ) ಪ್ರಮಾಣ ಇಳಿಸಿದ್ದರಿಂದ ರಾಜ್ಯಗಳಿಗೆ ಆಗುವ ನಷ್ಟವನ್ನು ಪೂರ್ಣವಾಗಿ ತುಂಬಿಕೊಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. 2010-11ನೇ ಸಾಲಿನಲ್ಲಿ  ‘ಸಿಎಸ್‌ಟಿ’ `14,000 ಕೋಟಿಗಳಷ್ಟು ಇರುವ  ಅಂದಾಜು ಮಾಡಲಾಗಿದೆ ಎಂದು ರಾಜ್ಯ ಹಣಕಾಸು ಸಚಿವರ ಸಮಿತಿ ಅಧ್ಯಕ್ಷ ಅಸೀಮ್ ದಾಸ್‌ಗುಪ್ತಾ ತಿಳಿಸಿದ್ದಾರೆ.

ಸಮಿತಿ ಸದಸ್ಯರು ಶುಕ್ರವಾರ ಇಲ್ಲಿ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಆ ಸಂದರ್ಭದಲ್ಲಿ ನಷ್ಟ ಭರ್ತಿಯ ಬಗ್ಗೆ ಪ್ರಣವ್ ಅವರು ಭರವಸೆ ನೀಡಿದರು. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ  ಸಂಚರಿಸುವ ಸರಕುಗಳ ಮೇಲೆ ‘ಸಿಎಸ್‌ಟಿ’ ವಿಧಿಸಲಾಗುತ್ತಿದೆ. ಕಳೆದ ಕೆಲ ವರ್ಷಗಳಿಂದ ಇದು ಇಳಿಕೆಯಾಗುತ್ತಿದ್ದು ಸದ್ಯಕ್ಕೆ ಶೇ 2ರಷ್ಟು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT