ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಗಳೂರು ಕಾಲೇಜು ಸಮಗ್ರ ಚಾಂಪಿಯನ್

Last Updated 12 ಅಕ್ಟೋಬರ್ 2012, 8:25 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿಯ ಶ್ರೀ ಸತ್ಯಸಾಯಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ವಿಜಾಪುರದ ಮಹಿಳಾ ವಿ.ವಿ. ಕಳೆದ ಅ 9ರಿಂದ ಆಯೋಜಿಸಿದ್ದ ಅಂತರ್ ಕಾಲೇಜು ಯುವಜನೋತ್ಸವ ದಲ್ಲಿ ನಗರದ ಶ್ರೀಮತಿ ಕೆ.ಎಸ್.ಜಿಗಳೂರು ಕಲಾ ಹಾಗೂ ವಾಣಿಜ್ಯ ಕಾಲೇಜು ಎಲ್ಲ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಪಡೆಯಿತು.

ಮೊದಲ ರನ್ನರ್ ಅಪ್ ಆಗಿ ಹುಬ್ಬಳ್ಳಿಯ ಎಸ್‌ಜೆಎಂವಿಎಸ್ ಮಹಿಳಾ ಕಾಲೇಜು ಹಾಗೂ ಎರಡನೇ ರನ್ನರ್ ಅಪ್ ಆಗಿ ಆತಿಥೇಯ ಸತ್ಯಸಾಯಿ ಮಹಿಳಾ ಗೃಹ ವಿಜ್ಞಾನ ಕಾಲೇಜು ಆಯ್ಕೆಯಾಯಿತು.

ಚಾಂಪಿಯನ್ ಪ್ರಶಸ್ತಿ ಪಡೆದಿದ್ದರಿಂದ ಸಹಜವಾಗಿಯೇ ಉತ್ಸಾಹದ ಬುಗ್ಗೆಯಾಗಿದ್ದ ಜಿಗಳೂರು ಮಹಿಳಾ ಕಾಲೇಜಿನ ಅಂದದ ವಿದ್ಯಾರ್ಥಿನಿಯರು ಪ್ರಶಸ್ತಿ ಪಡೆದ ಬಳಿಕ ವೇದಿಕೆಯಲ್ಲೇ ನೃತ್ಯ ಮಾಡಿ ಸಂತಸ ಹಂಚಿಕೊಂಡರು.

ಸ್ಪರ್ಧೆಗಳ ಫಲಿತಾಂಶ:
ಸಂಗೀತ: ವಿ.ಜಿ.ಮಹಿಳಾ ಕಾಲೇಜು ಗುಲ್ಬರ್ಗ (ಪ್ರಥಮ), ಶ್ರೀ ಸತ್ಯಸಾಯಿ ಮಹಿಳಾ ಗೃಹ ವಿಜ್ಞಾನ ಕಾಲೇಜು (ರನ್ನರ್); ನೃತ್ಯ: ಕೆ.ಎಸ್.ಜಿಗಳೂರು ಮಹಿಳಾ ಕಾಲೇಜು ಧಾರವಾಡ, ವಿ.ಜಿ. ಮಹಿಳಾ ಕಾಲೇಜು, ಗುಲ್ಬರ್ಗ ಹಾಗೂ ರಾಜ ರಾಜೇಶ್ವರಿ ಮಹಿಳಾ ಕಾಲೇಜು, ರಾಣೆಬೆನ್ನೂರು (ಚಾಂಪಿಯನ್), ಎಸ್‌ಜೆಎಂವಿಎಸ್ ಮಹಿಳಾ ಕಾಲೇಜು ಹುಬ್ಬಳ್ಳಿ (ರನ್ನರ್); ಸಾಹಿತ್ಯಿಕ ಸ್ಪರ್ಧೆಗಳು: ಎಸ್‌ಜೆಎಂವಿಎಸ್ ಮಹಿಳಾ ಕಾಲೇಜು (ಚಾಂಪಿಯನ್), ಶ್ರೀ ಸತ್ಯಸಾಯಿ ಮಹಿಳಾ ಗೃಹ ವಿಜ್ಞಾನ ಕಾಲೇಜು (ರನ್ನರ್); ನಾಟಕ ವಿಭಾಗ: ಕೆ.ಎಸ್.ಜಿಗಳೂರು ಮಹಿಳಾ ಕಾಲೇಜು (ಚಾಂಪಿಯನ್), ಶ್ರೀ ಸತ್ಯಸಾಯಿ ಮಹಿಳಾ ಗೃಹ ವಿಜ್ಞಾನ ಕಾಲೇಜು (ರನ್ನರ್); ಲಲಿತ ಕಲೆ: ಕೆ.ಎಸ್.ಜಿಗಳೂರು ಮಹಿಳಾ ಕಾಲೇಜು (ಚಾಂಪಿಯನ್), ಎಸ್‌ಜೆಎಂವಿಎಸ್ ಮಹಿಳಾ ಕಾಲೇಜು (ರನ್ನರ್).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT