ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ತಗ್ಗಿಸಿದ ಐಎಂಎಫ್

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ದೇಶದ ಆರ್ಥಿಕ ಪ್ರಗತಿ ಮುನ್ನೋಟವನ್ನು ಶೇ 6ರಿಂದ ಶೇ 5ಕ್ಕೆ ತಗ್ಗಿಸಿದೆ.

`ಐಎಂಎಫ್~ನ  `ಜಾಗತಿಕ ಆರ್ಥಿಕ ವರದಿ~ ಮಂಗಳವಾರ ಪ್ರಕಟಗೊಂಡಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ `ಜಿಡಿಪಿ~ ಶೇ 5ರಷ್ಟು ಇರುವುದಾಗಿ ಹೇಳಿದೆ.

ಜಾಗತಿಕ ಆರ್ಥಿಕ ಅಸ್ಥಿರತೆ, ಗರಿಷ್ಠ ಬಡ್ಡಿದರ  ಮತ್ತು ರಾಜಕೀಯ ಬಿಕ್ಕಟ್ಟುಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ದೇಶದಲ್ಲಿ ಹೂಡಿಕೆ ಪ್ರಮಾಣ ಗಣನೀಯವಾಗಿ ತಗ್ಗಿದೆ.

ಪರಿಣಾಮವಾಗಿ ಎಲ್ಲ ನಿರೀಕ್ಷೆಗಳೂ ತಲೆಕೆಳಗಾಗಿಸಿದಂತೆ ವಿತ್ತೀಯ ಕೊರತೆ ಅಂತರ ಹೆಚ್ಚಿದೆ. ಇದು ದೇಶದ ಒಟ್ಟಾರೆ ಪ್ರಗತಿ ಮೇಲೆ ಪರಿಣಾಮ ಬೀರಿದೆ ಎಂದು ಗಮನ ಸೆಳೆದಿದೆ.  ಒಟ್ಟಾರೆ ಜಾಗತಿಕ `ಜಿಡಿಪಿ~ ಹಿಂದಿನ ವರ್ಷದ ಶೇ 3.6ರಿಂದ ಶೇ 3.3ಕ್ಕೆ ಕುಸಿಯಲಿದೆ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT