ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ:ಆರ್‌ಬಿಐ ಆತಂಕ

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಜಾಗತಿಕ ಸಂಗತಿಗಳು ಪ್ರತಿಕೂಲವಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದಾಜಿಸಲಾಗಿರುವ ಶೇ 8ರಷ್ಟು ವೃದ್ಧಿ ದರದ ಗುರಿಯನ್ನು (ಜಿಡಿಪಿ) ತಲುಪುವುದು ಕಷ್ಟ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ವೃದ್ಧಿ ದರದ ಸರಾಸರಿ ಕಾಯ್ದುಕೊಳ್ಳುವಲ್ಲಿ ತೀವ್ರ ಒತ್ತಡ ಕಂಡುಬರುತ್ತಿದೆ. ಆಹಾರ ಹಣದುಬ್ಬರ ದರವೂ ಗರಿಷ್ಠ ಮಟ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಕಳೆದ ಜುಲೈನಲ್ಲಿ ಅಂದಾಜಿಸಲಾಗಿರುವ ವಾರ್ಷಿಕ ವೃದ್ಧಿ ದರದ ಗುರಿ ಕಷ್ಟವಾಗಬಹುದು. ಈಗಾಗಲೇ ವೃದ್ಧಿ ದರ ಕುಸಿಯುವ ಸೂಚನೆಗಳು ಕಂಡುಬರತೊಡಗಿವೆ ಎಂದು ಹೇಳಿದೆ.
ಕಳೆದ ಹಣಕಾಸು ವರ್ಷದಲ್ಲಿ ಶೇ 8.5ರಷ್ಟು ವೃದ್ಧಿ ದರ ದಾಖಲಿಸಲಾಗಿತ್ತು. ಆದರೆ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ `ಜಿಡಿಪಿ~ ಶೇ 7.7ಕ್ಕೆ ಕುಸಿತ ಕಂಡಿದೆ. ಇದು ಕಳೆದ 18 ತಿಂಗಳಲ್ಲಿ ಗರಿಷ್ಠ ಕುಸಿತ. ಕೈಗಾರಿಕಾ ಉತ್ಪಾದನೆಯೂ ಕಳೆದ 21 ತಿಂಗಳ ಹಿಂದಿನ ಮಟ್ಟಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT